»   » ಸಿಸಿಎಲ್: ಕಿಚ್ಚ ಸುದೀಪ್ ತಂಡಕ್ಕೆ ಭರ್ಜರಿ ಜಯ

ಸಿಸಿಎಲ್: ಕಿಚ್ಚ ಸುದೀಪ್ ತಂಡಕ್ಕೆ ಭರ್ಜರಿ ಜಯ

Posted By:
Subscribe to Filmibeat Kannada
Sudeep
ಸೆಲಿಬ್ರಿಟಿ ಕ್ರಿಕೆಟ್ ಲೀಗ್ ನ ಮೂರನೇ ಆವೃತ್ತಿಯಲ್ಲಿ ಕಿಚ್ಚ ಸುದೀಪ್ ಅವರ ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ ಆರಂಭ ಪಡೆದಿದೆ. ಸಿಲಗುರಿಯಲ್ಲಿ ಭಾನುವಾರ (ಫೆ.10) ವೀರ್ ಮರಾಠಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗೆಲ್ಲಲು ಬೇಕಿದ್ದ 141 ರನ್ ಗಳ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದ ಕಿಚ್ಚ ಸುದೀಪ್ ತಂಡ ಅಮೋಘ ಜಯ ದಾಖಲಿಸಿದೆ.

ಆರಂಭಿಕ ಆಟಗಾರರಾಗಿ ಇಳಿದ ಕಿಚ್ಚ ಸುದೀಪ್ ಹಾಗೂ ರಾಜೀವ್ ಇಳಿದರು. ಆದರೆ, ಭರವಸೆ ಆಟಗಾರ ರಾಜೀವ್ ಅವರು 1 ರನ್ ಗಳಿಸಿ ಪೆವಿಲಿಯನ್ ಗೆ ತೆರಳಿದರು. ನಂತರ ಸುದೀಪ್ ಅವರು 41 ಎಸೆತದಲ್ಲಿ 47 ರನ್ ಹಾಗೂ ಧ್ರುವ್ ಅವರು ನಾಟೌಟ್ 35 ಎಸೆತದಲ್ಲಿ 52 ಗಳಿಸಿದ್ದಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು.

ಮಂಜುನಾಥ್ ಅವರು ಭರ್ಜರಿ ಸಿಕ್ಸರ್ ಬಾರಿಸುತ್ತಾ ಧ್ರುವ್ ಗೆ ಉತ್ತಮ ಸಾಥ್ ನೀಡಿ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 17.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿ ಅರ್ಹ ಜಯ ದಾಖಲಿಸಿತು. ವೇಳಾಪಟ್ಟಿ ನೋಡಿ

ವೀರ್ ಮರಾಠಿ ಇನ್ನಿಂಗ್ಸ್ : ಹೊಸ ತಂಡವಾದ ರಿತೇಶ್ ದೇಶ್ ಮುಖ್ ಅವರ ನಾಯಕತ್ವದ ವೀರ್ ಮರಾಠಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿತು. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದವರು ಉತ್ತಮ ಪ್ರದರ್ಶನ ನೀಡಿದರು.

ಮೂಲೆ ಅವರು 54 ರನ್ ಹೊಡೆದು ನಾಟೌಟ್ ಆಗಿ ಉಳಿದು ತಂಡದ ಮೊತ್ತ ಹೆಚ್ಚಿಸಿದರು, ದಿಲೀಪ್ ಮಂಜ್ರೇಕರ್ 28 ರನ್, ಧುದ್ವಾಡ್ಕರ್ 18 ರನ್ ಹಾಗೂ ಸುಗಂಧ್ 16 ರನ್ ಗಳಿಸಿದರು. 20 ಓವರ್ ಗಳಲ್ಲಿ ವೀರ್ ಮರಾಠಿ ತಂಡ 4 ವಿಕೆಟ್ ಕಳೆದುಕೊಂಡು 140ರನ್ ಮಾತ್ರ ಗಳಿಸಿತು. ಕರ್ನಾಟಕದ ಪರ ಹಿಮ್ಮತ್ 28 ರನ್ನಿತ್ತು 2 ವಿಕೆಟ್, ಮಂಜುನಾಥ್ ಹಾಗೂ ಪ್ರದೀಪ್ ಬೋಗಾದಿ ತಲಾ 1 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

ಕರ್ನಾಟಕ ಬುಲ್ಡೋಜರ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಹೈದರಾಬಾದಿನಲ್ಲಿ ಚೆನ್ನೈ ರೈನೋಸ್ ತಂಡದ ವಿರುದ್ಧ ಶನಿವಾರ(ಫೆ.16) ರಂದು ಆಡಲಿದೆ. ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಸ್ಟಾರ್ ವಿಜಯ್ ಹಾಗೂ ಏಷ್ಯಾನೆಟ್ ಸುವರ್ಣ ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.


English summary
Celebrity Cricket League: Kichcha Sudeep led Karnataka Bulldozers team secured easy victroy against Veer Marathi, Chasing 141 runs for victory, Sudeep's team won the game by losing just 2 wickets.
Please Wait while comments are loading...