»   » ಡಬ್ಬಿಂಗ್ ವಿವಾದ:ಕನ್ನಡ ಚಿತ್ರರಂಗಕ್ಕೆ ಸದ್ಯಕ್ಕೆ ಜಯ

ಡಬ್ಬಿಂಗ್ ವಿವಾದ:ಕನ್ನಡ ಚಿತ್ರರಂಗಕ್ಕೆ ಸದ್ಯಕ್ಕೆ ಜಯ

Posted By:
Subscribe to Filmibeat Kannada
CCI has put off verdict on Kannada dubbing issue till end of probe
ಪರಭಾಷಾ ಸಿನಿಮಾಗಳು, ಟಿವಿ ಧಾರಾವಾಹಿಗಳು ಸೇರಿದಂತೆ ಹೆಚ್ಚಿನ ದೃಶ್ಯ ಮಾಧ್ಯಮಗಳಿಗೆ ಕನ್ನಡ ಚಿತ್ರರಂಗ ಹೇರಿದ್ದ ಅಲಿಖಿತ ನಿಷೇಧ ಯಥಾಸ್ಥಿತಿ ಮುಂದುವರಿಯಲಿದ್ದು ಸದ್ಯದ ಮಟ್ಟಿಗೆ ಚಿತ್ರರಂಗ ನಿರಾಳವಾಗಿದೆ.

ಕನ್ನಡ ಗ್ರಾಹಕರ ಒಕ್ಕೂಟ ಮತ್ತು ಗಣೇಶ್ ಚೇತನ್ ಎನ್ನುವವರು ಕನ್ನಡದಲ್ಲಿ ಡಬ್ಬಿಂಗ್‌ ನಿಷೇಧವಿರುವ ಬಗ್ಗೆ ಕೆಲವು ತಿಂಗಳ ಹಿಂದೆ ಸಿಸಿಐಗೆ ( Competition Commission of India) ದೂರು ನೀಡಿದ್ದರು.

ಇದರ ವಿಚಾರಣೆ ನಡೆಸುತ್ತಿರುವ ಸಿಸಿಐ ಡಬ್ಬಿಂಗ್ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಸಮಿತಿಯ ಸಭೆಯಲ್ಲಿ ಡಬ್ಬಿಂಗ್ ಪರ ಅಥವಾ ವಿರುದ್ಧ ಯಾವುದೇ ತೀರ್ಮಾನ ತೆಗೆದುಕೊಳ್ಳದೆ, ಮಧ್ಯಂತರ ಆದೇಶ ನೀಡುವ ಅಗತ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದೆ.

ನವದೆಹಲಿಯಲ್ಲಿ ನಡೆದ ಸಿಸಿಐ ಸಮಿತಿ ಸಭೆಯಲ್ಲಿ ಅರ್ಜಿದಾರರ ಮನವಿ ಹೊರತಾಗಿಯೂ ಮಧ್ಯಂತರ ತೀರ್ಪು ನೀಡಲು ಆಯೋಗ ನಿರಾಕರಿಸಿದೆ.

ಡಬ್ಬಿಂಗಿಗೆ ಕನ್ನಡ ಚಿತ್ರರಂಗ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ದೂರಿನ ಅನ್ವಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಆರು ಸಂಘ ಸಂಸ್ಥೆಗಳಿಗೆ ಸಿಸಿಐ ನೋಟಿಸ್ ಜಾರಿ ಮಾಡಿ, ದೂರಿನ ವಿಚಾರಣೆಗೆ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯಲ್ಲಿ ಒಬ್ಬ ಅಧ್ಯಕ್ಷ ಹಾಗೂ ಐವರು ಸದಸ್ಯರಿದ್ದಾರೆ.

ಸಮಿತಿಯಲ್ಲಿದ್ದ ಒಬ್ಬ ಸದಸ್ಯ (ಎಸ್ ಎನ್ ದಿಂಗ್ರಾ) ಈ ಕೂಡಲೇ ಡಬ್ಬಿಂಗ್ ನಿಷೇಧ ಹಿಂದಕ್ಕೆ ಪಡೆಯಬೇಕು, ಬೇರೆ ಭಾಷೆಯ ಚಿತ್ರ, ಧಾರವಾಹಿಗಳು ಕನ್ನಡದಲ್ಲಿ ಡಬ್ ಆಗಲು ಅವಕಾಶ ನೀಡಿ ಮಧ್ಯಂತರ ಆದೇಶ ನೀಡಬೇಕೆಂದು ಪಟ್ಟು ಹಿಡಿದಿದ್ದರು.

ಆದರೆ ಸಮಿತಿಯ ಉಳಿದ ಸದಸ್ಯರು ಮತ್ತು ಸಮಿತಿಯ ಅಧ್ಯಕ್ಷ ಅಶೋಕ್ ಚಾವ್ಲಾ ಸೇರಿದಂತೆ ಡೈರೆಕ್ಟರ್ ಜನರಲ್ ಈ ಸಂಬಂಧ ಕೂಲಂಕುಷ ತನಿಖೆ ನಡೆಸಿ ಅಂತಿಮ ವರದಿ ನೀಡುವವ ವರೆಗೆ ಮಧ್ಯಂತರ ತೀರ್ಪು ನೀಡುವುದು ಬೇಡವೆಂದು ಹೇಳಿದ ಹಿನ್ನಲೆಯಲ್ಲಿ ಸಭೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.

ತನಿಖೆ ನಡೆಸುವ ಡೈರೆಕ್ಟರ್ ಜನರಲ್ ಯಾವುದೇ ಪ್ರಭಾವಕ್ಕೆ ಒಳಗಾಗದೇ ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ನೀಡಬೇಕೆಂದು ಆದೇಶಿಸಿ ಸಭೆ ಬರ್ಖಾಸ್ತುಗೊಂಡಿದೆ.

English summary
Six members of the commission of Competition Commission of India (CCI) has put off their decision until an investigation by its Director-General into the issue on dubbing issue in Kannada. This means that the Kannada film industry has got a breather until the final decision of the CCI.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada