For Quick Alerts
  ALLOW NOTIFICATIONS  
  For Daily Alerts

  ಶೈನ್ ಶೆಟ್ಟಿಯನ್ನು ಪ್ರೀತಿಸುತ್ತಿದ್ದೀರಾ? ಚೈತ್ರಾ ಕೋಟೂರ್ ಕೊಟ್ಟ ಉತ್ತರ

  |

  ಬಿಗ್‌ಬಾಸ್ ಸ್ಪರ್ಧಿ, ಮಹಾತ್ವಾಂಕ್ಷಿ ಉದಯೋನ್ಮುಕ ನಿರ್ದೇಶಕಿ, ನಟಿ ಚೈತ್ರಾ ಕೋಟೂರ್ ಅವರು ಕನ್ನಡ ಫಿಲ್ಮೀಬೀಟ್‌ ನಲ್ಲಿ ಲೈವ್ ಬಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದರು.

  ಶೃನ್ ಶೆಟ್ಟಿ ಹಾಗು ಬಿಗ್ ಬಾಸ್ ಬಗ್ಗೆ ಕೆಲವೊಂದು ರಹಸ್ಯ ಬಿಚ್ಚಿಟ್ಟ ಚೃತ್ರ ಕೋಟೂರ್ | Filmibeat exclusive

  ಸಿನಿಮಾ, ಕೊರೊನಾ ಲಾಕ್‌ಡೌನ್, ದಿನನಿತ್ಯದ ಜೀವನ, ಬರವಣಿಗೆ, ಸಾಹಿತ್ಯ, ಬಿಗ್‌ಬಾಸ್ ದಿನಗಳು ಹಲವು ವಿಷಯಗಳ ಬಗ್ಗೆ ಚೈತ್ರಾ ಅವರಿಗೆ ಪ್ರಶ್ನೆಗಳು ಎದುರಾದವು. ಎಲ್ಲದಕ್ಕೂ ನೇರವಾಗಿ ಉತ್ತರ ನೀಡಿದರು ಚೈತ್ರಾ ಕೋಟೂರ್

  ನೀವು ಶೈನ್ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದೀರಂತೆ ನಿಜವಾ? ಎಂದು ಅಭಿಮಾನಿಯೊಬ್ಬ ಚೈತ್ರಾ ಕೋಟೂರ್ ಅವರನ್ನು ಪ್ರಶ್ನೆ ಕೇಳಿದ. ಈ ಪ್ರಶ್ನೆಗೂ ಸಹ ನೇರವಾಗಿಯೇ ಉತ್ತರ ನೀಡಿದರು, ಚೈತ್ರಾ. ಏನದು ಉತ್ತರ ಮುಂದೆ ಓದಿ...

  ಶೈನ್ ಶೆಟ್ಟಿ ಕುರಿತ ಪ್ರಶ್ನೆಗೆ ಚೈತ್ರಾ ಉತ್ತರ

  ಶೈನ್ ಶೆಟ್ಟಿ ಕುರಿತ ಪ್ರಶ್ನೆಗೆ ಚೈತ್ರಾ ಉತ್ತರ

  ಶೈನ್ ಶೆಟ್ಟಿ ಬಗ್ಗೆ ತೂರಿಬಂದ ಪ್ರೇಮ ಪ್ರಶ್ನೆ ಓದಿ ನಕ್ಕುಬಿಟ್ಟ ಚೈತ್ರಾ ಕೋಟೂರ್, 'ಹಾಗೇನೂ ಇಲ್ಲ, ಆತ ನನಗೆ ಒಳ್ಳೆಯ ಗೆಳೆಯನಷ್ಟೆ, ಆತ ಮಾತ್ರವಲ್ಲ ಬಿಗ್‌ಬಾಸ್‌ ನಲ್ಲಿ ಜೊತೆಗಿದ್ದ ಎಲ್ಲರೂ ಒಳ್ಳೆಯ ಗೆಳೆಯರು' ಎಂದರು ಚೈತ್ರಾ ಕೊಟ್ಟೂರು.

  ಸ್ಪರ್ಧಿಗಳೊಂದಿಗೆ ಒಂದು ಬಾಂಧವ್ಯ ಏರ್ಪಟ್ಟಿರುತ್ತದೆ: ಚೈತ್ರಾ

  ಸ್ಪರ್ಧಿಗಳೊಂದಿಗೆ ಒಂದು ಬಾಂಧವ್ಯ ಏರ್ಪಟ್ಟಿರುತ್ತದೆ: ಚೈತ್ರಾ

  ಮುಂದುವರೆದು ಮಾತನಾಡಿದ ಚೈತ್ರಾ, ಬಿಗ್‌ಬಾಸ್ ಮನೆಯಲ್ಲಿದ್ದಾಗ ಎಲ್ಲರೂ ಒಟ್ಟಿಗೆ ಬದುಕಿರ್ತೀವಿ, ಎಲ್ಲವನ್ನೂ ಸಮನಾಗಿ ಹಂಚಿಕೊಂಡು ಬಾಳ್ವೆ ಮಾಡಿರ್ತೀವಿ, ಅದೊಂದು ಬಾಂಧವ್ಯ ನಮ್ಮೆಲ್ಲರ ನಡುವೆ ಏರ್ಪಟ್ಟಿರುತ್ತದೆ. ಹಾಗಾಗಿ ಬಿಗ್‌ಬಾಸ್ ಮುಗಿದ ಮೇಲೂ ಗೆಳೆತನ ಮುಂದುವರೆಸಿಕೊಂಡು ಹೋಗುತ್ತೀವಿ ಎಂದರು.

  ''ಜನರಿಗೆ ಇಷ್ಟವಾಗುವುದನ್ನು ಮಾತ್ರವೇ ಪ್ರಸಾರ ಮಾಡ್ತಾರೆ''

  ''ಜನರಿಗೆ ಇಷ್ಟವಾಗುವುದನ್ನು ಮಾತ್ರವೇ ಪ್ರಸಾರ ಮಾಡ್ತಾರೆ''

  ದಿನದ 24 ಗಂಟೆ ನಡೆಯುವ ಘಟನೆಗಳನ್ನು ಎಡಿಟ್ ಮಾಡಿ ಒಂದು ಗಂಟೆಗೆ ಸೀಮಿತ ಮಾಡಿರುತ್ತಾರೆ. ಯಾವುದು ಜನರಿಗೆ ಇಷ್ಟವಾಗುತ್ತದೆಯೋ ಅದನ್ನೇ ಆಯ್ದುಕೊಂಡಿರುತ್ತಾರೆ, ಹಾಗಾಗಿ ಜನರಿಗೆ ಕೆಲವೊಮ್ಮೆ ಯಾವದೋ ಇಬ್ಬರು ಸ್ಪರ್ಧಿಗಳು ಹೆಚ್ಚು ಆಪ್ತರು ಎನಿಸಬಹುದು ಆದರೆ ನಿಜಕ್ಕೂ ಹಾಗೆ ಇರುವುದಿಲ್ಲ ಎಂದು ಚೈತ್ರಾ ಹೇಳಿದ್ದಾರೆ.

  ಬಿಗ್‌ಬಾಸ್ ಎಂಬುದು ಆಟವಷ್ಟೆ: ಚೈತ್ರಾ

  ಬಿಗ್‌ಬಾಸ್ ಎಂಬುದು ಆಟವಷ್ಟೆ, ಅದನ್ನು ಆಟವೆಂದೇ ನಾವೆಲ್ಲಾ ಆಡಿದ್ದೇವೆ, ಅಲ್ಲಿನ ಟಾಸ್ಕ್‌ಗಳಿಗೂ, ಅಲ್ಲಿನ ಆ ಕ್ಷಣದ ವರ್ತನೆಗೂ ನಿಜ ಜೀವನಕ್ಕೂ ಹೆಚ್ಚು ಸಂಬಂಧವಿಲ್ಲ, ಬಿಗ್‌ಬಾಸ್‌ ಮನೆಯ ಟಾಸ್ಕ್‌ಗಳನ್ನು ಗಂಭೀರವಾಗಿ ಪರಿಗಣಿಸಿದರೆ ಹೊರಗೆ ಬಂದ ಮೇಲೆ ನಾವುಗಳು ಒಬ್ಬರನ್ನೊಬ್ಬರು ಮಾತನಾಡಿಸುವಂತೆಯೇ ಇರಲಿಲ್ಲ ಅಷ್ಟು ಜಗಳ ಆಡಿದ್ದೆವು ಎಂದರು ಚೈತ್ರಾ.

  English summary
  Actress, Director Chaithra Kotoor answered questions which were asked by fans in Facebook live interaction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X