Don't Miss!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
8 ವರ್ಷಗಳ ಬಳಿಕ ಶಿವಣ್ಣನಿಗೆ ಚಿ. ಗುರುದತ್ ಆಕ್ಷನ್ ಕಟ್: ಸಂದೇಶ್ ನಾಗರಾಜ್ ನಿರ್ಮಾಣ
ಸಂದೇಶ್ ನಾಗರಾಜ್ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಸಾಕಷ್ಟು ನಟರ ಸಿನಿಮಾಗಳನ್ನು ನಿರ್ಮಾಣ ಮಾಡಿದ ಸಂಸ್ಥೆ ಇದು. ಇತ್ತೀಚೆಗೆ 'ಶ್ರೀಕೃಷ್ಣ@ಜಿಮೇಲ್ ಡಾಟ್ಕಾಮ್' ಸಿನಿಮಾವನ್ನು ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ನಟಿಸಿ, ನಾಗಶೇಖರ್ ನಿರ್ದೇಶನ ಮಾಡಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಂದಕೊಂಡಷ್ಟು ಸದ್ದು ಮಾಡಲಿಲ್ಲ.
ಈಗ ಸಂದೇಶ್ ನಾಗರಾಜ್ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ಸಂದೇಶ್ ನಾಗರಾಜ್ 'ಶ್ರೀಕೃಷ್ಣ@ಜಿಮೇಲ್ ಡಾಟ್ಕಾಮ್' ಬಳಿಕ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಜೊತೆ ಕೈ ಜೋಡಿಸಿದ್ದಾರೆ. ಹಾಗಿದ್ದರೆ, ಶಿವಣ್ಣನ ಹೊಸ ಸಿನಿಮಾದ ಬಗ್ಗೆ ಇರುವ ಹೈ ಲೈಟ್ ಅನ್ನುವುದನ್ನು ನೋಡೋಣ.

ಶಿವಣ್ಣನ ಹೊಸ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ
ದುಬಾರಿ ಸಿನಿಮಾಗಳ ನಿರ್ಮಾಪಕ ಸಂದೇಶ್ ನಾಗರಾಜ್ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ವಿಶೇಷ ಅಂದರೆ, ಈ ಬಾರಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಂದೇಶ್ ನಾಗರಾಜ್ ಶಿವಣ್ಣನ ಸಿನಿಮಾ ನಿರ್ಮಿಸುತ್ತಿದ್ದು, ಈ ಹೊಸ ಕಾಂಬಿನೇಷನ್ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಹೆಚ್ಚಾಗಿದೆ. ಹಿಂದಿನ ಸಿನಿಮಾಗಳಂತೆ ಈ ಸಿನಿಮಾ ಕೂಡ ಅದ್ಧೂರಿಯಾಗಿರುತ್ತೆ ಎನ್ನುವುದನ್ನು ನಿರೀಕ್ಷೆ ಮಾಡಬಹುದು.

ಮತ್ತೆ ನಿರ್ದೇಶನಕ್ಕೆ ಮರಳಿದ ಚಿ ಗುರುದತ್
ಶಿವಣ್ಣನ ಜೊತೆಯಲ್ಲಿಯೇ ಚಿ ಗುರುದತ್ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಗುರುದತ್, ನಿರ್ದೇಶನದಲ್ಲೂ ಹೆಸರು ಮಾಡಿದ್ದಾರೆ. 1995ರಲ್ಲಿ ಶಿವಣ್ಣ ನಟಿಸಿದ 'ಸಮರ' ಚಿತ್ರಕ್ಕೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದರು. 2014ರಲ್ಲಿ ಶಿವಣ್ಣ ಹಾಗೂ ರಮ್ಯಾ ನಟಿಸಿದ 'ಆರ್ಯನ್' ಗುರುದತ್ ನಟಿಸಿದ ಕೊನೆಯ ಸಿನಿಮಾ. ಈಗ ಮತ್ತೆ ಗೆಳೆಯ ಶಿವರಾಜ್‌ಕುಮಾರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಶಿವಣ್ಣ-ಗುರುದತ್ ಸಿನಿಮಾ ಸೀಕ್ರೆಟ್ ರಿವೀಲ್ ಆಗಿಲ್ಲ
ಶಿವಣ್ಣ ಹಾಗೂ ಗೆಳೆಯ ಚಿ ಗುರುದತ್ ಅವರ ಈ ಹೊಸ ಸಿನಿಮಾ ಬಗ್ಗೆ ಅನೌನ್ಸ್ ಆಗಿದೆ ಅಷ್ಟೇ. ಆದರೆ, ಈ ಸಿನಿಮಾದ ಟೈಟಲ್ ಏನು? ಶಿವಣ್ಣನೊಂದಿಗೆ ಯಾರು ನಟಿಸುತ್ತಾರೆ? ತಾಂತ್ರಿಕ ವರ್ಗ ಹೇಗಿದೆ? ಮ್ಯೂಸಿಕ್ ಇವೆಲ್ಲವನ್ನೂ ನಿರ್ದೇಶಕ ಸಂದೇಶ್ ನಾಗರಾಜ್ ಬಿಟ್ಟುಕೊಟ್ಟಿಲ್ಲ. "ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು." ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

ಸಂದೇಶ್ ನಾಗರಾಜ್ ನಿರ್ಮಿಸಿದ ಸಿನಿಮಾಗಳು
ಸಂದೇಶ್ ನಾಗರಾಜ್ ಹಾಗೂ ದರ್ಶನ್ ಇಬ್ಬರೂ ಆತ್ಮೀಯರಾಗಿದ್ದರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಅದ್ದೂರಿ ಸಿನಿಮಾಗಳು ರಿಲೀಸ್ ಆಗಿವೆ. ದರ್ಶನ್ ನಟಿಸಿದ 'ಪ್ರಿನ್ಸ್', 'ಐರಾವತ' ಹಾಗೂ 'ಒಡೆಯ' ಹೈ ಬಜೆಟ್ ಸಿನಿಮಾ ಆಗಿದ್ದವು. ಇದರೊಂದಿಗೆ 'ಅಮರ್', ಶ್ರೀಕೃಷ್ಣ ಜಿಮೇಲ್ ಡಾಟ್ ಸಿನಿಮಾಗಳೂ ಬಿಡುಗಡೆಯಾಗಿವೆ. ಸದ್ಯ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿ ಕಥೆ ಸಿನಿಮಾ ಶೂಟಿಂಗ್ ಮುಗಿದಿದ್ದು, ಶಿವಣ್ಣ ಹಾಗೂ ಗುರುದತ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ.