For Quick Alerts
  ALLOW NOTIFICATIONS  
  For Daily Alerts

  ಸಾಕಿದ ಪ್ರಾಣಿ ತಿಂದುಬಿಟ್ಟ ಊಟವನ್ನೇ ತಿನ್ನುತ್ತಿರುವ ಸ್ಟಾರ್ ನಟಿ

  By Pavithra
  |

  ಪ್ರಾಣಿಗಳೆಂದರೆ ಯಾರಿಗಾದರೂ ಪ್ರೀತಿ ಇದ್ದೇ ಇರುತ್ತೆ. ಅದರಲ್ಲೂ ಸ್ಟಾರ್ ಗಳಿಗಂತು ಕೊಂಚ ಹೆಚ್ಚಾಗಿಯೇ ಪ್ರೀತಿ ಇರುತ್ತೆ. ಸಿನಿಮಾ ಕಲಾವಿದರು ಅವರ ಅಗತ್ಯಕ್ಕೆ ತಕ್ಕಂತೆ ಪ್ರಾಣಿಗಳನ್ನ ಸಾಕಿಕೊಳ್ಳುತ್ತಾರೆ.

  ತಮ್ಮ ಮನೆಯಲ್ಲಿ ಒಬ್ಬ ಸದಸ್ಯನಂತೆ ಪ್ರಾಣಿಗಳನ್ನ ನೋಡಿಕೊಳ್ಳುತ್ತಾರೆ. ಇನ್ನೂ ಕೆಲವರು ತಾವು ಹೋದ ಕಡೆಯಲ್ಲಾ ತಮ್ಮ ಪೆಟ್ ಗಳನ್ನ ಕರೆದುಕೊಂಡು ಹೋಗುವುದು ಸಾಮಾನ್ಯ ವಿಚಾರ.

  ಸಿನಿಮಾ ಕಲಾವಿದರು ಅಂದ್ರೆ ಸಾಮಾನ್ಯವಾಗಿ ಡಯೆಟ್ ಮಾಡುವುದು ನೋಡಿರುತ್ತೀರಾ, ಆದರೆ ಸಾಕಿದ ಪ್ರಾಣಿಗಳು ತಿಂದು ಬಿಟ್ಟ ಊಟವನ್ನ ತಾವು ತಿನ್ನುವದನ್ನ ನೀವು ಎಲ್ಲಾದರೂ ನೋಡಿದ್ದೀರಾ? ಸ್ಟಾರ್ ನಟಿಯೊಬ್ಬರು ತಮ್ಮ ಪೆಟ್ ತಿಂದು ಬಿಟ್ಟ ಊಟವನ್ನೇ ತಿನ್ನುತ್ತಿದ್ದಾರೆ. ಯಾರು ಆ ನಟಿ? ಅವರಿಗೆ ಯಾಕೆ ಬಂತು ಇಂತಹ ಪರಿಸ್ಥಿತಿ? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

  ಪಕ್ಷಿ ಜೊತೆ ಒಂದೇ ತಟ್ಟೆಯಲ್ಲಿ ಊಟ

  ಪಕ್ಷಿ ಜೊತೆ ಒಂದೇ ತಟ್ಟೆಯಲ್ಲಿ ಊಟ

  ಉಪ್ಪಿ ಜೊತೆಯಲ್ಲಿ ಆಪಲ್ ಆಪಲ್ ಅಂತ ಯಾಕೋ ಅಂತಿಯಾ.. ಅನ್ನೋ ಹಾಡಿನಲ್ಲಿ ಹೆಜ್ಜೆ ಹಾಕಿ ಫೇಮಸ್ ಆಗಿದ್ದ ನಟಿ ಚಾರ್ಮಿ ಪಕ್ಷಿ ಜೊತೆಯಲ್ಲಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾರೆ.

  ಗಿಳಿಗೆ ಕೈ ತುತ್ತು ತಿನ್ನಿಸುವ ನಟಿ

  ಗಿಳಿಗೆ ಕೈ ತುತ್ತು ತಿನ್ನಿಸುವ ನಟಿ

  ನಟಿ ಚಾರ್ಮಿ ಪ್ರತಿ ನಿತ್ಯ ಮಧ್ಯಾಹ್ನ ಊಟ ಮಾಡುವುದು ಅವರೇ ಸಾಕಿರುವ ಮಿಟು ಗಿಳಿಯ ಜೊತೆ. ತಾವು ತಿಂದು ಅದಕ್ಕೂ ಊಟ ಮಾಡಿಸುತ್ತಾರಂತೆ ಚಾರ್ಮಿ. ಮಿಟುವಿಗೆ ಉಪ್ಪಿನ ಕಾಯಿ ಎಂದರೆ ಬಹಳ ಪ್ರೀತಿ. ಗಿಳಿ ಜೊತೆ ಊಟ ಮಾಡುವ ವಿಡಿಯೋವನ್ನ ಚಾರ್ಮಿ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.

  ಚಾರ್ಮಿ ಬಳಿ ಇವೆ ಹಲವು ಸಾಕು ಪ್ರಾಣಿಗಳು

  ಚಾರ್ಮಿ ಬಳಿ ಇವೆ ಹಲವು ಸಾಕು ಪ್ರಾಣಿಗಳು

  ಚಾರ್ಮಿ ಪ್ರಾಣಿ ಪ್ರಿಯೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ತಮ್ಮ ಟ್ವಿಟ್ಟರ್ ನಲ್ಲಿ ಪ್ರಾಣಿಗಳ ಜೊತೆಗಿನ ಸಾಕಷ್ಟು ಫೋಟೋಗಳನ್ನ ಆಗಾಗ ಅಪ್ ಲೋಡ್ ಮಾಡುತ್ತಿರುತ್ತಾರೆ ಚಾರ್ಮಿ.

  ಗೆಸ್ಟ್ ಅಪೀರಿಯನ್ಸ್ ನಲ್ಲಿ ನಟನೆ

  ಸದ್ಯ ಪೂರಿ ಕನೆಕ್ಟ್ ನಲ್ಲಿ ಕೋ ಫೌಂಡರ್ ಆಗಿರುವ ಚಾರ್ಮಿ ಸಿನಿಮಾ ನಿರ್ಮಾಣದತ್ತ ಗಮನ ಹರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಗೆಸ್ಟ್ ಅಪೀರಿಯನ್ಸ್ ಪಾತ್ರದಲ್ಲಿ ಮಾತ್ರ ಚಾರ್ಮಿ ಅಭಿನಯಿಸುತ್ತಿದ್ದಾರೆ.

  English summary
  Actress Charmy Kaur have lots of pets in her home. Actress Charmi have lunch with her parrot daily.
  Tuesday, January 16, 2018, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X