For Quick Alerts
  ALLOW NOTIFICATIONS  
  For Daily Alerts

  'ರಾಮಸ್ವಾಮಿ' ಅವತಾರವೆತ್ತಿದ ಕ್ರೇಜಿಸ್ಟಾರ್ ರವಿಚಂದ್ರನ್: ರಮ್ಯಾ ಪಾತ್ರ ರಿವೀಲ್ ಆಗೋದ್ಯಾವಾಗ?

  |

  ಕ್ರೇಜಿಸ್ವಾರ್ ರವಿಚಂದ್ರನ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರವಿಚಂದ್ರನ್ ಅಭಿನಯಿಸಿದ್ದ 'ದೃಶ್ಯ 2' ರಿಲೀಸ್ ಆಗಿತ್ತು. ಮಲಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ 'ದೃಶ್ಯಂ 2' ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. 2022ರ ಆರಂಭದಲ್ಲಿ ಕ್ರೇಜಿಸ್ಟಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾ, ರಿಯಾಲಿಟಿ ಶೋ ಅಂತ ಬಿಡುವಿಲ್ಲದೆ ದುಡಿಯುತ್ತಿದ್ದಾರೆ.

  ಕ್ರೇಜಿಸ್ಟಾರ್ ರವಿಚಂದ್ರನ್ ಎರಡು ಸಿನಿಮಾಗಳು ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಅದಕ್ಕೂ ಮುನ್ನವೇ ಮತ್ತೊಂದು ಸಿನಿಮಾಗೆ ಜೈ ಎಂದಿದ್ದಾರೆ. ಈ ಹಿಂದೆ ರವಿಚಂದ್ರನ್ ನಟಿಸಿದ 'ಕನ್ನಡಿಗ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಎನ್‌ ಎಸ್ ರಾಜ್‌ಕುಮಾರ್ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಇವರೇ ನಿರ್ಮಿಸುತ್ತಿದ್ದರುವ ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

   ರಾಮಸ್ವಾಮಿ ಲುಕ್‌ನಲ್ಲಿ ಕ್ರೇಜಿಸ್ಟಾರ್

  ರಾಮಸ್ವಾಮಿ ಲುಕ್‌ನಲ್ಲಿ ಕ್ರೇಜಿಸ್ಟಾರ್

  ಕ್ರೇಜಿಸ್ಟಾರ್ ರವಿಚಂದ್ರನ್ ಗ್ರೀನ್ ಸಿಗ್ನಲ್ ಕೊಟ್ಟಿರುವ ಹೊಸ ಸಿನಿಮಾ 'ರಮ್ಯಾ ರಾಮಸ್ವಾಮಿ'. ಈ ಹಿಂದೆ ಇವರದ್ದೇ 'ಕನ್ನಡಿಗ' ಸಿನಿಮಾ ನಿರ್ಮಿಸಿದ್ದ ರಾಜ್‌ಕುಮಾರ್ 'ರಮ್ಯಾ ರಾಮಸ್ವಾಮಿ' ಚಿತ್ರಕ್ಕೂ ಕೈ ಹಾಕಿದ್ದಾರೆ. ಎನ್‌.ಎಸ್.ರಾಜ್‌ಕುಮಾರ್ ತಮ್ಮ ಓಂಕಾರ್ ಫಿಲ್ಮಂಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್ 'ರಾಮಸ್ವಾಮಿ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, 'ರಮ್ಯಾ' ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವುದು ಸದ್ಯಕ್ಕೀನ್ನೂ ಕುತೂಹಲ.

   ಕ್ರೇಜಿಸ್ಟಾರ್‌ಗೆ ಚಿ. ಗುರುದತ್ ನಿರ್ದೇಶನ

  ಕ್ರೇಜಿಸ್ಟಾರ್‌ಗೆ ಚಿ. ಗುರುದತ್ ನಿರ್ದೇಶನ

  ಕ್ರೇಜಿಸ್ಟಾರ್ 'ರಮ್ಯಾ ರಾಮಸ್ವಾಮಿ' ಚಿತ್ರಕ್ಕೆಸ ಚಿ. ಗುರುದತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹಳ ದಿನಗಳಿಂದ ಸಿನಿಮಾರಂಗದಿಂದ ದೂರವೇ ಉಳಿದಿದ್ದ ಗುರುದತ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಒಂದೇ ವಾರದಲ್ಲಿ ಇವರ ಎರಡು ಸಿನಿಮಾ ಸೆಟ್ಟೇರಿದಂತಾಗಿದೆ. ಈ ಹಿಂದೆ ಚಿ.ಗುರುದತ್ 'ಆರ್ಯನ್' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಡಿ ರಾಜೇಂದ್ರ ಬಾಬು ನಿರ್ದೇಶಿಸುತ್ತಿದ್ದ ಈ ಸಿನಿಮಾವನ್ನ ನಿರ್ದೇಶನ ಮಾಡಿತ್ತಿದ್ದರು. ಅರ್ಧದಲ್ಲಿಯೇ ವಿಧಿವಶರಾಗಿದ್ದರಿಂದ ಗುರುದತ್ ಮುಂದುವರೆಸಿದ್ದರು. 'ದತ್ತ', 'ಕಾಮಣ್ಣನ ಮಕ್ಕಳು', 'ಕಿಚ್ಚ ಹುಚ್ಚ' ದಂತಹ ಸಿನಿಮಾಗಳನ್ನೂ ಗುರುದತ್ ನಿರ್ದೇಶನ ಮಾಡಿದ್ದಾರೆ.

   ಕ್ರೇಜಿ ಸಿನಿಮಾಗೆ ಜನಾರ್ಧನ್ ಮಹರ್ಷಿ ಕಥೆ

  ಕ್ರೇಜಿ ಸಿನಿಮಾಗೆ ಜನಾರ್ಧನ್ ಮಹರ್ಷಿ ಕಥೆ

  'ರಮ್ಯಾ ರಾಮಸ್ವಾಮಿ' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ಅದು ಜನಾರ್ಧನ ಮಹರ್ಷಿ. ಬಹಳ ದಿನಗಳ ಬಳಿಕ ಕನ್ನಡ ಸಿನಿಮಾಗೆ ಜನಾರ್ಧನ್ ಮಹರ್ಷಿ ಕಥೆ ಬರೆದಿದ್ದಾರೆ. ಕನ್ನಡ ಸಾಕಷ್ಟು ಸೂಪರ್‌ ಹಿಟ್ ಸಿನಿಮಾಗಳಿಗೆ ಇವರೇ ಕಥೆ ನೀಡಿದ್ದರು. ಇವರ ಜೊತೆ ರವಿಚಂದ್ರನ್ ಅಚ್ಚು ಮೆಚ್ಚಿನ ಛಾಯಾಗ್ರಾಹಕ ಜಿ.ಎಸ್‌.ವಿ.ಸೀತಾರಾಂ, ಹಾಗೂ 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ.

   ಶಿವಣ್ಣನಿಗೂ ಗುರದತ್ ಆಕ್ಷನ್ ಕಟ್

  ಶಿವಣ್ಣನಿಗೂ ಗುರದತ್ ಆಕ್ಷನ್ ಕಟ್

  ಚಿ.ಗುರುದತ್ ನಿರ್ದೇಶನದ ಸಿನಿಮಾ ಕೆಲವೇ ದಿನಗಳಲ್ಲಿ ಅನೌನ್ಸ್ ಆಗಿತ್ತು. ಬಹಳ ದಿನಗಳ ಬಳಿಕ ಗುರದತ್ ಮತ್ತೆ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ದುಬಾರಿ ನಿರ್ಮಾಪಕ ಸಂದೇಶ್ ನಾಗರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ನಿರ್ಮಾಪಕ ಎನ್ ಎಸ್ ರಾಜ್‌ಕುಮಾರ್ ಈ ಹಿಂದೆ 'ಪೃಥ್ವಿ', 'ಮೈನಾ', 'ಮೈತ್ರಿ', 'ಕನ್ನಡಿಗ'ದಂತಹ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ 'ರಮ್ಯಾ ರಾಮಸ್ವಾಮಿ' ಚಿತ್ರದ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.

  English summary
  Chi Gurudutt directing movie ramya ramaswamy V Ravichandran will play main role. After long time story writer Janardhan Maharshi writing story. N S Rajkumar producing the movie.
  Wednesday, February 9, 2022, 10:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X