»   » ಫೇಸ್ ಬುಕ್ ನಲ್ಲಿ ಗರಂ ಆದ ಸೂಪರ್ ಸ್ಟಾರ್ ಜೆ.ಕೆ

ಫೇಸ್ ಬುಕ್ ನಲ್ಲಿ ಗರಂ ಆದ ಸೂಪರ್ ಸ್ಟಾರ್ ಜೆ.ಕೆ

Posted By:
Subscribe to Filmibeat Kannada

'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಕನ್ನಡ ಜನತೆಯ ಮನೆ ಮನ ತಲುಪಿರುವ ನಟ ಸೂಪರ್ ಸ್ಟಾರ್ ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಮ್. ಕಿರುತೆರೆ ಜೊತೆ ಜೊತೆಗೆ ಬೆಳ್ಳಿತೆರೆಯಲ್ಲೂ ಕಮಾಲ್ ಮಾಡುತ್ತಿದ್ದಾರೆ ಜೆ.ಕೆ.

'ಕೆಂಪೇಗೌಡ', 'ವಿಷ್ಣುವರ್ಧನ', 'ವರದನಾಯಕ' ಚಿತ್ರಗಳಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜೆ.ಕೆ. 'ಜಸ್ಟ್ ಲವ್' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟ ಜೆ.ಕೆ.ಮಿಂಚಿದರು.

ಸ್ಯಾಂಡಲ್ ವುಡ್ ನಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಜೆ.ಕೆ ಈಗ ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಮಗಾದ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ......

ಬೇಸರ ಹೊರಹಾಕಿದ ಜೆ.ಕೆ

ನಟ ಜೆ.ಕೆ ನಟಿಸಿದ್ದ 'ಚಂದ್ರಿಕ' ಸಿನಿಮಾ ಒಂದೇ ವಾರಕ್ಕೆ ಅನೇಕ ಸೆಂಟರ್ ಗಳಿಂದ ಎತ್ತಂಗಡಿ ಆಗಿದೆ. ಇದರಿಂದ ಬೇಸರಗೊಂಡ ಜೆ.ಕೆ ಫೇಸ್ ಬುಕ್ ನಲ್ಲಿ ತಮ್ಮ ಮನದಾಳವನ್ನ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜೆ.ಕೆ ಹಾಕಿರುವ ಸ್ಟೇಟಸ್ ಏನು ಅಂತ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಫೇಸ್ ಬುಕ್ ನಲ್ಲಿ ಜೆ.ಕೆ ಹೇಳಿದ್ದೇನು?

''ಚಂದ್ರಿಕ' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿತ್ತು. ಆದರೂ, ಬಿಗ್ ಸ್ಟಾರ್ ಗಳ ಚಿತ್ರಗಳಿಂದಾಗಿ 'ಚಂದ್ರಿಕ' ಸಿನಿಮಾನ ಥಿಯೇಟರ್ ಗಳಿಂದ ತೆಗೆದು ಹಾಕಲಾಗಿದೆ. ಆದ್ರೂ ಅಡ್ಡಿ ಇಲ್ಲ. ಎಲ್ಲರೂ ಎತ್ತರಕ್ಕೆ ಬೆಳಿಯಲಿ. 'ಚಂದ್ರಿಕ' ಚಿತ್ರವನ್ನ ನೋಡಿ ಹರಸಿದ ಎಲ್ಲರಿಗೂ ಧನ್ಯವಾದ. ಎಲ್ಲರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡುವೆ. ನಮ್ಮಂತಹ ನಟರಿಗೆ ಚಿತ್ರರಂಗದಲ್ಲಿ ಬೆಲೆಯಿಲ್ಲ.!'' ಅಂತ ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ ಜೆ.ಕೆ.

ಕಳೆದ ವಾರ ತೆರೆಕಂಡಿದ್ದ 'ಚಂದ್ರಿಕ'

ಕಳೆದ ವಾರವಷ್ಟೆ ನಟಿ ಕಾಮನಾ ಜೇಟ್ಮಲಾನಿ, ಜೆ.ಕೆ ಅಭಿನಯದ 'ಚಂದ್ರಿಕ' ಸಿನಿಮಾ ತೆರೆಕಂಡಿತ್ತು. ಹಾರರ್ ಚಿತ್ರವಾಗಿರುವ 'ಚಂದ್ರಿಕ'ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು.

'ಪುಲಿ', 'Mr.ಐರಾವತ' ನಿಂದಾಗಿ ಎತ್ತಂಗಡಿ

ನಿನ್ನೆ (ಅಕ್ಟೋಬರ್ 1) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಮತ್ತು 'ಪುಲಿ' ಚಿತ್ರಗಳು ತೆರೆಕಂಡಿದ್ದವು. ಎರಡು ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿದ್ದ ಪರಿಣಾಮ 'ಚಂದ್ರಿಕಾ' ಚಿತ್ರ ಅನೇಕ ಚಿತ್ರಮಂದಿರಗಳಿಂದ ಎತ್ತಂಗಡಿ ಆಯ್ತು.

ಸುದೀಪ್-ದರ್ಶನ್ ಗೆ ಜೆ.ಕೆ ಆಪ್ತ

ಹಾಗ್ನೋಡಿದ್ರೆ, ಕಿಚ್ಚ ಸುದೀಪ್ ಮತ್ತು ದರ್ಶನ್ ಗೆ ಜೆ.ಕೆ ಅತ್ಯಾಪ್ತ. ಇಬ್ಬರು ಸ್ಟಾರ್ ಫ್ರೆಂಡ್ಸ್ ಚಿತ್ರಗಳಿಂದಾಗಿ ಜೆ.ಕೆ ಸಿನಿಮಾ ಒಂದು ವಾರಕಷ್ಟೆ ಸೀಮಿತವಾಯ್ತು.

English summary
Kannada Actor Karthik Jayaram, popularly known as J.K. has taken his facebook account to express his disappointment as his movie 'Chandrika' is out of theaters in just one week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada