»   » ಶಿವರಾಜ್ ಕುಮಾರ್ ಮಗಳ ಮದುವೆ ಸಿದ್ಧತೆ ಚಿತ್ರಗಳು

ಶಿವರಾಜ್ ಕುಮಾರ್ ಮಗಳ ಮದುವೆ ಸಿದ್ಧತೆ ಚಿತ್ರಗಳು

Posted By:
Subscribe to Filmibeat Kannada

ದೊಡ್ಮನೆಯಲ್ಲಿ ಇದೀಗ ಮದುವೆಯ ಸಂಭ್ರಮ ಮೊದಲ ಮದುವೆಯ ಸಂತಸ, ಸಂಭ್ರಮ ಇಡೀ ರಾಜ್ ಕುಟುಂಬದಲ್ಲಿ ತುಂಬಿ ತುಳುಕಾಡುತ್ತಿದೆ.

ಅಂದಹಾಗೆ ಕರುನಾಡ ಕಣ್ಮಣಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ದೊಡ್ಡ ಮಗಳು ನಿರುಪಮಾ ಅವರ ಮದುವೆ ಕಾರ್ಯದ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದ್ದು, ಈಗಾಗಲೇ ಸಂಗೀತ ಕಾರ್ಯಕ್ರಮ ಕೂಡ ನೆರವೇರಿದೆ.[ಗಾಂಧಿನಗರದ ಅಚ್ಚರಿ.! ಲೀಲಾವತಿ ಮನೆಯಲ್ಲಿ ಶಿವರಾಜ್ ಕುಮಾರ್ ]

ಈ ಸಂಗೀತ ಕಾರ್ಯಕ್ರಮದಲ್ಲಿ ರಾಜ್ ಕುಟುಂಬದ ಹತ್ತಿರದ ಸಂಬಂಧಿಗಳು ಹಾಗು ಕೆಲವು ಸ್ಯಾಂಡಲ್ ವುಡ್ ಸ್ಟಾರ್ ಗಳು ಭಾಗವಹಿಸಿದ್ದರು. ಈಗಾಗಲೇ ಸಂಗೀತ ಕಾರ್ಯಕ್ರಮದ ಸಂಭ್ರಮದ ಕ್ಷಣಗಳ ಫೋಟೋ ಹಾಗೂ ವಿಡಿಯೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.[ಶಿವಣ್ಣನ ಮಗಳ ಮದುವೆಗೆ ಅಮಿತಾಬ್ ಬರ್ತಾರಂತೆ! ]

ಇನ್ನೂ ಮದುಮಗಳು ನಿರುಪಮಾ ಶಿವರಾಜ್ ಕುಮಾರ್ ಅವರನ್ನು ಮದುವೆಯ ಧಿರಿಸಿನಲ್ಲಿ ನೋಡಲು ಕಾತರದಿಂದ ಕಾಯುತ್ತಿರುವ ಎಲ್ಲಾ ಅಭಿಮಾನಿ ಬಳಗದವರಿಗೆ ನಿರುಪಮಾ ಅವರು ಸಂಗೀತ ಕಾರ್ಯಕ್ರಮದ ಕೆಲವಾರು ಫೊಟೋಗಳನ್ನು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಮದುಮಗಳು ನಿರುಪಮಾ ಜೊತೆ ಫ್ಯಾಮಿಲಿ

ಗೋಲ್ಡನ್ ಕಲರ್ ಬಾರ್ಡರ್ ಸೀರೆಯಲ್ಲಿ ಮದುಮಗಳು ನಿರುಪಮಾ ಅವರು ಸಂಪ್ರದಾಯ ದಿರಿಸಿನಲ್ಲಿ ದೇವತೆ ಥರ ಕಾಣುತ್ತಿದ್ದು, ಕುಟುಂಬದ ಸದಸ್ಯರೊಡನೆ ನಿಂತು ತೆಗೆಸಿಕೊಂಡಿರುವ ಫೊಟೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮುರಳಿ, ಪುನೀತ್, ವಿಜಯ ರಾಘವೇಂದ್ರ ಡಾನ್ಸ್

ಮಗಳ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಮಂಡ್ಯದ ಗಂಡು ಅಂಬರೀಶ್, 'ಉಗ್ರಂ' ಶ್ರೀ ಮುರಳಿ, ವಿಜಯ ರಾಘವೇಂದ್ರ ಮುಂತಾದವರ ಜೊತೆ ದೊಡ್ಮನೆ ಹುಡುಗರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ಡಾನ್ಸ್ ಮಾಡುವ ಮೂಲಕ ಸಂಭ್ರಮ ಪಟ್ಟರು. ( ಚಿತ್ರ ಕೃಪೆ ಚಂದನ್ ಗೌಡ)

ನಿರುಪಮಾ ಜೊತೆ ತಂಗಿ ಫೋಸ್

ಅಕ್ಕ ನಿರುಪಮಾ ಜೊತೆ ತಂಗಿಯ ಕ್ಯೂಟ್ ಫೋಸ್[ರಜನಿ, ಕಮಲ್ ಗೆ ಶಿವಣ್ಣನ ಮಗಳ ಮದುವೆಯ ಕರೆಯೋಲೆ ]

ಮಂಡ್ಯದ ಗಂಡು ಅಂಬಿ ಜೊತೆ ಅಪ್ಪು, ವಿನಯ್

ಮಂಡ್ಯದ ಗಂಡು ಅಂಬರೀಶ್ ಜೊತೆ ಅಪ್ಪು ಹಾಗೂ ವಿನಯ್ ರಾಜ್ ಕುಮಾರ್ ಸೆಲ್ಫಿ ಜೊತೆಗೆ ಶಿವಣ್ಣ ಜೊತೆ ಸಂಗೀತ ಕಾರ್ಯಕ್ರಮದಲ್ಲಿ ಅಂಬಿ ಡಾನ್ಸ್

ನಿರುಪಮಾ ಮದುವೆ

ಇನ್ನೇನು ಆಗಸ್ಟ್ 31ಕ್ಕೆ ಅರಮನೆ ಮೈದಾನದಲ್ಲಿರುವ ರಾಜ್ ಮಹಲ್ ನಲ್ಲಿ ನಡೆಯಲಿರುವ ಮದುವೆಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ.

ಮದುವೆಯ ದಿನ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳು ಮದುವೆ ಫೊಟೋ ನೋಡಲು ಕಾತರರಾಗಿದ್ದಾರೆ. ಇನ್ನೂ ಶಿವಣ್ಣ ಮಗಳ ಮದುವೆಯ ಸಂಭ್ರಮದ ಹೆಚ್ಚಿನ ಸುದ್ದಿಗಾಗಿ ಪಿಲ್ಮಿಬೀಟ್ ಕನ್ನಡ ನೋಡುತ್ತಿರಿ.

English summary
Nirupama, the eldest daughter of Hatrick Hero aka Shivarajkumar. The grand ceremony has already begun with a Sangeeth party for friends and closed ones.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada