twitter
    For Quick Alerts
    ALLOW NOTIFICATIONS  
    For Daily Alerts

    CCL ಟೂರ್ನಿಗೆ ಮುಹೂರ್ತ ಫಿಕ್ಸ್: ಕರ್ನಾಟಕ ತಂಡದಲ್ಲಿ ಮಹತ್ವದ ಬದಲಾವಣೆ?

    |

    Recommended Video

    CCL cricket 2019: CCL ಟೂರ್ನಿಗೆ ಮುಹೂರ್ತ ಫಿಕ್ಸ್: ಕರ್ನಾಟಕ ತಂಡದಲ್ಲಿ ಮಹತ್ವದ ಬದಲಾವಣೆ?

    ಭಾರತದ ಜನಪ್ರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾಗಿರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೊಸ ಆವೃತ್ತಿಗೆ ದಿನಾಂಕ ಮತ್ತು ಸ್ಥಳ ನಿಗದಿಯಾಗಿದೆ. 2019ನೇ ಸಾಲಿನಲ್ಲಿ ನಡೆಯುವ ಸಿಸಿಎಲ್ ಟಿ-10 ಟೂರ್ನಿ ಪಂದ್ಯಾವಳಿ ಪಟ್ಟಿಯನ್ನ ಅಂತಿಮಗೊಳಿಸಲಾಗಿದೆ.

    ನಾಲ್ಕು ದಿನಗಳ ಕಾಲ ಈ ಟೂರ್ನಿ ನಡೆಯಲಿದ್ದು, ಒಟ್ಟು ಆರು ತಂಡಗಳು ಭಾಗಿಯಾಗಲಿವೆ. ಹತ್ತು ಓವರ್ ಗಳ ಪಂದ್ಯಾವಳಿ ಇದಾಗಿದ್ದು, ಈ ಬಾರಿ 'ಕರ್ನಾಟಕ ಬುಲ್ಡೋಜರ್ಸ್' ತಂಡದಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಇದೆ.

    ಸುದೀಪ್ ತೊರೆದ 'ಕರ್ನಾಟಕ ಬುಲ್ಡೋಜರ್ಸ್' ನಾಯಕ ಸ್ಥಾನಕ್ಕೆ ಯುವ ನಟ.! ಸುದೀಪ್ ತೊರೆದ 'ಕರ್ನಾಟಕ ಬುಲ್ಡೋಜರ್ಸ್' ನಾಯಕ ಸ್ಥಾನಕ್ಕೆ ಯುವ ನಟ.!

    ಸಿಸಿಎಲ್ ಆಯೋಜಕರು ಅಧಿಕೃತವಾಗಿ ತಂಡ ಹಾಗೂ ವೇಳಾಪಟ್ಟಿಯನ್ನ ಬಹಿರಂಗಪಡಿಸಿದ್ದು, ಈ ವರ್ಷದ ಸಿಸಿಎಲ್ ನಲ್ಲಿ ಯಾವ ತಂಡಗಳು ಆಡಲಿವೆ ಮತ್ತು ಯಾವಾಗ ಪಂದ್ಯಗಳು ಎಂದು ತಿಳಿಯಲು ಮುಂದೆ ಓದಿ.....

    ಫೆಬ್ರವರಿ 27ಕ್ಕೆ ಟೂರ್ನಿ

    ಫೆಬ್ರವರಿ 27ಕ್ಕೆ ಟೂರ್ನಿ

    ಸಿಸಿಎಲ್ ಟಿ-10 ಟೂರ್ನಿ ಫೆಬ್ರವರಿ 27ರಂದು ಆರಂಭವಾಗಲಿದೆ. ಒಟ್ಟು ನಾಲ್ಕು ದಿನಗಳ ಕಾಲ ಈ ಟೂರ್ನಿ ನಡೆಯಲಿದ್ದು, ಫೆಬ್ರವರಿ 27, 28 ಮತ್ತು ಮಾರ್ಚ್ 1, 2 ರಂದು ಪಂದ್ಯಗಳು ನಡೆಯಲಿದೆ.

    ಕರ್ನಾಟಕ ಕ್ರಿಕೆಟರ್ಸ್ ಮತ್ತು ಕನ್ನಡ ಸಿನಿಮಾ ನಂಟು.!ಕರ್ನಾಟಕ ಕ್ರಿಕೆಟರ್ಸ್ ಮತ್ತು ಕನ್ನಡ ಸಿನಿಮಾ ನಂಟು.!

    ಒಟ್ಟು ಆರು ತಂಡಗಳು ಭಾಗಿ

    ಒಟ್ಟು ಆರು ತಂಡಗಳು ಭಾಗಿ

    ಕರ್ನಾಟಕ ಬುಲ್ಡೋಜರ್ಸ್, ಮುಂಬೈ ಹೀರೋಸ್, ತೆಲುಗು ವಾರಿಯರ್ಸ್, ಬೆಂಗಾಲ್ ಟೈಗರ್ಸ್, ಪಂಜಾಬ್ ದಿ ಶೇರ್, ಬೋಜ್ ಫುರಿ ದಬಾಂಗ್ಸ್ ತಂಡಗಳು ಭಾಗಿಯಾಗಲಿದೆ. ಒಟ್ಟು 200 ಸ್ಟಾರ್ ಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, 13 ಪಂದ್ಯಗಳು ನಡೆಯಲಿದೆ. ಚಂಡಿಘಡ್ ನ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದೆ.

    ಕ್ಯಾಪ್ಟನ್ ಸುದೀಪ್ ತುಂಬಾನೇ ಸ್ಟ್ರಿಕ್ಟ್: ಕಿಚ್ಚನನ್ನು ಕಂಡರೆ ತಂಡದಲ್ಲಿರುವವರಿಗೆ ನಡುಕ.!ಕ್ಯಾಪ್ಟನ್ ಸುದೀಪ್ ತುಂಬಾನೇ ಸ್ಟ್ರಿಕ್ಟ್: ಕಿಚ್ಚನನ್ನು ಕಂಡರೆ ತಂಡದಲ್ಲಿರುವವರಿಗೆ ನಡುಕ.!

    ಚೆನ್ನೈ ರೈನೋಸ್ ಇಲ್ಲ

    ಚೆನ್ನೈ ರೈನೋಸ್ ಇಲ್ಲ

    ಸಿಸಿಎಲ್ ಟೂರ್ನಿಯನ್ನ ಎರಡು ಬಾರಿ ಗೆದ್ದಿರುವ ಚೆನ್ನೈ ರೈನೋಸ್ ತಂಡ ಈ ಬಾರಿಯ ಸಿಸಿಎಲ್ ನಲ್ಲಿ ಆಡುತ್ತಿಲ್ಲ. ಇದು ಬಹಳ ಅಚ್ಚರಿಗೆ ಕಾರಣವಾಗಿದೆ. ಯಾಕೆ ಎಂಬ ಕಾರಣ ಬಹಿರಂಗವಾಗಿಲ್ಲ. ಅದರ ಜೊತೆಗೆ ಕೇರಳ ಮತ್ತು ಮರಾಠಿ ತಂಡವೂ ಭಾಗಿಯಾಗುತ್ತಿಲ್ಲ.

    ಕರ್ನಾಟಕಕ್ಕೆ ನಾಯಕ ಯಾರು?

    ಕರ್ನಾಟಕಕ್ಕೆ ನಾಯಕ ಯಾರು?

    ಇಷ್ಟೆಲ್ಲ ವಿಶೇಷತೆಗಳ ನಡುವೆ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ನಾಯಕ ಯಾರು ಎಂಬ ಕುತೂಹಲ ಕಾಡ್ತಿದೆ. ಯಾಕಂದ್ರೆ, ಸದ್ಯದ ಮಾಹಿತಿ ಪ್ರಕಾರ, ಕಿಚ್ಚ ಸುದೀಪ್ ನಾಯಕತ್ವ ಸ್ಥಾನದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಸುದೀಪ್ ಬದಲು ಪ್ರದೀಪ್ ತಂಡ ಮುನ್ನಡೆಸುತ್ತಾರೆ ಎಂದು ಹೇಳಲಾಗಿದೆ. ಆದ್ರೆ, ಸಿಸಿಎಲ್ ಬಿಡುಗಡೆ ಮಾಡಿರುವ ಪೋಸ್ಟರ್ ಗಳಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಸುದೀಪ್ ಅವರ ಫೋಟೋಗಳೇ ಇದೆ. ಹಾಗಾಗಿ, ಬಹುಶಃ ಕರ್ನಾಟಕ ತಂಡವನ್ನ ಸುದೀಪ್ ಅವರೇ ಮುನ್ನಡೆಸಬಹುದು.

    English summary
    Get ready for action. Biggest Stars from the movie industry will play in celebrity cricket league 2019. tournament will starts from february 27th.
    Friday, February 22, 2019, 13:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X