Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಚಾರಣೆಗೆ ಬಂದಿದ್ದ ಚಾರ್ಮಿಯನ್ನ ಕೆಟ್ಟದಾಗಿ ಸ್ಪರ್ಶಿಸಿದ ಪೇದೆ
ಟಾಲಿವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಕಚೇರಿಗೆ ವಿಚಾರಣೆಗಾಗಿ ಬಂದಿದ್ದ ನಟಿ ಚಾರ್ಮಿಯ ಬಳಿ ಪೇದೆಯೊಬ್ಬ ಕೆಟ್ಟದಾಗಿ ವರ್ತಿಸಿರುವ ಘಟನೆ ನಡೆದಿದೆ. ಚಾರ್ಮಿ ಕಚೇರಿಗೆ ಪ್ರವೇಶ ಮಾಡುವಾಗ ಚಾರ್ಮಿಯನ್ನ ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ನಟಿ ದೂರು ನೀಡಿದ್ದಾರೆ.
ಕಚೇರಿಗೆ ಆಗಮಿಸಿದಾಗ ಚಾರ್ಮಿಯನ್ನ ಒಳಗೆ ಕರೆದೊಯ್ಯಲು ಮುಂದಾದ ಪೇದೆ, ಚಾರ್ಮಿಯನ್ನ ಹಿಂಭಾಗದಿಂದ ಸ್ಪರ್ಶಿಸಿದ್ದಾನೆ. ಮಹಿಳಾ ಸಿಬ್ಬಂದಿ ಇದ್ದರೂ, ಶ್ರೀನಿವಾಸ್ ಎಂಬಾತ ನಟಿಯನ್ನು ಅನುಚಿತವಾಗಿ ಮುಟ್ಟಿದ್ದಾನೆ. ಇದಕ್ಕೆ ಆಕ್ಷೇಪಿಸಿದ ಚಾರ್ಮಿ ಎಸ್.ಐ.ಟಿ. ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಡ್ರಗ್ಸ್
ಮಾಫಿಯಾ
ವಿಚಾರಣೆಗೆ
ಮುಂಚೆಯೇ
ಹೈ
ಕೋರ್ಟ್
ಮೆಟ್ಟಿಲೇರಿದೆ
ನಟಿ
ಚಾರ್ಮಿ
ತೆಲುಗು ಇಂಡಸ್ಟ್ರಿಯ ಹಲವರನ್ನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ವಿಚಾರಣೆ ನಡೆಸಿದೆ. ನಟಿ ಚಾರ್ಮಿ ಅವರನ್ನ ನಾಂಪಲ್ಲಿಯಲ್ಲಿರುವ ಎಸ್.ಐ.ಟಿ. ಕಚೇರಿಯಲ್ಲಿ ನಿನ್ನೆ (ಜುಲೈ 26) ವಿಚಾರಣೆ ನಡೆಸಲಾಗಿದ್ದು, ಸಂಪೂರ್ಣ ದೃಶ್ಯದ ಚಿತ್ರೀಕರಣ ಮಾಡಲಾಗಿದೆ.
ನಟಿ ಚಾರ್ಮಿ ಕೌರ್ ಮಾತ್ರವಲ್ಲದೇ, ರವಿತೇಜ, ಪೂರಿ ಜಗನ್ನಾಥ್, ಸುಬ್ಬುರಾಜು, ಸೇರಿದಂತೆ 18 ಮಂದಿಗೆ ನೋಟೀಸ್ ನೀಡಲಾಗಿತ್ತು. ಹೀಗಾಗಿ, ಒಬ್ಬೊಬ್ಬರನ್ನೇ ವಿಚಾರಣೆ ನಡೆಸಲಾಗುತ್ತಿದೆ.