For Quick Alerts
  ALLOW NOTIFICATIONS  
  For Daily Alerts

  ಡಿಎನ್ಎ ಪರೀಕ್ಷೆಗೆ ನೋ ಎಂದ ತಮಿಳು ನಟ ಧನುಷ್!

  By Bharath Kumar
  |

  ತಮಿಳು ನಟ ಧನುಷ್ ನನ್ನ ಮಗನೆಂದು ಹೇಳಿ ದಂಪತಿಗಳು ಸಲ್ಲಿಸಿದ್ದ ಅರ್ಜಿ ದಿನದಿಂದ ದಿನಕ್ಕೆ ವಿವಿದ ಆಯಾಮಗಳನ್ನ ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ವಿಚಾರಣೆ ಮಾಡಿದ್ದ ಮದ್ರಾಸ್ ಹೈ ಕೋರ್ಟ್, ಧನುಷ್ ಅವರ ಡಿಎನ್ಎ ಪರೀಕ್ಷೆ ಮಾಡಿಸುವಂತೆ ಎಂದು ಸೂಚನೆ ಕೊಟ್ಟಿತ್ತು.[ನಕಲಿ ಅಪ್ಪ-ಅಮ್ಮನಿಗೆ ಬಲಿಯಾದೆ: ತಮಿಳು ನಟ ಧನುಷ್]

  ಆದ್ರೆ, ನಟ ಧನುಷ್ ಅವರು ಡಿಎನ್ಎ ಪರೀಕ್ಷೆಗೆ ಒಳಪಡಲು ನಕಾರವೆತ್ತಿದ್ದಾರೆ. ''ನಾನೂ ಏನೂ ಮುಚ್ಚಿಡುತ್ತಿಲ್ಲ. ಸುಳ್ಳು ಮೊಕದ್ದಮೆಗಳನ್ನ ಹೂಡುವ ಜನರಿಗಾಗಿ ನನ್ನ ಖಾಸಗಿತನವನ್ನ ಪರೀಕ್ಷಿಸಿಕೊಳ್ಳಲು ಸಾಧ್ಯವಿಲ್ಲ'' ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಪ್ರಕರಣದ ಪೂರ್ತಿ ವಿವರವನ್ನ ಮುಂದೆ ಓದಿ.....

  ಡಿಎನ್ಎ ಟೆಸ್ಟ್ ಗೆ ಧನುಷ್ ನಕಾರ!

  ಡಿಎನ್ಎ ಟೆಸ್ಟ್ ಗೆ ಧನುಷ್ ನಕಾರ!

  ಮದ್ರಾಸ್ ಹೈ ಕೋರ್ಟ್ ನೀಡಿದ್ದ ಸೂಚನೆಯನ್ನ ನಟ ಧನುಷ್ ತಿರಸ್ಕರಿಸಿದ್ದಾರೆ. ಡಿಎನ್ಎ ಟೆಸ್ಟ್ ಮಾಡಿಸಲು ಸಾಧ್ಯವಿಲ್ಲವೆಂದು ಕೋರ್ಟ್ ಗೆ ತಿಳಿಸಿದ್ದಾರೆ.

  ಧನುಷ್ ಕೊಟ್ಟ ಕಾರಣವೇನು?

  ಧನುಷ್ ಕೊಟ್ಟ ಕಾರಣವೇನು?

  ''ನಾನೂ ಏನೂ ಮುಚ್ಚಿಡುತ್ತಿಲ್ಲ. ಸುಳ್ಳು ಮೊಕದ್ದಮೆಗಳನ್ನ ಹೂಡುವ ಜನರಿಗಾಗಿ ನನ್ನ ಖಾಸಗಿತನವನ್ನ ಪರೀಕ್ಷಿಸಿಕೊಳ್ಳಲು ಸಾಧ್ಯವಿಲ್ಲ'' ಎಂದು ಧನುಷ್ ತಿಳಿಸಿದ್ದಾರೆ ಎಂದು ಧನುಷ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

  ಡಿಎನ್ಎ ಪರೀಕ್ಷೆಗೆ ಮನವಿ ಸಲ್ಲಿಸಿದ್ದ ದಂಪತಿ!

  ಡಿಎನ್ಎ ಪರೀಕ್ಷೆಗೆ ಮನವಿ ಸಲ್ಲಿಸಿದ್ದ ದಂಪತಿ!

  ನಟ ಧನುಷ್ ಗೆ ಡಿಎನ್ಎ ಪರೀಕ್ಷೆ ಮಾಡಿಸುವಂತೆ ಮದ್ರಾಸ್ ಹೈಕೋರ್ಟ್ ಗೆ ದಂಪತಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನ ವಿಚಾರಣೆ ಮಾಡಿದ ಕೋರ್ಟ್, ನಟ ಧನುಷ್ ಅವರಿಗೆ ಡಿಎನ್ಎ ಟೆಸ್ಟ್ ಮಾಡಿಸುವಂತೆ ಸೂಚನೆ ಕೊಟ್ಟಿತ್ತು.

  ದೇಹದ ಮಚ್ಚೆ ಅಳಿಸಿ ಹಾಕಿರುವ ಆರೋಪ!

  ದೇಹದ ಮಚ್ಚೆ ಅಳಿಸಿ ಹಾಕಿರುವ ಆರೋಪ!

  ಧನುಷ್ ಅವರ ದೇಹದಲ್ಲಿ ಹುಟ್ಟು ಮಚ್ಚೆಗಳಿವೆ ಎಂದು ದಂಪತಿಗಳು ಆರೋಪಿಸಿದ್ದರು. ಕೋರ್ಟ್ ಸೂಚನೆಯಂತೆ ಧನುಷ್ ಅವರನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ದಂಪತಿ ಹೇಳಿದಂತೆ ಯಾವುದೇ ಮಚ್ಚೆ ಇರಲಿಲ್ಲ. ಆದ್ರೆ, ಲೇಸರ್ ತಂತ್ರಜ್ಞಾನದ ಮೂಲಕ ಮಚ್ಚೆಗಳನ್ನ ಅಳಿಸಿ ಹಾಕಿರುವ ಸಾಧ್ಯತೆಯಿದೆ ಎಂದು ವೈದ್ಯರ ವರದಿ ಸಲ್ಲಿಕೆಯಾಗಿತ್ತು. ಈ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿತ್ತು.

  ಮೇಲೂರಿನ ದಂಪತಿಯ ವಾದವೇನು?

  ಮೇಲೂರಿನ ದಂಪತಿಯ ವಾದವೇನು?

  ಮಧುರೈ ಮೇಲೂರು ನಿವಾಸಿಗಳಾದ ಆರ್‌.ಕದಿರೇಸನ್ (60 ವರ್ಷ) ಮತ್ತು ಕೆ.ಮೀನಾಕ್ಷಿ (55 ವರ್ಷ) ಎಂಬುವರು ನಟ ಧನುಷ್ ತಮ್ಮ ಹಿರಿಯ ಮಗ, ಅವನು ಚಿತ್ರರಂಗ ಸೇರಿದ ಮೇಲೆ ನಮ್ಮನ್ನು ಮರೆತು ಬಿಟ್ಟಿದ್ದಾನೆ, ತಾವು ತುಂಬಾ ಕಷ್ಟದಲ್ಲಿದ್ದು, ಆತನಿಂದ ಸಹಾಯ ಕೊಡಿಸುವಂತೆ ದಂಪತಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಮೇಲೂರಿನ ದಂಪತಿಗಳು ಧನುಷ್ ಅವರ ಚಿಕ್ಕ ವಯಸ್ಸಿನ ಫೋಟೋಗಳು ಎನ್ನಲಾಗುತ್ತಿರುವ ಎರಡು ಭಾವಚಿತ್ರಗಳನ್ನ ನ್ಯಾಯಾಲಯದ ಮುಂದಿಟ್ಟಿದ್ದರು.

  ಇದು ಸುಳ್ಳು ಎಂದು ವಾದಿಸುತ್ತಿರುವ ಧನುಷ್!

  ಇದು ಸುಳ್ಳು ಎಂದು ವಾದಿಸುತ್ತಿರುವ ಧನುಷ್!

  ನನ್ನ ಮೊದಲ ಹೆಸರು ವೆಂಕಟೇಶ್ ಪ್ರಭು. 2003 ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ ನಂತರ ಧನುಷ್ ಕೆ.ರಾಜಾ ಎಂದು ಬದಲಾಯಿತು. ನಾನೊಬ್ಬ ಗೌರವಾನ್ವಿತ ನಟನಾಗಿದ್ದು, ಎಗ್ಮೋರೆಯ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ಜುಲೈ 28, 1983 ರಲ್ಲಿ ಜನಿಸಿದ್ದೇನೆ. ಕೃಷ್ಣಮೂರ್ತಿ ಮತ್ತು ವಿಜಯಲಕ್ಷ್ಮಿ ನನ್ನ ತಂದೆತಾಯಿ. ಇವರು ಯಾರೆಂದು ಗೊತ್ತಿಲ್ಲ, ನನ್ನನ್ನ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡುತ್ತಿದ್ದರು.

  English summary
  Actor Dhanush told the Madras HC that he will not agree to the plea for a DNA test. A couple had filed a maintenance case claiming to be Dhanush's biological parents. The actor said his integrity should not be tested at the instance of people who file cases.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X