»   » ಮೊದಲ ಹೆಜ್ಜೆಯಲ್ಲೇ ಸಕ್ಸಸ್ ಬಾರಿಸಿದ ಕಿಚ್ಚನ ಟೀಂ

ಮೊದಲ ಹೆಜ್ಜೆಯಲ್ಲೇ ಸಕ್ಸಸ್ ಬಾರಿಸಿದ ಕಿಚ್ಚನ ಟೀಂ

Posted By:
Subscribe to Filmibeat Kannada

ವರ್ಷ ಪೂರ್ತಿ ಕ್ಯಾಮೆರಾ ಮುಂದೆ ನಿಂತು ಆಕ್ಟಿಂಗ್ ಮಾಡುವ ಸ್ಟಾರ್ ಗಳು ಒಂದಿಷ್ಟು ಬಿಡುವು ತೆಗೆದುಕೊಂಡು ಬ್ಯಾಟ್ ಹಿಡಿದು ಗ್ರೌಂಡ್ ಗಿಳಿದು ಆಟವಾಡುವ ಟೈಂ ಬಂದೇ ಬಿಟ್ಟಿದೆ.

ಒಂದು ತಿಂಗಳ ಹಿಂದಿನಿಂದ ಸತತವಾಗಿ ತರಬೇತಿಯಲ್ಲಿ ತೊಡಗಿರುವ ಕಿಚ್ಚನ ಹುಡುಗರು ನಾಲ್ಕೈದು ದಿನಗಳಲ್ಲಿ ಫೀಲ್ಡ್ ಗೆ ಇಳಿಯಲಿದ್ದಾರೆ. ಕಳೆದ ಬಾರಿಗಿಂತಲೂ ಈ ಬಾರಿ ಟೀಂ ಸ್ಟ್ರಾಂಗ್ ಆಗಿದ್ದು ಹೊಸ ನಾಯಕ ನಟರು ಕಿಚ್ಚನ ಗ್ಯಾಂಗ್ ನಲ್ಲಿ ಇದ್ದಾರೆ.

ಬೆಂಗಳೂರಿನಲ್ಲಿ ಚುಮುಚುಮು ಚಳಿ ಜನ ಹಾಸಿಗೆ ಮೇಲಿಂದ ಎದ್ದೇಳಲು ಹಿಂದು ಮುಂದು ನೋಡ್ತಿದ್ದಾರೆ. ಆದರೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರೆಲ್ಲರೂ ಸಿ.ಸಿ.ಎಲ್ ನ ಪ್ರಾಕ್ಟೀಸ್ ನಲ್ಲಿ ಬ್ಯುಸಿ ಆಗಿದ್ದಾರೆ. ಕಿಚ್ಚನ ಮಾತಿಗೆ ಚಾಚುತಪ್ಪದಂತೆ ಪಾಲಿಸುತ್ತಾ ಈ ಬಾರಿ ಕಪ್ ನಮ್ಮದೇ ಅನ್ನೋ ಸೂಚನೆ ನೀಡಿದ್ದಾರೆ.

ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಕಿಚ್ಚ

ಇನ್ನು ನಾಲ್ಕು ದಿನಗಳಲ್ಲಿ ಸಿ.ಸಿ.ಎಲ್ ಪಂದ್ಯಕ್ಕೆ ಚಾಲನೆ ಸಿಗಲಿದೆ. ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಪ್ರತಿನಿಧಿಸುತ್ತಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಈಗಾಗಲೇ ತಯಾರಿ ಮಾಡಿಕೊಳ್ತಿದ್ದು ಇಂದು ವಾರ್ಮ್ ಅಪ್ ಮ್ಯಾಚ್ ನಲ್ಲಿ ಯಶಸ್ಸು ಗಳಿಸಿದ್ದಾರೆ.

ಸುದೀಪ್ ಬೆಸ್ಟ್ ಪರ್ಫಾಮರ್

ಸಿ.ಸಿ.ಎಲ್ ಶುರುವಾಗುವ ಮುನ್ನ ಇಂದು (ಡಿಸೆಂಬರ್ 3) ಟೀಂ ಸಾಮಾರ್ಥ್ಯವನ್ನ ಪರೀಕ್ಷೆ ಮಾಡಲು ವಾರ್ಮ್ ಅಪ್ ಮ್ಯಾಚ್ ನಡೆಸಲಾಗಿದೆ. ಈ ಪಂದ್ಯದಲ್ಲಿ ಕಿಚ್ಚ ಸುದೀಪ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡಿದ್ದಾರೆ.

ಹೊಸ ಸ್ಟಾರ್ ಗಳ ಸಮಾಗಮ

ಡಿಸೆಂಬರ್ 9 ರಂದು ಭೋಜ್ ಪುರಿ ದಬಾಂಗ್ಸ್ ಹಾಗೂ ಬೆಂಗಾಲ್ ಟೈಗರ್ಸ್ ಫೀಲ್ಡ್ ಗಿಳಿಯುವ ಮೂಲಕ ಸಿ.ಸಿ.ಎಲ್ ಪಂದ್ಯವನ್ನ ಪ್ರಾರಂಭ ಮಾಡಲಿದ್ದಾರೆ. ಈ ಬಾರಿ ಮೈದಾನದಲ್ಲಿ ಹಳೆ ತಂಡದ ಜೊತೆಯಲ್ಲಿ ಭಜರಂಗಿ ಲೋಕಿ ಹಾಗೂ ಪೆಟ್ರೋಲ್ ಪ್ರಸನ್ನ ಬ್ಯಾಟ್ ಹಿಡಿಯಲಿದ್ದಾರೆ.

ಹನ್ನೆರಡು ದಿನಗಳು ನಡೆಯುವ ಪಂದ್ಯ

ಈ ಬಾರಿ ಸಿ.ಸಿ.ಎಲ್ ನಲ್ಲಿ ಸಾಕಷ್ಟು ಬದಲಾವಣೆಯನ್ನ ಮಾಡಿಕೊಳ್ಳಲಾಗಿದೆ. ಟ್ವೆಂಟಿ ಟ್ವೆಂಟಿ ಮ್ಯಾಚ್ ಅನ್ನ ಈ ಸಲ ಟೆನ್ ಓವರ್ ಮ್ಯಾಚ್ ಆಗಿ ಬದಲಾಯಿಸಲಾಗಿದೆ. ಡಿಸೆಂಬರ್ 9 ರಿಂದ 24 ರ ವರೆಗೂ ಸಿ.ಸಿ.ಎಲ್ ಮ್ಯಾಚ್ ನಡೆಯಲಿದೆ

English summary
Karnataka bulldozers won warm up match. Kiccha Sudeep becomes man of the match.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada