For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ಚಿತ್ರದಲ್ಲಿ ಪುನೀತ್ ಜೊತೆ ನಟಿಸಲು ನಿಮಗೊಂದು ಆಫರ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ 'ಯುವರತ್ನ' ಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ ಎಂಬ ಜಾಹೀರಾತು ನೀಡಲಾಗಿದೆ.

  'ರಾಜಕುಮಾರ' ಖ್ಯಾತಿಯ ಸಂತೋಷ್ ಆನಂದ್ ರಾಮ್ ನಿರ್ದೇಶನ ಮೂರನೇ ಸಿನಿಮಾ ಇದಾಗಿದ್ದು, ಹೊಸ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಆಡಿಷನ್ ಕರೆಯಲಾಗಿದೆ.

  'ಯುವರತ್ನ' ಚಿತ್ರದಲ್ಲಿ ಪುನೀತ್ ಗೆ ನಾಯಕಿ ಯಾರಾಗ್ತಾರೆ ಎಂದು ಲೆಕ್ಕಾಚಾರ ಹಾಕ್ತಿರುವಾಗಲೇ, ಸಹನಟರು ಬೇಕು ಎಂದು ಹೇಳಿರುವುದು ನೂತನ ಕಲಾವಿದರಿಗೆ ಲಾಡು ಬಂದು ಬಾಯಿಗೆ ಬಿದ್ದಂತಾಗಿದೆ.

  ಪುನೀತ್ ನಿಜ ವ್ಯಕ್ತಿತ್ವ ಏನು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ

  ಡಿಸೆಂಬರ್ 1 ರಂದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮಲ್ಲೇಶ್ವರಂನಲ್ಲಿ ಆಡಿಷನ್ ಕರೆಯಲಾಗಿದೆ. 16 ರಿಂದ 24 ವರ್ಷದ ವಯಸ್ಸಿನ ಪ್ರತಿಭೆಗಳಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅಥವಾ ಹೊಂಬಾಳೆ ಫಿಲ್ಮ್ ಬ್ಯಾನರ್ ಫೇಸ್ ಬುಕ್ ಅಥವಾ ಟ್ವಿಟ್ಟರ್ ಪೇಜ್ ನೋಡಿ.

  'ಬೆಟ್ಟದ ಹೂವು' ಸ್ಥಳಕ್ಕೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್

  ಅಂದ್ಹಾಗೆ, ಯುವರತ್ನ ಸಿನಿಮಾ ಯೂತ್ ಎಂಟರ್ ಟೈನಿಂಗ್ ಕಥೆ ಹೊಂದಿದ್ದು, ಈ ಸಿನಿಮಾದಲ್ಲಿ ಪುನೀತ್ ಕಾಲೇಜ್ ವಿದ್ಯಾರ್ಥಿಯಾಗಿ ನಟಿಸಲಿದ್ದಾರೆ. ಹೀಗಾಗಿ, ಯುವಕರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಇನ್ನುಳಿದಂತೆ ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಈ ಸಿನಿಮಾ ಬರ್ತಿದೆ.

  English summary
  Casting call from Yuvarathna team. December 1st it is for all the young folks. Grab the opportunity to star in the power star Puneeth Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X