For Quick Alerts
  ALLOW NOTIFICATIONS  
  For Daily Alerts

  ಡಾರ್ಲಿಂಗ್ ಕೃಷ್ಣ 'Shrikrishnagmail.com'ನಲ್ಲಿ ನಟ ಚಂದನ್ ಕುಮಾರ್

  |

  ಸ್ಯಾಂಡಲ್ ವುಡ್ ನಟ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲವ್ ಮಾಕ್ಟೇಲ್ ಸಕ್ಸಸ್ ಬಳಿಕ ಕೃಷ್ಣಗೆ ಬೇಡಿಕೆ ಜಾಸ್ತಿ ಆಗಿದೆ. ಲವ್ ಮಾಕ್ಟೇಲ್-2 ಸಿನಿಮಾ ಜೊತೆಗೆಯೇ Shrikrishna@gmail.com ಸಿನಿಮಾದಲ್ಲೂ ನಿರತರಾಗಿದ್ದಾರೆ.

  Shrikrishna@gmail.com ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಮೊದಲ ಬಾರಿಗೆ ನಾಗಶೇಖರ್, ಕೃಷ್ಣ ಜೊತೆ ಕೆಲಸ ಮಾಡುತ್ತಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡುವ ಜವಾಬ್ದಾರಿಯನ್ನು ನಾಗಶೇಖರ್ ವಹಿಸಿಕೊಂಡಿದ್ದಾರೆ.

  ಚಂದನ್-ಕವಿತಾ ನಡುವೆ ಸ್ನೇಹನಾ-ಪ್ರೀತಿನಾ: ಅಭಿಮಾನಿಗಳ ಕುತೂಹಲಕ್ಕೆ ಈ ಫೋಟೋಗಳೇ ಕಾರಣ!ಚಂದನ್-ಕವಿತಾ ನಡುವೆ ಸ್ನೇಹನಾ-ಪ್ರೀತಿನಾ: ಅಭಿಮಾನಿಗಳ ಕುತೂಹಲಕ್ಕೆ ಈ ಫೋಟೋಗಳೇ ಕಾರಣ!

  ತೆಲುಗು ಸಿನಿಮಾ ಜೊತೆಗೆ ಕೃಷ್ಣ ಜೊತೆ ಹೊಸ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಅಂದ್ಹಾಗೆ ಇದೀಗ ಈ ಸಿನಿಮಾಗೆ ಮತ್ತೋರ್ವ ನಟ ಎಂಟ್ರಿ ಕೊಟ್ಟಿದ್ದಾರೆ. ಹೌದು, ನಟ ಚಂದನ್ ಕುಮಾರ್ Shrikrishna@gmail.com ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಲವ್ ಯು ಆಲಿಯಾ ಮತ್ತು ಪ್ರೇಮ ಬರಹ ಸಿನಿಮಾಗಳಲ್ಲಿ ನಟಿಸಿದ್ದ ಚಂದನ್ ಕುಮಾರ್ ಇದೀಗ Shrikrishna@gmail.com ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ನಟ ಚಂದನ್ ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

  ಅಂದ್ಹಾಗೆ ಸಿನಿಮಾ ಕನ್ನಡದ ಜೊತೆಗೆ ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಕಾಣಿಸಿಕೊಳ್ಳುತ್ತಿದ್ದಾರೆ. ವಕೀಲೆ ಪಾತ್ರಕ್ಕೆ ಭಾವನಾ ನಟಿಸುತ್ತಿದ್ದಾರೆ. ಇನ್ನೂ ಹಿರಿಯ ನಟ ದತ್ತಣ್ಣ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  Recommended Video

  ಹೆಸರು ಮಾಡಿದ್ರೆ ನಿಮ್ಮಂತೆ ಹೆಸರು ಮಾಡ್ಬೇಕು ಅಂದ ದರ್ಶನ್ ತಂಗಿ ಅಮೂಲ್ಯ | Amulya | Darshan | Filmibeat kannada

  ಈಗಾಗಲೇ 70ರಷ್ಟು ಶೂಟಿಂಗ್ ಮುಗಿಸಿರುವ ಚಿತ್ರತಂಡ ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  English summary
  Chandan Kumar to make a special appearance in Nagshekar 's upcoming film Shrikrishnagmail.com.
  Saturday, October 31, 2020, 14:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X