»   » ರಕ್ಷಿತ್ ಶೆಟ್ಟಿ, ಸಿಂಪಲ್ ಸುನಿಯ ಆ ಒಂದು 'ದಿನ' ಹೇಗಿತ್ತು.?

ರಕ್ಷಿತ್ ಶೆಟ್ಟಿ, ಸಿಂಪಲ್ ಸುನಿಯ ಆ ಒಂದು 'ದಿನ' ಹೇಗಿತ್ತು.?

Posted By:
Subscribe to Filmibeat Kannada
ರಕ್ಷಿತ್ ಶೆಟ್ಟಿ, ಸಿಂಪಲ್ ಸುನಿಯ ಆ ಒಂದು 'ದಿನ' ಹೇಗಿತ್ತು.? | FIlmibeat Kannada

ಮಾರ್ಚ್ 8....ಸ್ಯಾಂಡಲ್ ವುಡ್ ನಲ್ಲೊಂದು ಸಿನಿಮಾ ರಿಲೀಸ್ ಆಗುತ್ತೆ. ಇದು ಅಪ್ಪಟ ಹೊಸಬರ ಸಿನಿಮಾ. ರಕ್ಷಿತ್ ಶೆಟ್ಟಿ ಆಗಾಗಲೇ ಎರಡು ಸಿನಿಮಾ ಮಾಡಿ ಯಶಸ್ಸು ಸಿಗದೇ ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದರು. ಇನ್ನು ನಿರ್ದೇಶಕ ಸುನಿ ತಮ್ಮ ಚೊಚ್ಚಲ ಸಿನಿಮಾಗೆ ಆಕ್ಷನ್ ಕಟ್ ಹೇಳಿ ಅಗ್ನಿಪರೀಕ್ಷೆ ಎದುರಿಸಿದ್ದರು. ಬಹುಶಃ ಟ್ರೈಲರ್ ಬಿಡುಗಡೆಯಾಗುವರೆಗೂ ಸುನಿ ಮತ್ತು ರಕ್ಷಿತ್ ಶೆಟ್ಟಿ ಯಾರೆಂದು ಯಾರಿಗೂ ಗೊತ್ತಿರಲಿಲ್ಲ.

ಈಗಾಗಲೇ ನಾವು ಯಾವ ಚಿತ್ರದ ಬಗ್ಗೆ ಹೇಳ್ತಿದ್ದೀವಿ ಅಂತ ಗೊತ್ತಾಗಿರುತ್ತೆ. ಹೌದು, ಸುನಿ ನಿರ್ದೇಶನ ಮಾಡಿ, ರಕ್ಷಿತ್ ಶೆಟ್ಟಿ ನಟಿಸಿದ್ದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'. ಈ ಸಿನಿಮಾ ತೆರೆಕಂಡು 5 ವರ್ಷ ಆಗಿದೆ. ಈ ಸಿನಿಮಾ ಬಿಡುಗಡೆಯ ನಂತರ ಈ ಇಬ್ಬರ ಹಣೆಬರಹವೇ ಬದಲಾಯಿತು. ಸುನಿ ಜೊತೆ ಸಿಂಪಲ್ ಎನ್ನುವ ಟ್ಯಾಗ್ ಲೈನ್ ಸೇರಿಕೊಂಡಿತ್ತು. ರಕ್ಷಿತ್ ಗೂ ಸಿಂಪಲ್ ಸ್ಟಾರ್ ಎಂಬ ಬಿರುದು ಸಿಕ್ಕಿತ್ತು.

ಇದೀಗ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ 5 ವರ್ಷ ಪೂರೈಸಿದ ಹಿನ್ನೆಲೆ ಚಿಗ್ರದ ನಿರ್ದೇಶಕ ಸುನಿ ಮತ್ತು ನಟ ರಕ್ಷಿತ್ ಶೆಟ್ಟಿ ಟ್ವಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಮುಂದೆ ಓದಿ....

ಈ ಸಿನಿಮಾದಿಂದ ಲಕ್ ಬದಲಾಯಿತು

ಟ್ರೈಲರ್ ನಲ್ಲಿ ಮಾಡಿದ್ದ ಮೋಡಿ ಸಿನಿಮಾದಲ್ಲೂ ಕ್ಲಿಕ್ ಆಯ್ತು. ನೋಡು ನೋಡುತ್ತಲೇ ಸಿನಿಮಾ ಹಿಟ್ ಆಗೋಯ್ತು. ಸತತವಾಗಿ ಚಿತ್ರಮಂದಿರ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡದ ಸುನಿ ಮತ್ತು ರಕ್ಷಿತ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟ ಹಾಗೂ ಸ್ಟಾರ್ ನಿರ್ದೇಶಕ. ಇವರಿಬ್ಬರ ಸಿನಿಮಾಗು ಬರ್ತಿದೆ ಅಂದ್ರೆ ಜನರು ಕಾಯ್ತಾರೆ.

ಒಲಿದ 'ಸ್ಟಾರ್' ಪಟ್ಟ

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನಂತರ 'ಬಹುಪಾರಕ್', 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ', 'ಆಪರೇಷನ್ ಅಲಮೇಲಮ್ಮ', 'ಚಮಕ್' ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಮತ್ತೊಂದೆಡೆ ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ', 'ವಾಸ್ತು ಪ್ರಕಾರ', 'ರಿಕ್ಕಿ', 'ಗೋಧಿಬಣ್ಣ ಸಾಧಾರಣ ಮೈಕಟ್ಟು', 'ಕಿರಿಕ್ ಪಾರ್ಟಿ' ಚಿತ್ರಗಳಲ್ಲಿ ಅಭಿನಯಿಸಿದ್ರು.

ನಾಯಕಿಗೂ ಲಕ್ ಖುಲಾಯಿಸಿತು

ಈ ಚಿತ್ರದ ಮೂಲಕ ಶ್ವೇತಾ ಶ್ರೀವಾಸ್ತವ್ ಎಂಬ ಮುದ್ದಾದ ನಟಿ ಕೂಡ ಚಂದನವನಕ್ಕೆ ಪರಿಚಯವಾದರು. ತಮ್ಮ ಬೋಲ್ಡ್ ನಟನೆಯ ಮೂಲಕ ಸಿನಿ ಅಭಿಮಾನಿಗಳ ಮನಗೆದ್ದಿದ್ದರು. ಈ ಚಿತ್ರದ ನಂತರ ಶ್ವೇತಾ ಕೂಡ ಫೇರ್ ಅಂಡ್ ಲವ್ಲಿ, ಕಿರಗೂರಿನ್ ಗಯ್ಯಾಳಿಗಳು ಅಂತಹ ಸಿನಿಮಾಗಳಲ್ಲಿ ನಟಿಸಿದರು.

ಕನ್ನಡದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಸಿನಿಮಾ

ಈ ಚಿತ್ರದ ಬಗ್ಗೆ ವಿಶೇಷವಾಗಿ ಹೇಳುವುದಾದರೇ ಕನ್ನಡ ಸಿನಿಮಾರಂಗದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿತ್ತು ಅಂದ್ರೆ ತಪ್ಪಾಗಲಾರದು. ಡಬಲ್ ಮೀನಿಂಗ್ ಡೈಲಾಗ್ ಗಳನ್ನ ಹೀಗೂ ಬಳಸಿಕೊಳ್ಳಬಹುದು ಎಂದು ಈ ಸಿನಿಮಾ ತೋರಿಸಿಕೊಟ್ಟಿತ್ತು. ಸರಳವಾಗಿ, ಅಶ್ಲೀಲವಾಗಿರದೇ ಡಬಲ್ ಮೀನಿಂಗ್ ಸಂಭಾಷಣೆ ಇಲ್ಲಿಂದ ಮತ್ತೊಂದು ಹಂತ ತಲುಪಿತ್ತು.

ನೆನಪು ಮೆಲುಕು ಹಾಕಿದ ನಟ-ನಿರ್ದೇಶಕ

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ 5 ವರ್ಷ ಪೂರೈಸಿದ ಹಿನ್ನೆಲೆ ಚಿಗ್ರದ ನಿರ್ದೇಶಕ ಸುನಿ ಮತ್ತು ನಟ ರಕ್ಷಿತ್ ಶೆಟ್ಟಿ ಟ್ವಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

English summary
kannada actor rakshith shetty and director simple celebrating 5th anniversary of Simple Agi Ondh Love Story. the movie has released on march 9, 2013.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada