Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ರೈಲರ್‌ನಲ್ಲಿ ದರ್ಶನ್ 'ಕ್ರಾಂತಿ' : ಬೇರ್ ಬಾಡಿ ಝಲಕ್ ತೋರಿಸಿ ಫ್ಯಾನ್ಸ್ ಮನಗೆದ್ದ ದಾಸ!
ಬಹಳ ದಿನಗಳಿಂದ ದರ್ಶನ್ ಅಭಿಮಾನಿಗಳು ಕಾದು ಕೂತಿದ್ದಕ್ಕೂ ಸಾರ್ಥಕ ಆಗಿದೆ. 'ಕ್ರಾಂತಿ' ಸಿನಿಮಾ ಟ್ರೈಲರ್ ಯಾವಾಗ ರಿಲೀಸ್ ಮಾಡುತ್ತಾರೋ..? ಅದನ್ನು ನಾವು ಯಾವಾಗ ನೋಡುತ್ತೇವೋ ಅಂತ ಕಾದು ಕೂತಿದ್ದ ಅಭಿಮಾನಿಗಳಿಗೆ ಖುಷಿಯಾಗಿರೋದ್ರಲ್ಲಿ ಡೌಟೇ ಇಲ್ಲ.
ಮೊದಲಿನಿಂದಲೂ ದರ್ಶನ್ 'ಕ್ರಾಂತಿ' ಸಿನಿಮಾ ಬಗ್ಗೆ ಹೇಳಿಕೊಂಡು ಬರುತ್ತಲೇ ಇದ್ದಾರೆ. ಟ್ರೈಲರ್ ರಿಲೀಸ್‌ವರೆಗೂ ದರ್ಶನ್ ಕೆಲವು ಅಂಶಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಇದೂವರೆಗೂ ದರ್ಶನ್ ಹೇಳದೇ ರಹಸ್ಯವಾಗಿದ್ದ ಅಂಶಗಳು ಟ್ರೈಲರ್‌ನಲ್ಲಿ ರಿವೀಲ್ ಆಗಿವೆ. ಅದರಲ್ಲಿ ಬೇರ್ ಬಾಡಿ ಸೀನ್ ಕೂಡ ಒಂದು.
ಕ್ರೇಜಿ,
ದಚ್ಚು
ಜೊತೆ
ಕಿಚ್ಚನ
ಸೆಲ್ಫಿ:
ಜೂಮ್
ಮಾಡಿ..
ಜೂಮ್
ಮಾಡಿ
ನೋಡ್ತಿದ್ದಾರೆ
ಫ್ಯಾನ್ಸ್!
ಹೊಸ ಸಿನಿಮಾ ಆರಂಭ ಆಗುತ್ತಿರುವಾಗಲೇ ದರ್ಶನ್ ವರ್ಕ್‌ಔಟ್‌ಗೆ ಇಳಿದು ಬಿಡುತ್ತಾರೆ. ಜಿಮ್‌ನಲ್ಲಿ ದೇಹವನ್ನು ದಂಡಿಸಿ ಒಂದು ಶೇಪ್‌ಗೆ ತರುತ್ತಾರೆ. 'ಕ್ರಾಂತಿ'ಗಾಗಿ ಒಂದು ಸ್ವಲ್ಪ ಕಸರತ್ತು ಹೆಚ್ಚೇ ಮಾಡಿದ್ದಾರೆ. ಇದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಅಷ್ಟಕ್ಕೂ ಈ ಬೇರ್ ಬಾಡಿ ಸೀನ್ ಬಗ್ಗೆ ದರ್ಶನ್ ಏನಂದಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಬೇರ್ ಬಾಡಿಯಲ್ಲಿ ದರ್ಶನ್ ಝಲಕ್
ಬಹಳ ದಿನಗಳಾಗಿತ್ತು. ದರ್ಶನ್ ತಮ್ಮ ಸಿನಿಮಾಗಳಲ್ಲಿ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ದೇಹವನ್ನು ಸಿನಿಮಾಗೆ ಎಷ್ಟು ಬೇಕೋ ಅಷ್ಟು ಮಾತ್ರ ದಂಡಿಸುತ್ತಿದ್ದರು. ಆದರೆ, 'ಕ್ರಾಂತಿ' ಟ್ರೈಲರ್ ಬೇರೆಯದ್ದೇ ಕಥೆಯನ್ನು ಹೇಳುತ್ತಿದೆ. ಟ್ರೈಲರ್ ಕೊನೆಯಲ್ಲಿ ದಾಸನ ಬೇರ್ ಬಾಡಿಯ ಝಲಕ್ ನೋಡಿ ಅಭಿಮಾನಿಗಳು ಅದುರಿ ಹೋಗಿದ್ದಾರೆ. ಸಲ್ಮಾನ್ ಖಾನ್‌ರಂದು ಬೇರ್ ಬಾಡಿ ದೃಶ್ಯದಲ್ಲಿ ಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಹೊಸ 'ಕ್ರಾಂತಿ'ಗೆ ಮುಂದಾಗಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಬೇರ್ ಬಾಡಿ ದೃಶ್ಯದ ಬಗ್ಗೆ ದಾಸ ಏನಂದ್ರು?
'ಕ್ರಾಂತಿ' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಬೇರ್ ಬಾಡಿ ದೃಶ್ಯದ ಬಗ್ಗೆ ದರ್ಶನ್ ಪ್ರತಿಕ್ರಿಯೆಯನ್ನೂ ನೀಡಿದ್ರು. " ಕ್ರಾಂತಿ ಟ್ರೈಲರ್ ನೋಡಿ ಇವತ್ತಿ ವಿಸಿಲ್ ಹಾಕಿದ್ರು. ಕೊರೊನಾ ಟೈಂನಲ್ಲಿ ನೋಡಿದ್ರಾ ಸರ್.. ನಾನು ಎಲ್ಲಾ ಕಡೆಗೂ ಹೇಳ್ತೀನಿ. ಈಗಲೂ ಹೇಳುತ್ತೀನಿ. ಸಿನಿಮಾಗೆ ಎಲ್ಲರೂ ದುಡ್ಡು ಕೊಟ್ಟು ಬರೋದು. ಈಗ ನಾವು ಟ್ರೈಲರ್ ಅನ್ನು ಫ್ರಿಯಾಗಿ ತೋರಿಸಬಹುದು. ಆದರೆ, ಸಿನಿಮಾಗೆ ನೀವೆಲ್ಲಾ ದುಡ್ಡು ಕೊಟ್ಟು ಬರೋದು. ಆ ದುಡ್ಡಿಗೆ ತುಂಬಾನೇ ಮರ್ಯಾದೆ ಕೊಡುತ್ತೇನೆ. ನೀವು ಒಳಗೆ ಬಂದು ಏನಾದರೂ ನೋಡಬೇಕಾದರೆ, ನಾವು ಏನಾದರೂ ತೋರಿಸಬೇಕಲ್ವಾ." ಬೇರ್ ಬಾಡಿ ಸೀನ್ ಬಗ್ಗೆ ದರ್ಶನ್ ಮಾಹಿತಿ ಹಂಚಿಕೊಂಡಿದ್ದಾರೆ.

ಎಷ್ಟು ತಿಂಗಳು ವರ್ಕ್‌ಔಟ್ ಮಾಡಿದ್ರು ದರ್ಶನ್
'ಕ್ರಾಂತಿ' ಟ್ರೈಲರ್‌ನಲ್ಲಿ ಬೇರ್ ಬಾಡಿ ದೃಶ್ಯವನ್ನು ನೋಡುತ್ತಿದ್ದಂತೆ ದರ್ಶನ್ ಎಷ್ಟು ತಿಂಗಳು ವರ್ಕ್‌ಔಟ್ ಮಾಡಿರಬಹುದು ಅನ್ನೋ ಕುತೂಹಲವಿದ್ದೇ ಇತ್ತು. ಅದನ್ನು ಮಾತ್ರ ದರ್ಶನ್ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ. "ಡೆಡಿಕೇಷನ್ ಎಲ್ಲಾ ಬಿಟ್‌ಬಿಡಿ.. ನಿಮಗೆ ಖುಷಿ ಆಯ್ತಾ? ಖುಷಿ ಆದರೆ ಅಷ್ಟೇ ಸಾಕು. ಅದಕ್ಕೆ ಎಷ್ಟು ತಿಂಗಳು ವರ್ಕ್‌ಔಟ್ ಮಾಡಿದ್ದೇವೆ ಅನ್ನೋದೆಲ್ಲಾ ವರ್ಕ್ ಆಗೋದಿಲ್ಲ." ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

'ಕ್ರಾಂತಿ'ಗಾಗಿ ದರ್ಶನ್ ವರ್ಕ್‌ಔಟ್ ಹೇಗಿತ್ತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಶೂಟಿಂಗ್ ಶುರುವಾಗುವುದಕ್ಕಿಂತಲೂ ಮುನ್ನವೇ ವರ್ಕ್‌ಔಟ್ ಆರಂಭಿಸಿದ್ದರು. ಸಿನಿಮಾ ಇರುವಾಗ ದೇಹವನ್ನು ದಂಡಿಸುತ್ತಾರೆ. ಕೊರೊನಾ ಸಮಯದಲ್ಲಿ ಬ್ರೇಕ್ ಕೊಟ್ಟಿದ್ದ ದರ್ಶನ್ ಮತ್ತೆ ಜಿಮ್‌ಗೆ ಎಂಟ್ರಿಕೊಟ್ಟಿದ್ದರು. ಚಿತ್ರೀಕರಣದ ವೇಳೆನೂ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದರು. ಸೆಪ್ಟೆಂಬರ್ 2021ರಲ್ಲಿ ಕ್ರಾಂತಿಗಾಗಿ ವರ್ಕ್‌ಔಟ್ ಶುರುವಾಗಿತ್ತು. ಇದನ್ನು ದರ್ಶನ್ ಅವರೇ ವರ್ಕ್‌ಔಟ್ ವಿಡಿಯೋದಲ್ಲಿ ರಿವೀಲ್ ಮಾಡಿದ್ದಾರೆ.