»   » 'ಚಮಕ್' ಸೆಂಚುರಿ ಸಂಭ್ರಮ: ಸುನಿ, ಗಣಿ, ಸಾನ್ವಿ ಫುಲ್ ಹ್ಯಾಪಿ

'ಚಮಕ್' ಸೆಂಚುರಿ ಸಂಭ್ರಮ: ಸುನಿ, ಗಣಿ, ಸಾನ್ವಿ ಫುಲ್ ಹ್ಯಾಪಿ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ಶತದಿನ ಪೂರೈಸಿದೆ. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡಿದ್ದ ಈ ಸಿನಿಮಾ ಈ ವರ್ಷದಲ್ಲಿ ಸೆಂಚುರಿ ಬಾರಿಸಿದ ಎರಡನೇ ಸಿನಿಮಾ ಎನಿಸಿಕೊಂಡಿದೆ. ಇದಕ್ಕು ಮೊದಲು ಕಳೆದ ವರ್ಷವೇ ಬಿಡುಗಡೆಯಾಗಿದ್ದ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಜೋಡಿಯ 'ಮಫ್ತಿ' ಸಿನಿಮಾ 100 ದಿನ ಪೂರೈಸಿತ್ತು.

ಅಂದ್ಹಾಗೆ, 'ಚಮಕ್' ಸಿನಿಮಾ ಡಿಸೆಂಬರ್ 30. 2017 ರಲ್ಲಿ ಬಿಡುಗಡೆಯಾಗಿತ್ತು. ಇನ್ನು ವಿಶೇಷ ಅಂದ್ರೆ ಚಮಕ್ ಸಿನಿಮಾ ಆರಂಭವಾಗಿ ಕೂಡ ಒಂದು ವರ್ಷ ಆಗಿದೆ. ಕಳೆದ ವರ್ಷ ಏಪ್ರಿಲ್ 6 ರಂದು ಈ ಸಿನಿಮಾ ಮುಹೂರ್ತ ಮಾಡಿಕೊಂಡಿತ್ತು. ಹೀಗಾಗಿ, ಚಮಕ್ ಚಿತ್ರತಂಡಕ್ಕೆ ಇದು ಬಹಳ ಸಂತಸದ ದಿನವಾಗಿದೆ.

ಸಿಂಪಲ್ ಸುನಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಗಣೇಶ್, ರಶ್ಮಿಕಾ ಮಂದಣ್ಣ ನಾಯಕ, ನಾಯಕಿಯಾಗಿ ಅಭಿನಯಿಸಿದ್ದರು. ಇವರ ಜೊತೆ ಸಾಧುಕೋಕಿಲಾ. ರಘುರಾಮ್, ಸುಮಿತ್ರ ಸೇರಿದಂತೆ ಅನೇಕ ಕಲಾವಿದರು ತೆರೆ ಹಂಚಿಕೊಂಡಿದ್ದರು.

Chamak movie completes 100 days

ಜುಡಾ ಸ್ಯಾಂಡಿ 'ಚಮಕ್' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಬಹುತೇಕ ಎಲ್ಲ ಹಾಡುಗಳು ಕೂಡ ಸಂಗೀತ ಪ್ರಿಯರಿಗೆ ಇಷ್ಟವಾಗಿತ್ತು. ಟಿ.ಆರ್ ಚಂದ್ರಶೇಖರ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಇನ್ನುಳಿದಂತೆ ಸಂತೋಷ್ ರೈ ಪತಾಜೆ ಛಾಯಾಗ್ರಹಣ ಮತ್ತು ಮನು ಶೇಡ್ಗಾರ್ ಸಂಕಲನವನ್ನ ಈ ಚಿತ್ರ ಒಳಗೊಂಡಿತ್ತು.

ವಿಶೇಷ ಅಂದ್ರೆ, ಇಂದು ಜಿ.ಟಿ, ಮಾಲ್ ನಲ್ಲಿ ನಡೆಯುವ ಶೋ ನೂರನೇ ದಿನದ ಶೋ ಆಗಲಿದೆ.. ಜಿ,ಟಿ ಮಾಲ್ ನಲ್ಲಿ ನೂರು ದಿನ ಓಡುವ ಮೊದಲ ಚಿತ್ರವಾಗಿ ಚಮಕ್ ನಾಮಂಕಿತಗೊಳ್ಳಲಿದೆ.

English summary
Golden star ganesh and actress rashmika mandanna starrer 'Chamak' movie completes 100 days at bangalore. the movie directed by simple suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X