»   » ಚೇತನ್ ನಿರ್ದೇಶನದಲ್ಲಿ 'ಟ್ರೆಂಡ್' ಬದಲಿಸಿದ ಶ್ರೀಮುರಳಿ

ಚೇತನ್ ನಿರ್ದೇಶನದಲ್ಲಿ 'ಟ್ರೆಂಡ್' ಬದಲಿಸಿದ ಶ್ರೀಮುರಳಿ

Posted By:
Subscribe to Filmibeat Kannada
ರೋರಿಂಗ್ ಸ್ಟಾರ್ ಮುರಳಿ ಮುಂದಿನ ಚಿತ್ರ ಯಾವುದು ? | Filmibeat Kannada

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಮಫ್ತಿ' ಸಿನಿಮಾ ಶತದಿನ ಆಚರಿಸಿಕೊಂಡಿದೆ. 'ಉಗ್ರಂ', 'ರಥಾವರ್', 'ಮಫ್ತಿ' ಅಂತಹ ಮಾಸ್ ಸಿನಿಮಾಗಳ ನಂತರ ಶ್ರೀಮುರಳಿ ಹೊಸ ರೀತಿಯ ಚಿತ್ರಕ್ಕೆ ಜೈ ಎಂದಿದ್ದಾರೆ.

ಹೌದು, ಶ್ರೀಮುರಳಿಯ ಮುಂದಿನ ಸಿನಿಮಾ ಪಕ್ಕಾ ಫ್ಯಾಮಲಿ ಎಂಟರ್ ಟೈನ್ ಮೆಂಟ್ ಆಗಿರಲಿದೆ. ಈ ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ.

ಈಗಾಗಲೇ ಕಥೆ ಸಿದ್ದವಾಗಿದ್ದು, ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಆರಂಭವಾಗಿದೆ. ಚಿತ್ರದಲ್ಲಿ ಬಹುದೊಡ್ಡ ತಾರಬಳಗ ಇರಲಿದ್ದು, ಸ್ಟಾರ್ ನಟರನ್ನ ಚಿತ್ರಕ್ಕಾಗಿ ಕರೆತರುವ ಯೋಚನೆಯಲ್ಲಿದೆ ಚಿತ್ರತಂಡ. ಇನ್ನು ಶ್ರೀಮುರಳಿ ಜೊತೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಹುಟ್ಟಿಕೊಂಡಿದ್ದು, ಹುಡುಕಾಟದಲ್ಲಿದೆ ಚಿತ್ರತಂಡ.

chethan bahaddur will direct sri murali

ಈ ಚಿತ್ರವನ್ನ ಶ್ರೀಮುರಳಿ ಅವರ ಸ್ನೇಹಿತರೇ ಸೇರಿ ನಿರ್ಮಾಣ ಮಾಡುತ್ತಿದ್ದು, ಮೇ ತಿಂಗಳಲ್ಲಿ ಸಿನಿಮಾ ಆರಂಭಿಸುವ ಉದ್ದೇಶ ಹೊಂದಿದ್ದಾರೆ. ಅಂದ್ಹಾಗೆ, ಈ ಚಿತ್ರವನ್ನ ಅಧೀಕೃತವಾಗಿ ಯುಗಾದಿ ಹಬ್ಬದಂದು ಘೋಷಿಸುವ ಪ್ಲಾನ್ ಮಾಡಲಾಗಿದೆ.

English summary
Sriimurali catapulted to new heights with Mufti, which ran successfully for 100 days. The actor is set to announce his next project on the auspicious day of Ugadi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada