»   » ಈ ಬಾರಿಯೂ ಚಾಂಪಿಯನ್ ಆಗುವತ್ತ ಸುದೀಪ್ ತಂಡ

ಈ ಬಾರಿಯೂ ಚಾಂಪಿಯನ್ ಆಗುವತ್ತ ಸುದೀಪ್ ತಂಡ

Posted By:
Subscribe to Filmibeat Kannada

ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟ ನೋಡುತ್ತಿದ್ದರೆ ಈ ಬಾರಿಯೂ ಚಾಂಪಿಯನ್ ಆಗಲಿದೆಯಾ ಎಂಬ ಅನುಮಾನಗಳು ಬಲವಾಗುತ್ತಿವೆ. ಮೊದಲ ಪಂದ್ಯದಲ್ಲಿ ಭೋಜ್ ಪುರಿ ತಂಡಕ್ಕೆ ಭಜ್ಜಿ ತಿನ್ನಿಸಿದ್ದ ಕರ್ನಾಟಕ ಬುಲೋಜರ್ಸ್ ತಂಡ ಎರಡನೇ ಪಂದ್ಯದಲ್ಲಿ ಬೆಂಗಲ್ ಟೈಗರ್ಸ್ ತಂಡವನ್ನು ಮಣ್ಣುಮುಕ್ಕಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಬುಲ್ಡೋಜರ್ಸ್ ನಿಗದಿತ 20 ಓವರ್ ಗಳಲ್ಲಿ 255 ರನ್ ಗಳನ್ನು ಕಲೆಹಾಕಿ ಎದುರಾಳಿ ಬೆಂಗಾಲ್ ಟೈಗರ್ಸ್ ತಂಡಕ್ಕೆ ಕಠಿಣ ಸವಾಲನ್ನು ಒಡ್ಡಿತು. ಈ ಮೊತ್ತದ ಬೆನ್ನುಹತ್ತಿದ ಬೆಂಗಾಲ್ ಟೈಗರ್ಸ್ ಅಂತಿಮವಾಗಿ 141 ರನ್ ಗೆ ಕೈಚೆಲ್ಲಿದರು. [ಭೋಜ್ ಪುರಿ ತಂಡಕ್ಕೆ ಭಜ್ಜಿ ತಿನ್ನಿಸಿದ ಕರ್ನಾಟಕ ಬುಲ್ಡೋಜರ್ಸ್]

ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ 114 ರನ್ ಗಳ ಗೆಲುವು ದಾಖಲಿಸಿತು. ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯವನ್ನು ಸಿನಿಮಾ ಅಭಿಮಾನಿಗಳು ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಸರಿಸಾಟಿಯಿಲ್ಲದಂತೆ ಸವಿದರು.

ರಾಜೀವ್ ವಿರೋಚಿತ ಶತಕ

ಈ ಬಾರಿಯೂ ರಾಜೀವ್ ಅವರ ವಿರೋಚಿತ ಶತಕ (33 ಬಾಲ್ ಗೆ 111) ಹಾಗೂ ಪ್ರದೀಪ್ ಅವರ ಆಕರ್ಷಕ ಆಟ (16 ಬಾಲ್ ಗಳಿಗೆ 32 ರನ್) ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿತು. ರಾಹುಲ್ ಹಾಗೂ ಡಿ ಶರ್ಮ ಅವರ ಎಚ್ಚರಿಕೆಯ ನಡೆಯೂ ತಂಡದ ಗೆಲುವಿಗೆ ಸಹಕಾರಿಯಾಯಿತು.

ಪಾಯಿಂಟ್ ಪಟ್ಟಿಯಲ್ಲಿ ಮೇಲುಗೈ

ಒಟ್ಟಾರೆ ಈ ಪಂದ್ಯದಲ್ಲಿ ಬೆಂಗಲ್ ಟೈಗರ್ಸ್ ಅವರ ಕಳಪೆ ಪ್ರದರ್ಶನ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಜಯಭೇರಿಗೆ ಕಾರಣವಾಯಿತು. ಕರ್ನಾಟಕ ಬುಲ್ಡೋಜರ್ಸ್ ತಂಡ 4 ಪಾಯಿಂಟ್ ಗಳಿಂದ ಪಟ್ಟಿಯಲ್ಲಿ ಉಳಿದೆಲ್ಲ ತಂಡಗಳಿಗಿಂತ ಮೇಲಿದೆ.

ಜ.24ರಂದು ತೆಲುಗು ವಾರಿಯರ್ಸ್ ವಿರುದ್ಧ

ಜನವರಿ 24ರಂದು ಹೈದರಾಬಾದಿನ ಲಾಲ್ ಬಹದ್ದೂರ್ ಮೈದಾನದಲ್ಲಿ ತೆಲುಗು ವಾರಿಯರ್ಸ್ ತಂಡದೊಂದಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಮುಖಾಮುಖಿಯಾಗಲಿದೆ. ಆ ಪಂದ್ಯವೂ ಗೆದ್ದರೆ ಸೆಮಿ ಫೈನಲ್ ತಲುಪಲಿದೆ ಕಿಚ್ಚನ ತಂಡ.

ಹ್ಯಾಟ್ರಿಕ್ ಸಂಭ್ರಮದ ಕನಸು ನನಸಾಗುತ್ತಾ?

ಅಂದಹಾಗೆ ಕರ್ನಾಟಕ ಬುಲ್ಡೋಜರ್ಸ್ ತಂಡ 2013 ಹಾಗೂ 2014ರಲ್ಲಿ ಸತತ ಎರಡು ಬಾರಿ ಚಾಂಪಿಯನ್ ಆಗಿತ್ತು. ಈ ಬಾರಿಯೂ ಚಾಂಪಿಯನ್ ಆದರೆ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಹ್ಯಾಟ್ರಿಕ್ ಸಂಭ್ರಮ.

ಕಿಚ್ಚ ಸುದೀಪ್ ತಂಡದ ಪಕ್ಕಾ ಪ್ಲಾನ್

ಕಿಚ್ಚ ಸುದೀಪ್ ತಂಡ ಪಕ್ಕಾ ಪ್ಲಾನ್ ಪ್ರಕಾರ ಆಡುತ್ತಿದೆ. ಉಳಿದ ತಂಡಗಳ ಆಟವನ್ನು ನೋಡಿದಾಗ ಸಾಕಷ್ಟ ತರಬೇತಿ, ಕರಸತ್ತು ಏನೂ ಮಾಡಿದಂತೆ ಕಾಣುತ್ತಿಲ್ಲ. ಅವರ ಆ ವೀಕ್ ನೆಸ್ ಕಿಚ್ಚನ ತಂಡಕ್ಕೆ ಪ್ಲಸ್ ಆಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

English summary
Kichcha Sudeep lead Karnataka Bulldozers team hopeful to become third time champion in celebrity cricket league 5 (CCL 5). The second match between Karnataka Bulldozers Vs Bengal Tigers event held at Bengaluru. Karnataka Bulldozers won by 114 runs.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada