»   » ಪ್ರಭಾಸ್-ಅನುಷ್ಕಾ ಬಗ್ಗೆ ಬಾಂಬ್ ಸಿಡಿಸಿದ ಸೆನ್ಸಾರ್ ಮಂಡಳಿ ಸದಸ್ಯ.!

ಪ್ರಭಾಸ್-ಅನುಷ್ಕಾ ಬಗ್ಗೆ ಬಾಂಬ್ ಸಿಡಿಸಿದ ಸೆನ್ಸಾರ್ ಮಂಡಳಿ ಸದಸ್ಯ.!

Posted By:
Subscribe to Filmibeat Kannada

'ಬಾಹುಬಲಿ' ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಸಂಬಂಧದ ಬಗ್ಗೆ ಇಡೀ ಚಿತ್ರರಂಗವೇ ಮಾತಾಡುತ್ತಿದೆ. ಇವರಿಬ್ಬರ ಮಧ್ಯೆ ಲವ್ ಇರಬಹುದು, ಮದುವೆ ಆಗಬಹುದು, ಎಂದೆಲ್ಲಾ ಸುದ್ದಿಗಳಿವೆ. ಆದ್ರೆ, ಸ್ವತಃ ಇಬ್ಬರು ಇದನ್ನ ತಳ್ಳಿ ಹಾಕುತ್ತಿದ್ದಾರೆ.

ಇದೀಗ, ಸೆನ್ಸಾರ್ ಮಂಡಳಿಯ ಸದಸ್ಯರೊಬ್ಬರು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ಸಂಬಂಧದ ಬಗ್ಗೆ ಟ್ವಿಟ್ ಮಾಡಿದ್ದು, ಮತ್ತೆ ಕುತೂಹಲ ಕೆರಳಿಸುವಂತೆ ಮಾಡಿದೆ.

ಕೊನೆಗೂ ಮದುವೆ-ಅನುಷ್ಕಾ ಲವ್ ರೂಮರ್ಸ್ ಬಗ್ಗೆ ಬಾಯ್ಬಿಟ್ಟ ಪ್ರಭಾಸ್!

Censor board member tweeted about Prabhas and Anushka Shetty

ಉಮೈರ್ ಸಂಧು ಎಂಬಾತ ಪ್ರಭಾಸ್ ಮತ್ತು ಅನುಷ್ಕಾ ಸಂಬಂಧದ ಬಗ್ಗೆ ಟ್ವೀಟ್ ಮಾಡಿದ್ದು, ''ಇಬ್ಬರೂ ಪರಸ್ಪರ ಇಷ್ಟ ಪಡುತ್ತಿದ್ದಾರೆ. 2018ರಲ್ಲಿ ಇವರ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಆಗಲಿದೆ'' ಎಂದು ಬರೆದುಕೊಂಡಿದ್ದರು. ಆದ್ರೆ, ಸ್ವಲ್ಪವೊತ್ತಿನ ನಂತರ ಈ ಟ್ವೀಟ್ ನ ಡಿಲೀಟ್ ಮಾಡಿಬಿಟ್ಟಿದ್ದಾರೆ. ಹಾಗಾಗಿ, ಮತ್ತೇ ಈ ಜೋಡಿಯ ಬಗ್ಗೆ ಮತ್ತೆ ಕುತೂಹಲ ಹುಟ್ಟಿಕೊಂಡಿದೆ.

ಕೊನೆಗೂ ಒಂದಾದ್ರು 'ಬಾಹುಬಲಿ' ಜೋಡಿ ಪ್ರಭಾಸ್-ಅನುಷ್ಕಾ ಶೆಟ್ಟಿ

ಸದ್ಯ, ಪ್ರಭಾಸ್ ಬಹುಭಾಷೆಯ 'ಸಾಹೋ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಅನುಷ್ಕಾ ಶೆಟ್ಟಿ 'ಭಾಗಮತಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

English summary
Censor board member tweeted about Prabhas and Anushka Shetty's relationship but deleted it soon. ತೆಲುಗಿನ ಸ್ಟಾರ್ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಸಂಬಂಧದ ಬಗ್ಗೆ ಸೆನ್ಸಾರ್ ಮಂಡಳಿ ಸದಸ್ಯರೊಬ್ಬರು ಟ್ವೀಟ್ ಮಾಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada