ಸದ್ದಿಲ್ಲದೇ ಕಾಲಿವುಡ್ ಗೆ ಹಾರಿದ ಕರುನಾಡ ಕುವರ
ಚೇತನ್ ಚಂದ್ರ...ಅಪ್ಪಟ ಕನ್ನಡದ ಈ ಪ್ರತಿಭಾನ್ವಿತ ನಟ, ಹರೆಯದ ಹುಡುಗಿಯರಿಗೆ ಚಿರಪರಿಚಿತ ಅನ್ನುವುದು ಬಿಟ್ಟರೆ, ಗಾಂಧಿನಗರದಲ್ಲಿ ಗುರುತಿಸಿಕೊಂಡಿದ್ದು ಕಡಿಮೆ. ಕಟ್ಟುಮಸ್ತಾದ ದೇಹ, ಸಪೂರ ಮೈಕಟ್ಟು, ಡ್ರೀಮ್ ಬಾಯ್ ಅನ್ನುವ ಪದಕ್ಕೆ ಹೇಳಿಮಾಡಿಸಿದಂತಿರುವ ಬೆಂಗಳೂರಿನ ಈ ಹುಡುಗನಿಗೆ ಸ್ಯಾಂಡಲ್ ವುಡ್ ನಲ್ಲಿ ಒಳ್ಳೆ ಅವಕಾಶಗಳು ಸಿಗ್ಲಿಲ್ಲ.
ಹಾಗೂ ಹೀಗೂ ಹುಚ್ಚುಡುಗ್ರು, ಪ್ರೇಮಿಸಂ, ರಾಜಧಾನಿ, ಕುಂಭರಾಶಿ ಚಿತ್ರಗಳ ಮೂಲಕ ಸದ್ದು ಮಾಡಿದ್ರೂ ನಿರೀಕ್ಷಿಸಿದ ಮಟ್ಟಕ್ಕೆ ಕ್ಲಿಕ್ ಆಗ್ಲಿಲ್ಲ. ಕನ್ನಡದವ್ರು ಗುರುತಿಸದ ಈ ಪ್ರತಿಭೆಗೆ ಇದೀಗ ಕಾಲಿವುಡ್ ಮಣೆ ಹಾಕಿದೆ. ಹೆಸರಾಂತ ನಿರ್ದೇಶಕ ಎ.ಆರ್.ಮುರುಗದಾಸ್ ಶಿಷ್ಯ ವಿ.ಪಿ.ಶಂಕರ್ ನಿರ್ದೇಶಿಸುತ್ತಿರುವ ಚಿತ್ರದ ನಾಯಕನ ಪಾತ್ರಕ್ಕೆ ಚೇತನ್ ಸೆಲೆಕ್ಟ್ ಆಗಿದ್ದಾರೆ. ['+' ಚಿತ್ರದ ಪ್ಲಸ್ ಪಾಯಿಂಟ್ ಔಟ್]


''ವಿಕ್ರಂ, ಅಜಿತ್, ಸೂರ್ಯ ರಂತಹ ಕಾಲಿವುಡ್ ನ ಟಾಪ್ ಹೀರೋಗಳ ಜೊತೆ ಕೆಲಸ ಮಾಡಿರುವ ವಿ.ಪಿ.ಶಂಕರ್ ರವರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಭಾಗ್ಯ'', ಅಂತ ಚೇತನ್ ಹೇಳಿದರು. [ಏಯ್ಟ್ ಪ್ಯಾಕ್ ನಲ್ಲಿ ಚೇತನ್ ಚಂದ್ರ ಸಿಂಹರಾಶಿಗೆ ರೆಡಿ]
ತಮಿಳಿನಲ್ಲಿ 'ನಿಂಡ್ರು ಕೊಲ್ವಾನ್' ಮತ್ತು ಕನ್ನಡದಲ್ಲಿ 'ವ್ಯಾಘ್ರ' ಅನ್ನುವ ಟೈಟಲ್ ಇಟ್ಟಿರುವ ದ್ವಿಭಾಷಾ ಚಿತ್ರಕ್ಕೆ ಚೇತನ್ ಚಂದ್ರ ಈಗಾಗಲೇ ಚಾಲನೆ ನೀಡಿದ್ದಾರೆ. ಸದ್ದಿಲ್ಲದೇ ಚಿತ್ರದ ಶೂಟಿಂಗ್ ಕೂಡ ಕರ್ನಾಟಕ ಮತ್ತು ತಮಿಳುನಾಡಿನ ಹಲವೆಡೆ ಬಿರುಸಿನಿಂದ ಸಾಗುತ್ತಿದೆ. [ಶಿವ ಶಿವ ಪೋಲಿ ಹುಡುಗ್ರಲ್ಲ ಕನ್ನಡದ 'ಹುಚ್ಚುಡುಗ್ರು']

ಆಕ್ಷನ್ ಕಮ್ ಲವ್ ಸ್ಟೋರಿಯಿರುವ ಈ ಚಿತ್ರದಲ್ಲಿ ಚೇತನ್ ಚಂದ್ರಗೆ ನಾಯಕಿಯಾಗಿರುವುದು 2012ನೇ ಸಾಲಿನ ಮಿಸ್ ಇಂಡಿಯಾದಲ್ಲಿ ಭಾಗವಹಿಸಿದ್ದ ಸುಂದರಿ ಕರುಣಾ ಡೋಗ್ರಾ. 8 ಪ್ಯಾಕ್ ಆಬ್ಸ್ ನಿಂದ ಫಿಟ್ ಆಗಿರುವ ಚೇತನ್, ಈ ಚಿತ್ರದಲ್ಲಿ ಹಿಂದೆಂದಿಗಿಂತಲೂ ಭರ್ಜರಿ ಆಕ್ಷನ್ ಮಾಡಲಿದ್ದಾರಂತೆ. ಅದೆಲ್ಲವೂ ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ವಿಜೃಂಭಿಸುವುದು ಮುಂದಿನ ವರ್ಷಾರಂಭಕ್ಕೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











