For Quick Alerts
  ALLOW NOTIFICATIONS  
  For Daily Alerts

  IMDB ಗ್ಲೋಬಲ್ ಟ್ರೆಂಡಿಂಗ್ ಪಟ್ಟಿಯಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ

  |
  KGF Movie: IMDB ಗ್ಲೋಬಲ್ ಟ್ರೆಂಡಿಂಗ್ ಪಟ್ಟಿಯಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ

  ಇತ್ತೀಚಿಗೆ ಕನ್ನಡ ಸಿನಿಮಾಗಳು ರಾಷ್ಟ್ರವ್ಯಾಪಿ ಸದ್ದು ಮಾಡ್ತಿದೆ. ಕೆಜಿಎಫ್, ಯಜಮಾನ ಈಗ ಕೆಮಿಸ್ಟ್ರಿ ಆಫ್ ಕರಿಯಪ್ಪ. ಹೌದು, IMDB ಗ್ಲೋಬಲ್ ಟ್ರೆಂಡಿಂಗ್ ಸಿನಿಮಾಗಳ ಪಟ್ಟಿಯಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಕಾಣಿಸಿಕೊಂಡಿದೆ.

  ಈ ಪಟ್ಟಿಯಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ 'ಲವ್ವರ್ಸ್ ಡೇ' (ಮಲಯಾಳಂ ಒರು ಅದಾರ್ ಲವ್ ಚಿತ್ರದ ತೆಲುಗು ರೀಮೇಕ್) ಮೊದಲ ಸ್ಥಾನದಲ್ಲಿದ್ರೆ, ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ ಕೆಜಿಎಫ್ ಸಿನಿಮಾ ಎರಡನೇ ಸ್ಥಾನದಲ್ಲಿದೆ.

  'ಕೆಮಿಸ್ಟ್ರಿ' ಕರಿಯಪ್ಪನ ಆಟ-ಪಾಠ ನೀವು ನೋಡದಿದ್ರೆ ವೇಸ್ಟಪ್ಪಾ.!

  ಟಾಪ್ ಐದರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಮೂರನೇ ಸ್ಥಾನದಲ್ಲಿತ್ತು. ಅರೇ Imdb ಪಟ್ಟಿಯಲ್ಲಿ ಕಾಣಿಸಿಕೊಳ್ಳುವಷ್ಟು ದೊಡ್ಡ ಸಿನಿಮಾನಾ ಇದು ಎಂದು ಯೋಚಿಸಬೇಡಿ. ಅಷ್ಟು ದೊಡ್ಡ ಬಜೆಟ್ ಚಿತ್ರವಲ್ಲದಿದ್ದರೂ ಅಷ್ಟರ ಮಟ್ಟಿಗೆ ಗಮನ ಸೆಳೆದಿರುವುದ ನಿಜಾ.

  ಅಂದ್ಹಾಗೆ, ಇದು ಸತ್ಯ ಘಟನೆಯನ್ನು ಆಧಾರಿತ ಚಿತ್ರವಾಗಿದ್ದು, ಫೆಬ್ರವರಿ 16 ರಂದು ತೆರೆಗೆ ಅಪ್ಪಳಿಸಲಿದೆ. ಚಂದನ್ ಆಚಾರ್ ಮತ್ತು ತಬಲ ನಾಣಿ ಜೊತೆ ಸಂಜನಾ ಆನಂದ್, ಮೈಕೋ ನಾಗರಾಜ್, ರಾಕ್ ಲೈನ್ ಸುಧಾಕರ್ ಅಭಿನಯಿಸಿದ್ದು, ಈ ಚಿತ್ರವನ್ನ ಕುಮಾರ್ ನಿರ್ದೇಶಿಸಿದ್ದಾರೆ. ಅರವ್ ರಿಶಿಕ್ ಸಂಗೀತ ಸಂಯೋಜಿಸಿದ್ದು, ಎಂ.ಸಿರಿ ಪ್ರೊಡಕ್ಷನ್ಸ್ ನಡಿ ಡಾ. ಮಂಜುನಾಥ್ ಡಿ.ಎಸ್ ಬಂಡವಾಳ ಹೂಡಿದ್ದಾರೆ.

  English summary
  Kirik party fame chandan achar and tabala Nani starring Chemistry of kariyappa movie select in imdb globel trending movies list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X