Just In
Don't Miss!
- News
ವ್ಯರ್ಥ ಮಾಡಲು ಸಮಯವಿಲ್ಲ: ಮೊದಲ ದಿನವೇ ಕರ್ತವ್ಯದಲ್ಲಿ ಬ್ಯುಸಿಯಾದ ಬೈಡನ್
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ಮುಗಿಸಿ ಬರುವ ಚಂದನ್ ಶೆಟ್ಟಿಗೆ ಅಮ್ಮನಿಂದ ಭರ್ಜರಿ ಗಿಫ್ಟ್

'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಕೆಲವೇ ಗಂಟೆಗಳು ಮಾತ್ರ ಬಾಕಿಯಿದೆ. ಚಂದನ್ ಶೆಟ್ಟಿ, ಕಾರ್ತಿಕ್ ಜಯರಾಂ, ನಿವೇದಿತಾ ಗೌಡ, ಶ್ರುತಿ ಪ್ರಕಾಶ್ ಮತ್ತು ದಿವಾಕರ್ ಅವರಲ್ಲಿ ಯಾರು ಈ ಬಾರಿ ಗೆಲ್ಲಬಹುದು ಎಂಬ ಕುತೂಹಲ ಕಾಡುತ್ತಿದೆ.
ಇವರೆಲ್ಲ ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಅವರವರದ್ದೇ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಬಹುಶಃ ಕೆಲವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಗಬಹುದು. ಇನ್ನು ಕೆಲವರಿಗೆ ಬೇರೆ ಅವಕಾಶಗಳು ಸಿಗಬಹುದು.
'ಫಿಲ್ಮಿಬೀಟ್' FB Poll ಪ್ರಕಾರ 'ಬಿಗ್ ಬಾಸ್ ಕನ್ನಡ-5' ವಿನ್ನರ್ 'ಇವರೇ'.!
ಆದ್ರೆ, ಚಂದನ್ ಶೆಟ್ಟಿ ಬಿಗ್ ಬಾಸ್ ಮುಗಿಸಿಕೊಂಡು ಮನೆಗೆ ಬಂದ ನಂತರ ಅಮ್ಮನಿಂದ ವಿಶೇಷವಾದ ಉಡುಗೊರೆಯೊಂದು ಕಾದಿದೆ. ಚಂದನ್ ಶೆಟ್ಟಿಗೆ ಅತ್ಯಂತ ಇಷ್ಟವಾದ ವಸ್ತುವೊಂದನ್ನ ಖರೀದಿಸಿ ಅವರ ತಾಯಿ ಇಟ್ಟುಕೊಂಡಿದ್ದಾರೆ. ಚಂದನ್ ಶೆಟ್ಟಿ ಮನೆಯಿಂದ ಹೊರಬಂದ ಕೂಡಲೇ ಅದನ್ನ ನೀಡಲಿದ್ದಾರೆ. ಅಷ್ಟಕ್ಕೂ, ಏನದು? ಮುಂದೆ ಓದಿ....

ಚಂದನ್ ಗೆ ಅನಿಮಲ್ಸ್ ಅಂದ್ರೆ ಇಷ್ಟ
ಚಂದನ್ ಶೆಟ್ಟಿಗೆ ಪೆಟ್ ಅನಿಮಲ್ಸ್ ಅಂದ್ರೆ ಮೊದಲಿನಿಂದಲೂ ಸಿಕ್ಕಾಪಟ್ಟೆ ಇಷ್ಟ. ನಾಯಿ, ಪಕ್ಷಿಗಳಂದ್ರೆ ತುಂಬ ಇಷ್ಟ. ಬೆಂಗಳೂರಿಗೆ ಬಂದಮೇಲೆ ಅದನ್ನೆಲ್ಲ ಜೊತೆಯಲ್ಲಿ ಇಟ್ಕೊಳ್ಳುವುದಕ್ಕೆ ಆಗಿರಲಿಲ್ಲವಂತೆ. ಅದಕ್ಕಾಗಿ ಅವರ ತಾಯಿ ಮುದ್ದಾದ ಪ್ರಾಣಿಯೊಂದನ್ನ ಉಡುಗೊರೆಯಾಗಿ ನೀಡಲು ತಂದಿದ್ದಾರೆ.

ಮುದ್ದು ನಾಯಿಮರಿ ಗಿಫ್ಟ್
ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ನಾಯಿಮರಿ ಉಡುಗೊರೆಯಾಗಿ ಸಿಗುತ್ತಿದೆ. ರ್ಶಿಜ್ಲಾ ಬ್ರೀಡ್, (ಚೈನಾ) ನಾಯಿ ಮರಿ ಇದು. ಇದರ ಹೆಸರು 'ಆಪಲ್' ಎಂದು ಇಡಬೇಕು ಎನ್ನುವುದು ಚಂದನ್ ಆಸೆಯಾಗಿತ್ತು. ಅದಕ್ಕೆ ಇದರ ಹೆಸರು 'ಆಪಲ್' ಎಂದು ಇಡಲಾಗಿದೆ.
ಫಿನಾಲೆಗೂ ಮುಂಚೆ ನಿರ್ಧಾರವಾಯ್ತು 'ಬಿಗ್ ಬಾಸ್ ಕನ್ನಡ-5 ವಿನ್ನರ್'.!

ಫಿನಾಲೆ ಗೆಲ್ಲುವ ಸ್ಪರ್ಧಿಗಳು
ಬಿಗ್ ಬಾಸ್ ಫಿನಾಲೆಯಲ್ಲಿರುವ ಐದು ಜನರು ಸ್ಪರ್ಧಿಗಳ ಪೈಕಿ ಚಂದನ್ ಶೆಟ್ಟಿ ಗೆಲ್ಲುವ ಫೆವರೇಟ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ಸಮೀಕ್ಷೆಯಲ್ಲೂ ಕೂಡ ಚಂದನ್ ಶೆಟ್ಟಿ ಹೆಚ್ಚು ಮತ ಪಡೆದುಕೊಂಡಿದ್ದಾರೆ.

ನಾಯಕನಾಗಿ ಚಂದನ್ ಶೆಟ್ಟಿ
Rap ಸಂಗೀತದ ಮೂಲಕ ಯಶಸ್ಸು ಕಂಡಿರುವ ಚಂದನ್ ಶೆಟ್ಟಿ ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಸ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ.
'ಬಿಗ್ ಬಾಸ್' ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ: ಇವರ ಮೇಲೆ ಏಕೆ ಇಷ್ಟೊಂದು ಪ್ರೀತಿ.?