»   » 'ಕಾವೇರಿ ಹಿಂಸಾಚಾರ'ದಲ್ಲಿ ಬಲಿಯಾದವರಿಗೆ ಅಣ್ಣಾವ್ರ ಮಕ್ಕಳ ಸಹಾಯ ಹಸ್ತ

'ಕಾವೇರಿ ಹಿಂಸಾಚಾರ'ದಲ್ಲಿ ಬಲಿಯಾದವರಿಗೆ ಅಣ್ಣಾವ್ರ ಮಕ್ಕಳ ಸಹಾಯ ಹಸ್ತ

Posted By:
Subscribe to Filmibeat Kannada

'ಅಣ್ಣಾವ್ರ' ಮಕ್ಕಳು ಅಂದ್ರೆನೇ ಹಾಗೆ, ಜನಸಾಮಾನ್ಯರಿಗೆ ಏನಾದ್ರೂ ತೊಂದರೆ ಆದ್ರೆ, ತಮ್ಮ ಕುಟುಂಬಕ್ಕೆ ತೊಂದರೆಯಾದಂತೆ ಭಾವಿಸುತ್ತಾರೆ. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಕೈಲಾದ ಮಟ್ಟಿಗೆ ಬಡವರಿಗೆ ಸಹಾಯ ಮಾಡುತ್ತಾರೆ.

ಅಂತೆಯೆ ಇದೀಗ ಕಾವೇರಿ ವಿವಾದದ, ಹಿಂಸಾಚಾರದಲ್ಲಿ ಅನ್ಯಾಯವಾಗಿ ಬಲಿಯಾದ ಬಡ ಕುಟುಂಬಗಳಿಗೆ ನಟ ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರತಂಡ ಸಹಾಯ ಹಸ್ತ ಚಾಚಿದ್ದಾರೆ.[ಮಾನವೀಯತೆ ಮೆರೆದ 'ನಾಗರಹಾವು' ನಿರ್ಮಾಪಕ ಸಾಜಿದ್ ಖುರೇಶಿ]

ಇನ್ನು 'ನಾಗರಹಾವು' ಚಿತ್ರತಂಡ ಕೂಡ ಕಾವೇರಿ ಗಲಭೆಯಲ್ಲಿ ಬಲಿಯಾದ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದರು. 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜೀದ್ ಖುರೇಷಿ ಅವರು ಸುಮಾರು ಎರಡು ಲಕ್ಷ ರೂಪಾಯಿ ಸಹಾಯ ಧನ ವಿತರಿಸಲು ನಿರ್ಧರಿಸಿದ್ದಾರೆ. ಮುಂದೆ ಓದಿ....

'ಟಗರು' ಚಿತ್ರತಂಡದಿಂದ ಸಹಾಯ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಟಗರು-ಮೈಯೆಲ್ಲಾ ಪೊಗರು' ಚಿತ್ರತಂಡ, ಕಾವೇರಿ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಉಮೇಶ್ ಕುಟುಂಬಕ್ಕೆ ಪರಿಹಾರ ಧನ ನೀಡಲು ನಿರ್ಧರಿಸಿದೆ.[ಉಮೇಶ್ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗಿ]

ನಿರ್ಮಾಪಕ ಕೆ.ಪಿ ಶ್ರೀಕಾಂತ್

'ಟಗರು' ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್, ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಇಡೀ 'ಟಗರು' ಚಿತ್ರತಂಡ, ಗುಂಡೇಟಿಗೆ ಬಲಿಯಾಗಿ ಮೃತಪಟ್ಟ ಉಮೇಶ್ ಅವರ ಕುಟುಂಬಸ್ಥರನ್ನು ಖುದ್ದಾಗಿ ಭೇಟಿ ಮಾಡಿ 50 ಸಾವಿರ ರೂಪಾಯಿ ನಗದನ್ನು ಹಸ್ತಾಂತರ ಮಾಡಲಿದ್ದಾರೆ.[ಉಮೇಶ್ ಕುಟುಂಬಕ್ಕೆ ಪರಿಹಾರ 10 ಲಕ್ಷ ರು.ಗೆ ಏರಿಕೆ]

ನಟ ಪುನೀತ್ ರಾಜ್ ಕುಮಾರ್

ಬೆಂಗಳೂರಿನ ಹೆಗ್ಗನಹಳ್ಳಿ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಅವರು, ಸೋಮವಾರ ಸಂಜೆ ಕೆಲಸ ಮುಗಿಸಿ ವಾಪಸಾಗುತ್ತಿದ್ದ ಸಂದರ್ಭ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು. ಬಡಕುಟುಂಬದವರಾದ ಉಮೇಶ್ ಅವರ ಪತ್ನಿಗೆ ಇದೀಗ ಪುನೀತ್ ರಾಜ್ ಕುಮಾರ್ ಕೂಡ ಸಹಾಯ ಮಾಡಿದ್ದಾರೆ.[ಯೋಗರಾಜ್ ಭಟ್ರು ಏನೋ ಅಂದ್ರು, ಅದನ್ನ ಸಿದ್ಧರಾಮಣ್ಣ ಕೇಳ್ಸೋಬೇಕಲ್ಲಾ?!]

50 ಸಾವಿರ ಧನ ಸಹಾಯ

ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಟ್ರಸ್ಟ್ ವತಿಯಿಂದ, ಮೃತ ಉಮೇಶ್ ಕುಟುಂಬಕ್ಕೆ, ಸುಮಾರು 50 ಸಾವಿರ ರೂಪಾಯಿ ಧನ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.[ಕಾವೇರಿ ಗಲಭೆ : ಕನ್ನಡ ಸಿನಿ ತಾರೆಯರ 'ಶಾಂತಿ' ಸಂದೇಶ]

ಚಂದ್ರಮೋಹನ್ ಗೂ ಸಹಾಯ

ಇನ್ನು ಕಾವೇರಿ ಗಲಭೆಯಲ್ಲಿ ಗಾಯಗೊಂಡ ಚಂದ್ರಮೋಹನ್ ಅವರ ಕುಟುಂಬಕ್ಕೂ, ಪುನೀತ್ ರಾಜ್ ಕುಮಾರ್ ತಮ್ಮ ಟ್ರಸ್ಟ್ ವತಿಯಿಂದ 50 ಸಾವಿರ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.[ಕಡೆಗೂ ಕಾವೇರಿ ಹೋರಾಟದ ಬಗ್ಗೆ ತುಟ್ಟಿ ಬಿಚ್ಚಿದ ಮಂಡ್ಯದ 'ಅಣ್ತಮ್ಮ' ಯಶ್]

ಬಡ ಕುಟುಂಬದ ಉಮೇಶ್

ಪೊಲೀಸರ ಗುಂಡಿಗೆ ಅನ್ಯಾಯವಾಗಿ ಬಲಿಯಾದ ಉಮೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕರೆ ತಾಲೂಕಿನ ಸಿಂಗೇನಹಳ್ಳಿಯವರು. ಅವರು ಬೆಂಗಳೂರಿನ ಹೆಗ್ಗನಹಳ್ಳಿ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಎರಡು ವರ್ಷದ ಹೆಣ್ಣು ಮಗುವಿದ್ದು, ಆತನ ಹೆಂಡತಿ ಸದ್ಯ ಆರು ತಿಂಗಳ ಗರ್ಭಿಣಿ.

English summary
Actor Shivarajkumar starrer 'Tagaru' team has come forward to help riot victim Umesh. Tagaru Movie producer KP Shrikanth will be donating Rs.50,000 to the victim's family. And Kannada Actor Puneeth Rajakumar is all set to donate 50 thousand rupees each to riot victims. Umesh, who works in a petrol pump died due to firing by police, which was trying to disperse unruly crowd. Fight for Cauvery has turned ugly in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada