»   » ಯಶ್ 'ಮಾಸ್ಟರ್ ಪೀಸ್'ಗೆ ವಿಶ್ ಮಾಡಿದ ಚೇತನ್ ಚಂದ್ರ!

ಯಶ್ 'ಮಾಸ್ಟರ್ ಪೀಸ್'ಗೆ ವಿಶ್ ಮಾಡಿದ ಚೇತನ್ ಚಂದ್ರ!

Posted By:
Subscribe to Filmibeat Kannada

ನಟ ಚೇತನ್ ಚಂದ್ರ ಗರಂ ಆಗಿದ್ರು. ಸಂತೋಷ್ ಚಿತ್ರಮಂದಿರದಲ್ಲಿ ತಮ್ಮ ಕಟೌಟ್ ಕಿತ್ತು ಬಿಸಾಡಿದ್ದ ಕಾರಣಕ್ಕೆ ನಟ ಚೇತನ್ ಚಂದ್ರ ಸಿಟ್ಟಾಗಿದ್ರು. ಫೇಸ್ ಬುಕ್ ನಲ್ಲಿ ತಮ್ಮ ಬೇಸರವನ್ನ ಹೊರಹಾಕಿದ್ದರು.

ನಟ ಚೇತನ್ ಬೇಸರಗೊಂಡಿದ್ದ ಸಂಗತಿ ಗೊತ್ತಾಗ್ತಿದ್ದಂತೆ ಥೈಲ್ಯಾಂಡ್ ನಲ್ಲಿ ಶೂಟಿಂಗ್ ನಲ್ಲಿದ್ದ ಯಶ್, ಫೋನ್ ಮಾಡಿ ಚೇತನ್ ಚಂದ್ರ ಜೊತೆ ಮಾತನಾಡಿ, ಇದ್ದ ಭಿನ್ನಾಭಿಪ್ರಾಯ ಶಮನ ಮಾಡಿದ್ದಾರೆ.[ಯಶ್ 'ಮಾಸ್ಟರ್ ಪೀಸ್' ಬಿಡುಗಡೆಗೆ ನೋ ಪ್ರಾಬ್ಲಂ!!]


Chetan Chandra wishes good luck for Yash's Master Piece

ಅಸಲಿಗೆ, ಯಶ್ ಮತ್ತು ಚೇತನ್ ಚಂದ್ರ ಆಪ್ತ ಗೆಳೆಯರು. ಎಷ್ಟರಮಟ್ಟಿಗೆ ಅಂದ್ರೆ ಒಬ್ಬರ ಮನೆಗೆ ಇನ್ನೊಬ್ಬರು ಭೇಟಿ ನೀಡುವಷ್ಟು. 'ರಾಜಧಾನಿ' ಚಿತ್ರದಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ದಾರೆ. ಹೀಗಿರುವಾಗ, ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡುವುದಕ್ಕೆ ಸಾಧ್ಯವೇ?[ಮುಯ್ಯಿಗೆ ಮುಯ್ಯಿ; ಯಶ್ 'ಮಾಸ್ಟರ್ ಪೀಸ್' ಕಟೌಟ್ ಪೀಸ್ ಪೀಸ್!]


ಚೇತನ್ ಹೇಳುವುದು ಇಷ್ಟು :- ''ನನಗೆ ಯಶ್ ಮೇಲೆ ಬೇಸರ ಇಲ್ಲವೇ ಇಲ್ಲ. ನಾನು ಹೇಳುವುದೇನು ಅಂದ್ರೆ, ನಮ್ಮ ಸಿನಿಮಾ 'ಜಾತ್ರೆ' ಇನ್ನೂ ಪ್ರದರ್ಶನವಾಗುತ್ತಿದೆ. ಶೋ ನಡೆಯುವಾಗಲೇ ಕಟೌಟ್ ಕಿತ್ತು ಹಾಕುವುದು ಸರಿಯಲ್ಲ. ನಮ್ಮ ನಿರ್ಮಾಪಕರೂ ಕೂಡ ಕಷ್ಟ ಪಟ್ಟು ಸಿನಿಮಾ ಮಾಡಿದ್ದಾರೆ. ಒಂದು ಕಟೌಟ್ ಹಾಕುವುದಕ್ಕೂ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಎಲ್ಲರಿಗೂ ದುಡ್ಡು ಒಂದೇ.''


Chetan Chandra wishes good luck for Yash's Master Piece

''ಮಾಸ್ಟರ್ ಪೀಸ್' ರಿಲೀಸ್ ಆಗುವುದಕ್ಕೆ ಇನ್ನೂ ಟೈಮ್ ಇದೆ. ಬಿಡುಗಡೆ ಹಿಂದಿನ ದಿನ ನಮ್ಮ ಕಟೌಟ್ ತೆಗೆಯಲಿ ಪರ್ವಾಗಿಲ್ಲ. ಆದ್ರೆ, ಇಷ್ಟು ಬೇಗ ತೆಗೆದರೆ ಜನ ಬರುವವರೂ ಬರೋಲ್ಲ. ಎಲ್ಲಾ ನಿರ್ಮಾಪಕರೂ ಒಂದೇ ಅಲ್ವೇ'' ಅಂತ ಪ್ರಶ್ನೆ ಮಾಡುತ್ತಾರೆ ಚೇತನ್ ಚಂದ್ರ.['ಮಾಸ್ಟರ್ ಪೀಸ್' ಬಿಡುಗಡೆಗೆ ಮುನ್ನ ಏನಿದು ಅಪಸ್ವರ.?]


ಆಗಿರುವ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದರೂ, ನಟ ಯಶ್ ಮತ್ತು 'ಮಾಸ್ಟರ್ ಪೀಸ್' ಸಿನಿಮಾಗೆ ಚೇತನ್ ಚಂದ್ರ ಶುಭ ಹಾರೈಸುತ್ತಾರೆ.


''ಯಶ್ ನನ್ನ ಕ್ಲೋಸ್ ಫ್ರೆಂಡ್. ಅವರು ಕಷ್ಟಪಟ್ಟು ಇಂಡಸ್ಟ್ರಿಯಲ್ಲಿ ಮೇಲೆ ಬಂದಿದ್ದಾರೆ. ಅವರ 'ಮಾಸ್ಟರ್ ಪೀಸ್' ಸಿನಿಮಾ ಯಶಸ್ವಿ ಆಗಲಿ ಅಂತ ಬಯಸುತ್ತೇನೆ. ಆಲ್ ದಿ ಬೆಸ್ಟ್'' ಅಂತ ವಿಶ್ ಮಾಡ್ತಾರೆ ಚೇತನ್ ಚಂದ್ರ. ಅಲ್ಲಿಗೆ, ಸಡನ್ ಆಗಿ ಭುಗಿಲೆದ್ದಿದ್ದ ವಿವಾದ ತಣ್ಣಗಾಗಿದೆ.

English summary
Misunderstanding between Chetan Chandra and Rocking Star Yash over Cutout issue is cleared. Chetan Chandra wishes good luck for 'Masterpiece', which is releasing on December 24th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada