»   » ಸರ್ಜಾ ಕುಟುಂಬದ ಜೊತೆ 'ಚಾಲೆಂಜಿಂಗ್ ಸ್ಟಾರ್ ದರ್ಶನ್' ಹಾಕಿದ್ರು ಹೆಜ್ಜೆ.!

ಸರ್ಜಾ ಕುಟುಂಬದ ಜೊತೆ 'ಚಾಲೆಂಜಿಂಗ್ ಸ್ಟಾರ್ ದರ್ಶನ್' ಹಾಕಿದ್ರು ಹೆಜ್ಜೆ.!

Posted By:
Subscribe to Filmibeat Kannada

'ಪ್ರೇಮಬರಹ' ಸಿನಿಮಾದ ಹಾಡೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಂಡಿದ್ದಾರೆ. ಇಂದಿನಿಂದ (ಡಿಸೆಂಬರ್ 6) ಚಿತ್ರೀಕರಣ ಶುರುವಾಗಿದ್ದು, ಹನುಮನ ಭಕ್ತನಾಗಿ ಡಿ-ಬಾಸ್ ಹೆಜ್ಜೆ ಹಾಕಿದ್ದಾರೆ. ದರ್ಶನ್ ಜೊತೆಯಲ್ಲಿ ನಟ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಕೂಡ ಹಾಡಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಚಿತ್ರೀಕರಣ ಮುಗಿಸಿರುವ 'ಪ್ರೇಮಬರಹ' ಸಿನಿಮಾವನ್ನ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. 'ಬಿಗ್ ಬಾಸ್' ಖ್ಯಾತಿಯ ಚಂದನ್ ಹಾಗೂ ನಟಿ ಐಶ್ವರ್ಯ ಸರ್ಜಾ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ಆಂಜನೇಯನ ಮುಂದೆ ನೃತ್ಯ

ಹನುಮ ಭಕ್ತರು ಹಾಗೂ ಆಂಜನೇಯನ ಹಾಡುಗಳ ಚಿತ್ರೀಕರಣದಲ್ಲಿ ಕೇಸರಿ ಬಟ್ಟೆಯಲ್ಲಿ ನಟರು ಕಾಣಿಸಿಕೊಳ್ಳುವುದು ಸಾಮಾನ್ಯ. ಅದೇ ರೀತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಹನುಮನ ಭಂಟನ ಲುಕ್ ನಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಸರ್ಜಾ ಫ್ಯಾಮಿಲಿ ವಿತ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಲ್ಲಿ ನಟ 'ಚಿರಂಜೀವಿ ಸರ್ಜಾ' ಕೂಡ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 'ತಿಪ್ಪಸಂದ್ರ'ದ ಆಂಜನೇಯ ದೇವಸ್ಥಾನದ ಬಳಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಹನುಮಾನ್ ಚಾಲೀಸಕ್ಕೆ ಡ್ಯಾನ್ಸ್

ಎಸ್ ಪಿ ಬಾಲಸುಬ್ರಮಣ್ಯಂ ರವರಿಂದ ಹಾಡನ್ನ ಹಾಡಿಸಲಾಗಿದ್ದು, ಜೆಸ್ಸಿಗಿಫ್ಟ್ ಸಂಗೀತ ನಿರ್ದೆಶನಕ್ಕೆ ವಿಜಯ ನರಸಿಂಹ ಸಾಹಿತ್ಯ ಬರೆದಿದ್ದಾರೆ. ಮೋಹನ್ ನೃತ್ಯ ನಿರ್ದೇಶನಕ್ಕೆ ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಅರ್ಜುನ್ ಸರ್ಜಾ ಹೆಜ್ಜೆ ಹಾಕಿದ್ದಾರೆ.

ಅರ್ಜುನ್ ಸರ್ಜಾ ಜೊತೆ ಚಿರು ಹಾಗೂ ಧ್ರುವ

ಇದೇ ಮೊದಲ ಬಾರಿಗೆ ಸರ್ಜಾ ಕುಟುಂಬದ ಮೂವರು ನಾಯಕರು ಒಂದೇ ಹಾಡಿನಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಸಾಕಷ್ಟು ವರ್ಷಗಳಿಂದ ಪೂಜಿಸಿಕೊಂಡು ಬರುತ್ತಿರುವ ಆಂಜನೇಯನ ಹಾಡಿಗೆ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಡ್ಯಾನ್ಸ್ ಮಾಡಿರುವುದು ಹಾಡಿನ ಸ್ಪೆಷಲ್.

English summary
Challenging Star Darshan Dances for 'Prema Baraha' song. Take a look at photos.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada