For Quick Alerts
ALLOW NOTIFICATIONS  
For Daily Alerts

  ಟೈಗರ್ಸ್ ವಿರುದ್ಧ ಬುಲ್ಡೋಜರ್ಸ್ ವಿರೋಚಿತ ಗೆಲುವು

  By Rajendra
  |

  ಇವರೆಲ್ಲಾ ಅಷ್ಟು ಪ್ರೊಫೆಷನಲ್ ಆಟಗಾರರಲ್ಲ ಬಿಡು ಕಣ್ಲಾ. ಸಿನಿಮಾ ತಾರೆಗಳಿಗೆ ಬ್ಯಾಟ್ ಹಿಡಿಯಕ್ಕೆ ಬರಲ್ಲ, ಕ್ರಿಕೆಟ್ ಬಗ್ಗೆ ಅವರಿಗೇನು ಗೊತ್ತು ಎಂದುಕೊಂಡಿದ್ದವರಿಗೆ ಭಾನುವಾರ (ಜ.26) ರಾತ್ರಿ ನಡೆದ ಹೊನಲು ಬೆಳಕಿನ ಪಂದ್ಯಾವಳಿ ಸೂಕ್ತ ಉತ್ತರ ಕೊಟ್ಟಿದೆ.

  ಯಾವ ಪ್ರೊಫೆಷನಲ್ ಆಟಗಾರರಿಗೂ ಕಮ್ಮಿ ಇಲ್ಲದಂತೆ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ನಾಲ್ಕನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಗೆಲುವು ದಾಖಲಿಸಿತು. ಸುದೀಪ್ ತಂಡದ ಆಟ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು.

  ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ, ಕೂಗಾಟದ ನಡುವೆ ಆಟ ರೋಚಕವಾಗಿತ್ತು. ಟಾಸ್ ಗೆದ್ದ ಬಂಗಾಳ್ ಟೈಗರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ತು. ಅಲ್ಲೇ ಅವರು ತಪ್ಪು ಹೆಜ್ಜೆ ಹಾಕಿದ್ದು ಎನ್ನಿಸುತ್ತದೆ.

  ಮ್ಯಾನ್ ಆಫ್ ದಿ ಮ್ಯಾಚ್ ರಾಜೀವ್

  ನಟ ರಾಜೀವ್ 34 ಎಸೆತಗಳಲ್ಲಿ ಭರ್ಜರಿ 87 ರನ್ ಹೊಡೆಯುವ ಮೂಲಕ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದರು. ಪ್ರದೀಪ್ ಹಾಗೂ ರಾಹುಲ್ ಜೊತೆಯಾಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

  ದರ್ಶನ್ ಅಭಿಮಾನಿಗಳಿಗೆ ನಿರಾಸೆ

  ಆರಂಭಿಕ ಆಟಗಾರ ದರ್ಶನ್ ಅವರು ಒಂದೇ ಒಂದು ರನ್ ಹೊಡೆದು ರನ್ ಔಟ್ ಆಗಿದ್ದು ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆಪಡಿಸಿತು. ಪ್ರದೀಪ್ 47 ಬಾಲ್ ಗಳಲ್ಲಿ ರೋಚಕ 73 ರನ್, ರಾಹುಲ್ 28 ಬಾಲ್ ಗಳಲ್ಲಿ 36 ರನ್ ಹೊಡೆದು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

  ಬುಲ್ಡೋಜರ್ಸ್ ವಿರುದ್ಧ ತಿಣುಕಾಡಿದ ಟೈಗರ್ಸ್

  ಬೆಂಗಾಲ್ ಟೈಗರ್ಸ್ ತಂಡ ವಿಕೆಟ್ ಗಳನ್ನು ಕೀಳುವಲ್ಲಿ ಸಾಕಷ್ಟು ತಿಣುಕಾಡಿತಾದರೂ ಕೇವಲ ಮೂರು ವಿಕೆಟ್ ಗಳಿಸಿತು. ಬೆಂಗಾಲ್ ಟೈಗರ್ಸ್ ತಂಡಕ್ಕೆ 231 ರನ್ ಗಳ ಭಾರಿ ಗುರಿಯನ್ನು ಕರ್ನಾಟಕ ಬುಲ್ಡೋಜರ್ಸ್ ಇಟ್ಟಿತು.

  ಬುಲ್ಡೋಜರ್ಸ್ 115 ರನ್ ಗಳ ಭರ್ಜರಿ ಜಯ

  ಆದರೆ ಬೆಂಗಾಲ್ ಟೈಗರ್ಸ್ ಆರಂಭದಲ್ಲೇ ತರಗೆಲೆಗಳಂತೆ ವಿಕೆಟ್ ಮೇಲೆ ವಿಕೆಟ್ ಗಳನ್ನು ಕಳೆದುಕೊಂಡು ಸೋಲಿನ ದವಡೆಯಿಂದ ಪಾರಾಗಳು ಸಾಕಷ್ಟು ತಿಣುಕಾಡುವಂತಾಯಿತು. ಅಂತಿಮವಾಗಿ ಪ್ರಯಾಸದ 113 ರನ್ ಗಳನ್ನು ಪೇರಿಸಿ ಹೀನಾಯ ಸೋಲನುಭವಿಸಿತು. ಕರ್ನಾಟಕ ಬುಲ್ಡೋಜರ್ಸ್ 115 ರನ್ ಗಳ ಭರ್ಜರಿ ಜಯ ದಾಖಲಿಸಿತು.

  ಸಿಕ್ಸರ್ ಮೇಲೆ ಸಿಕ್ಸರ್ ಎತ್ತಿದ ರಾಜೀವ್

  ನಟ ರಾಜೀವ್ ಅವರ 7 ಬೌಂಡರಿಗಳು ಹಾಗೂ ಭರ್ಜರಿ 7 ಸಿಕ್ಸರ್ ಗಳು, ಪ್ರದೀಪ್ ಹೊಡೆದ 7 ಬೌಂಡರಿಗಳು ಹಾಗೂ 3 ಸಿಕ್ಸರ್ ಗಳು ಅಭಿಮಾನಿಗಳ ಕಣ್ಣಿಗೆ ಹಬ್ಬದಂತಿದ್ದವು. ಈ ಪಂದ್ಯಾವಳಿಗೆ ಟಿಆರ್ ಕಶ್ಯಪನ್ ಹಾಗೂ ಎಸ್ ವಿ ರಮಣಿ ಅವರು ಅಂಪೈರ್ ಗಳಾಗಿದ್ದರು.

  English summary
  The Karnataka Bulldozers headed by 'Kichcha' Sudeep has won the first league match of the 4th edition of the Celebrity Cricket League by beating Bengal Tigers by 114 runs. The Karnataka Bulldozers elected to bat first and the team scored a whopping 230 runs for the loss of three wickets in 20 overs.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more