'IPL'ನಲ್ಲೂ ಕಮಾಲ್ ಮಾಡಿದ CCL ಸ್ಟಾರ್ ಕಮ್ ನಟ ಪ್ರದೀಪ್
Recommended Video

ಕನ್ನಡದ ಪ್ರತಿಭಾನ್ವಿತ ನಟ ಪ್ರದೀಪ್ ಅವರನ್ನ ಸಿನಿಮಾಗಳಿಗಿಂತ ಕ್ರಿಕೆಟ್ ಆಟದಲ್ಲೇ ಹೆಚ್ಚು ಇಷ್ಟ ಪಡುವ ಅಭಿಮಾನಿಗಳಿದ್ದಾರೆ. ಕಿಚ್ಚ ಸುದೀಪ್ ಸಾರಥ್ಯದ ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರಮುಖ ಆಟಗಾರ ಎಂದೇ ಗುರುತಿಸಿಕೊಂಡಿರುವ ಪ್ರದೀಪ್ ಈಗ ಐಪಿಎಲ್ ಅಖಾಡಕ್ಕೆ ಧುಮುಕಿದ್ದಾರೆ.
ಐಪಿಎಲ್ ಅಖಾಡದಲ್ಲಿ ನಟ ಪ್ರದೀಪ್.? ಎಂದು ಆಶ್ಚರ್ಯವಾಗಡಬೇಡಿ. ಇದು ನಿಜಾನೇ. ಆದ್ರೆ, ಪ್ರದೀಪ್ ಸದ್ದು ಮಾಡಿದ್ದು ಮೈದಾನದಲ್ಲಿ ಅಲ್ಲ, ಮೈದಾನದ ಹೊರಗೆ. ಹೌದು, ಐಪಿಎಲ್ ಕ್ರಿಕೆಟ್ ಪಂದ್ಯದ ಕಾಮೆಂಟರ್ ನಟ ಪ್ರದೀಪ್ ಕಾಣಿಸಿಕೊಂಡಿದ್ದಾರೆ.
ಎಲ್ಲರಿಗೂ ಗೊತ್ತಿರುವಾಗೆ, ಈ ಆವೃತ್ತಿಯ ಐಪಿಎಲ್ ಪಂದ್ಯಗಳು ಪ್ರಾದೇಶಿಕ ಭಾಷೆಗಳಲ್ಲಿಯೂ ಪ್ರಸಾರವಾಗುತ್ತಿದೆ. ಹಿಂದಿ, ತಮಿಳು, ಕನ್ನಡ ಭಾಷೆಯಲ್ಲೂ ಮೂಡಿ ಬರುತ್ತಿದೆ.

ಕನ್ನಡದಲ್ಲಿ ಸ್ಟಾರ್ ಸುವರ್ಣ ಪ್ಲಸ್ ವಾಹಿನಿಯಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗುತ್ತಿದ್ದು, ಈ ವಾಹಿನಿಯಲ್ಲಿ ಕನ್ನಡದ ಕಾಮೆಂಟರ್ ಆಗಿ ನಟ ಪ್ರದೀಪ್ ಗಮನ ಸೆಳೆದರು. ಕರ್ನಾಟಕದ ಹಿರಿಯ ಆಟಗಾರರಾದ ಗುಂಡಪ್ಪ ವಿಶ್ವನಾಥ್ ಮತ್ತು ವಿಜಯ ಭಾರಧ್ವಜ್ ಅವರ ಜೊತೆ ನಟ ಪ್ರದೀಪ್ ಕೂಡ ಕಾಮೆಂಟರ್ ಆಗಿ ಪಂದ್ಯವನ್ನ ವಿಶ್ಲೇಷಣೆ ಮಾಡಿದ್ದು ವಿಶೇಷವಾಗಿತ್ತು.
ಪ್ರದೀಪ್ ಅತ್ಯುತ್ತಮ ಕ್ರಿಕೆಟ್ ಆಟಗಾರ. ಸಿಸಿಎಲ್, ಸ್ಯಾಂಡಲ್ ವುಡ್ ಸೆಲೆಬ್ರಿಟಿ ಲೀಗ್ ಟೂರ್ನಿಗಳಲ್ಲಿ ಖ್ಯಾತಿ ಹೊಂದಿರುವ ನಟ. ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ, 'ಟೈಗರ್', 'ರಂಗನ್ ಸ್ಟೈಲ್', 'ಜಾಲಿಡೇಸ್' ಚಿತ್ರಗಳು ಸೇರಿದಂತೆ ಸುದೀಪ್ ಅವರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











