»   » ಪುನೀತ್ ರ 'ಚಕ್ರವ್ಯೂಹ' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ...

ಪುನೀತ್ ರ 'ಚಕ್ರವ್ಯೂಹ' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ...

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಮತ್ತು ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ 'ಚಕ್ರವ್ಯೂಹ' ಇಂದು (ಏಪ್ರಿಲ್ 28) ಕರ್ನಾಟಕದ ಸೇರಿದಂತೆ ಇಡೀ ವಿದೇಶದಾದ್ಯಂತ ಭರ್ಜರಿಯಾಗಿ ತೆರೆ ಕಂಡಿದೆ.

ಎಲ್ಲೆಡೆ ಮುಂಜಾನೆಯಿಂದಲೇ ಗ್ರ್ಯಾಂಡ್ ಆಗಿ ರಿಲೀಸ್ ಕಂಡ 'ಚಕ್ರವ್ಯೂಹ' ಚಿತ್ರದ ಮೊದಲ ಶೋ ಮುಗಿದಿದೆ. ಅಷ್ಟು ಬೇಗನೇ ಚಿತ್ರದ ಸರಳ ವಿಮರ್ಶೆಯನ್ನು ಫೇಸ್ ಬುಕ್ಕಿನಲ್ಲಿ ನೀಡಿದ್ದಾರೆ ಪುನೀತ್ ಅವರ ಕಟ್ಟಾ ಅಭಿಮಾನಿಯಾದ ಸಾಗರ್ ಮನಸು ಅವರು.[ಚಕ್ರವ್ಯೂಹ ಚಿತ್ರ ಬಿಡುಗಡೆ: ಸಿಡ್ನಿಯಿಂದ ಪುನೀತ್ ಮಾಡಿದ ಮನವಿ]


'Chakravyuha' review by Puneeth Rajkumar fan Sagar Manasu

'ಗೆದ್ದ ಚಕ್ರವ್ಯೂಹ'
"ಅಭಿಮಾನಿಗಳ ಒಂದು ವರ್ಷದ ವನವಾಸ ಇಂದು ಅಂತ್ಯಗೊಂಡಿದೆ. ಪವರ್ ಸ್ಟಾರ್ ಈಸ್ ಬ್ಯಾಕ್, ಅಪ್ಪು ಭರ್ಜರಿಯಾಗಿ 'ಚಕ್ರವ್ಯೂಹ' ಬೇಧಿಸಿದ್ದಾರೆ. ಚಿತ್ರದ ಆರಂಭದಿಂದ ಅಂತ್ಯದವರೆಗೂ ಕಿಂಚಿತ್ತೂ ನಿಮ್ಮ ಗಮನ ಬೇರೆಡೆ ಹೋಗುವುದೇ ಇಲ್ಲ. ಅಷ್ಟರಮಟ್ಟಿಗೆ ಚಿತ್ರ ಕುತೂಹಲಭರಿತವಾಗಿ ಸಾಗುತ್ತದೆ, ಸಮಾಜದ ಗಣ್ಯ ವ್ಯಕ್ತಿಗಳ ಮುಖವಾಡವನ್ನು, ಮುಖವಾಡ ಧರಿಸಿಯೇ ಮಟ್ಟ ಹಾಕುವ ಪುನೀತ್ ಇಲ್ಲಿ ಅಕ್ಷರಶಃ ಜನನಾಯಕ. ತನ್ನ ವಯಸ್ಸಿಗೆ, ವ್ಯಕ್ತಿತ್ವಕ್ಕೆ ತಕ್ಕುದಾದ ಪಾತ್ರವನ್ನು ಅಪ್ಪು ಆಯ್ಕೆ ಮಾಡಿ ಗೆದ್ದಿದ್ದಾರೆ".


"ಅವರ ಸಾಹಸ-ನೃತ್ಯ-ಸಂಭಾಷಣೆ ಒಪ್ಪಿಸುವ ರೀತಿ ಪ್ರೇಕ್ಷಕರಿಗೆ ಹಬ್ಬವೇ ಸರಿ. ನಾಯಕಿ ರಚಿತಾ ರಾಮ್ ಸಿಂಪ್ಲಿ ಸೂಪರ್ಬ್, ಅಪ್ಪು-ರಚಿತಾ ಜೋಡಿ ನೋಡುಗರ ಮನಸೆಳೆಯುತ್ತದೆ. ನಿರ್ದೇಶಕ ಸರವಣನ್ ಕನ್ನಡದ ಪ್ರೇಕ್ಷಕರಿಗೆ ಇಷ್ಟವಾಗುವ ಸಾಮಾಜಿಕ ಕಳಕಳಿಯಿರುವ ಸಿನಿಮಾ ನೀಡಿದ್ದಾರೆ. ಛಾಯಾಗ್ರಹಣ, ಸಂಗೀತ, ಹಿನ್ನಲೆ ಸಂಗೀತ ಎಲ್ಲವೂ ಪೂರಕ ಮತ್ತು ಸುಂದರವಾಗಿದೆ. ಸಾಧು ಕೋಕಿಲಾ ನಗಿಸುತ್ತಾರೆ, ರಂಗಾಯಣ ರಘು ಹೃದಯ ಗೆಲ್ಲುತ್ತಾರೆ, ಖಳನಟ ಅರುಣ್ ವಿಜಯ್ ಗಮನ ಸೆಳೆಯುತ್ತಾರೆ".['ಚಕ್ರವ್ಯೂಹ' ಜಾತ್ರೆ: ಟ್ವಿಟ್ಟರ್ ನಲ್ಲಿ ಪ್ರೇಕ್ಷಕರ ಮತ್ತು ಅಭಿಮಾನಿಗಳ ವಿಮರ್ಶೆ]


"ಒಟ್ಟಾರೆ ಹೇಳುವುದಾದರೆ ಚಕ್ರವ್ಯೂಹ ಹೆಸರಿಗೆ ತಕ್ಕ ಸಿನಿಮಾ, ಅಪ್ಪುಗೆ ಹೇಳಿಮಾಡಿಸಿದ ಸಿನಿಮಾ. ವಿಶ್ವದೆಲ್ಲೆಡೆ ಆರ್ಭಟಿಸುತ್ತಿರುವ ಕನ್ನಡದ ಸಿನಿಮಾ. ಆರಾಮವಾಗಿ ಮನೆಮಂದಿಯೆಲ್ಲ ಚಿತ್ರಮಂದಿರಕ್ಕೆ ಹೋಗಿ ನೋಡಿ. ಯಾಕೆಂದರೆ ಇದು ನಿಮ್ಮ ಸಿನಿಮಾ, ಜನರಿಂದ ಜನರಿಗಾಗಿ ಜನರಿಗೋಸ್ಕರ ಮಾಡಿರೋ ಅದ್ದೂರಿ ಸಿನಿಮಾ. ಜನಸಾಮಾನ್ಯನ ರೇಟಿಂಗ್ 5/5". ಸಿನಿಮಾ ಸೂಪರ್ ಎಂದ ಪ್ರೇಕ್ಷಕರ ಸಂಭ್ರಮ ನೋಡಿ ಈ ವಿಡಿಯೋದಲ್ಲಿ..


ಹೀಗೆ ಅಭಿಮಾನಿ ಸಾಗರ್ ಮನಸು ಅವರು ಫೇಸ್ ಬುಕ್ಕಿನಲ್ಲಿ 'ಚಕ್ರವ್ಯೂಹ' ಚಿತ್ರದ ಮೊದಲ ವಿಮರ್ಶೆ ನೀಡಿದ್ದಾರೆ.'ರಣ ವಿಕ್ರಮ' ಸಿನಿಮಾದ ನಂತರ ಸುಮಾರು 1 ವರ್ಷಗಳ ನಂತರ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿರುವ ಪುನೀತ್ ಅವರ ಸಿನಿಮಾವನ್ನು ಟಿಕೆಟ್ ಸಿಕ್ಕವರು ಇಂದೇ ನೋಡಿ. ಸಿಗದೇ ಇದ್ದವರು ಈ ವೀಕೆಂಡ್ ನಲ್ಲಿ ನಿಮ್ಮ ಟಿಕೆಟ್ ಕಾದಿರಿಸಿ.[ನಾಳೆ 'ಚಕ್ರವ್ಯೂಹ' ಸಿನಿಮಾ ನೋಡ್ತೀರಾ? ಒಂದು ಸರ್ ಪ್ರೈಸ್ ಕಾದಿದೆ.!]


ಆಸ್ಟ್ರೇಲಿಯಾದಲ್ಲಿ ಪ್ರೀಮಿಯರ್ ಶೋ ಸಂದರ್ಭದಲ್ಲಿ ಪುನೀತ್ ಅವರಿಗೆ ಸನ್ಮಾನ ಮಾಡಿದ್ದು, ಮತ್ತು ಇಂದು ಚಿತ್ರಮಂದಿರದ ಎದುರು ಅಭಿಮಾನಿಗಳ ಸಂಭ್ರಮದ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...(ಸಿಡ್ನಿ ಚಿತ್ರಕೃಪೆ: ಪ್ರಸಾದ್ ಹೆಬ್ಬಾರ್)


ಪುನೀತ್ ರ 'ಚಕ್ರವ್ಯೂಹ' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ...

ಪುನೀತ್ ರ 'ಚಕ್ರವ್ಯೂಹ' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ...

-
-
-
-
-
-
-
-
-
-
-
-
-
-
-
-
-
-
-
-
-
-
English summary
Kannada Actor Puneeth Rajkumar fan Sagar Manasu has taken his facebook account to appreciate Puneeth Rajkumar and Rachita Ram starrer, M.Sarvanan Directorial 'Chakravyuha' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada