For Quick Alerts
  ALLOW NOTIFICATIONS  
  For Daily Alerts

  ನಟಿ ರಾಗಿಣಿಯನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು

  |

  ಇಂದು ಬೆಳ್ಳಂಬೆಳಗ್ಗೆ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ರಾಗಿಣಿಯನ್ನು ವಶಕ್ಕೆ ಪಡೆದು, ಸಿಸಿಬಿ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ. ನಟಿ ರಾಗಿಣಿಗೆ ಡ್ರಗ್ಸ್ ಮಾಫಿಯಾದ ನಂಟಿದೆಯ ಎನ್ನುವ ಬಗ್ಗೆ ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.

  ರಾಗಿಣಿ ಮನೆಗೆ ಪೋಲೀಸರ ಎಂಟ್ರಿ | Filmibeat Kannada

  ಇಂದು ಬೆಳಗ್ಗೆ 6.30ಕ್ಕೆ ಸಿಸಿಬಿ ಅಧಿಕಾರಿಗಳು ರಾಗಿಣಿ ಮನೆಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಸುಮಾರು 4 ಗಂಟೆಗೂ ಅಧಿಕ ಸಮಯ ಪರಿಶೀಲನೆ ನಡೆಸಿದ ಅಧಿಕಾರಿಗಳು ಬಳಿಕ ರಾಗಿಣಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಬಳಿಕ ಅಧಿಕಾರಿಗಳು ರಾಗಿಣಿಗೆ ಸೇರಿದ 4 ಮೊಬೈಲ್, 2 ಲ್ಯಾಪ್ ಟಾಪ್ ಅನ್ನು ಸೀಜ್ ಮಾಡಿದ್ದಾರೆ.

  ಈಗಾಗಲೇ ಡ್ರಗ್ಸ್ ಜಾಲ ಪ್ರಕರಣ ಸಂಬಂಧ ನಟಿ ರಾಗಿಣಿ ಆಪ್ತ ರವಿಶಂಕರ್ ನನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರವಿಶಂಕರ್ ನೀಡಿದ ಹೇಳಿಕೆ ಆಧರಿಸಿ ರಾಗಿಣಿಯನ್ನು ವಶಕ್ಕೆ ಪಡೆಯಲಾಗಿದೆ. ರವಿಶಂಕರ್ ಮತ್ತು ರಾಗಿಣಿ ವ್ಯವಹಾರವೇನು, ಡ್ರಗ್ಸ್ ಮಾಫಿಯಾದ ಲಿಂಕ್ ಹೇಗಿದೆ ಎನ್ನುವ ಬಗ್ಗೆ ವಿಚಾರಣೆ ನಡೆಸಲಿದೆ.

  ನಟಿ ರಾಗಿಣಿ ಸಾಕ್ಷ್ಯ ನಾಶ ಮಾಡಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ನಟಿ ತನ್ನ ವಾಟ್ಸಪ್ ಅನ್ನು ಡಿಲೀಟ್ ಮಾಡಿರುವುದು ಅನುಮಾನಕ್ಕೆ ಪುಷ್ಟಿ ನೀಡಿದೆ. ರಾಗಿಣಿ ವಾಟ್ಸಪ್ ಡಿಲೀಟ್ ಮಾಡಿ ಹೊಸ ಮೊಬೈಲ್ ಖರೀದಿಸಿ ವಾಟ್ಸಪ್ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ವಾಟ್ಸಪ್ ಚಾಟ್ ಸಿಗದ್ದಂತೆ ಮಾಡಿದ್ದಾರೆ. ವಿಚಾರಣೆಯಲ್ಲಿ ರಾಗಿಣಿ ಯಾವೆಲ್ಲ ಮಾಹಿತಿ ಬಹಿರಂಗಪಡಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ

  English summary
  CCB officer take custody of Actress Ragini. CCB officers raid on Actress Ragini house in Yelahanka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X