»   » ಅಂದಿನ ಬಾಲ ನಟರೇ ಇಂದಿನ ಸೂಪರ್ ಸ್ಟಾರ್ ಗಳು

ಅಂದಿನ ಬಾಲ ನಟರೇ ಇಂದಿನ ಸೂಪರ್ ಸ್ಟಾರ್ ಗಳು

Posted By:
Subscribe to Filmibeat Kannada
For Quick Alerts
ALLOW NOTIFICATIONS  
For Daily Alerts

  ಬಣ್ಣದ ಪ್ರಪಂಚಕ್ಕೂ ಕೆಲ ನಟರಿಗೂ ಬಿಡಿಸಲಾಗದ ನಂಟು. ಕೆಲ ನಟರು ಅಚಾನಕ್ಕಾಗಿ ಚಿತ್ರರಂಗ ಪ್ರವೇಶಿಸಿದ್ರೆ, ಇನ್ನೂ ಕೆಲವರು, ಚಿತ್ರರಂಗ ಅಂದ್ರೇನು ಅಂತ ಗೊತ್ತಿಲ್ಲದ ವಯಸ್ಸಲ್ಲೇ ಬಣ್ಣ ಹಚ್ಚಿರ್ತಾರೆ.

  ಚಿಕ್ಕವಯಸ್ಸಲ್ಲೇ ಪುಟ್ಟ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅನೇಕ ಕಲಾವಿದರು, ಇಂದು ಬಹುಬೇಡಿಕೆಯ ಸ್ಟಾರ್ ಗಳಾಗಿದ್ದಾರೆ. ಮಕ್ಕಳ ದಿನಾಚರಣೆಯ ಪ್ರಯುಕ್ತ ಬಾಲನಟರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಇಂದು ಪ್ರಖ್ಯಾತಿ ಗಳಿಸಿರುವ ಕೆಲ ನಟರ ಬಗ್ಗೆ ನಿಮಗೆ ತಿಳಿಸಿಕೊಡ್ತಿವಿ.

  ಪುನೀತ್ ರಾಜ್ ಕುಮಾರ್, ವಿಜಯ್ ರಾಘವೇಂದ್ರ, ಅರ್ಜುನ್ ಸರ್ಜಾ, ಅಮೀರ್ ಖಾನ್, ಶ್ರೀಮುರಳಿ, ಊರ್ಮಿಳಾ...ಹೀಗೆ ಹತ್ತು ಹಲವು ತಾರೆಗಳ ಬಾಲ್ಯದ ಚಿತ್ರಗಳು ಇಲ್ಲಿವೆ. ಸ್ಲೈಡ್ ಗಳನ್ನ ಕ್ಲಿಕ್ ಮಾಡಿ, ಇಂದಿನ ಸೂಪರ್ ಸ್ಟಾರ್ ಗಳ ಫ್ಲ್ಯಾಶ್ ಬ್ಯಾಕ್ ಕಹಾನಿ ತೆರೆದುಕೊಳ್ಳುತ್ತದೆ.

  ಪುನೀತ್ ರಾಜ್ ಕುಮಾರ್
    

  ಪುನೀತ್ ರಾಜ್ ಕುಮಾರ್

  6 ತಿಂಗಳ ಮಗುವಾಗಿದ್ದಾಗಲೇ ಪುನೀತ್ ರಾಜ್ ಕುಮಾರ್ ''ಪ್ರೇಮದ ಕಾಣಿಕೆ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸನಾದಿ ಅಪ್ಪಣ್ಣ, ವಸಂತಗೀತ, ಭಾಗ್ಯವಂತ, ಹೊಸಬೆಳಕು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಯಾರಿವನು, ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಪ್ಪು, ಮಾಸ್ಟರ್ ಲೋಹಿತ್ ಆಗಿದ್ರು. 'ಬೆಟ್ಟದ ಹೂ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನೂ ಗಳಿಸಿದ ಖ್ಯಾತಿ ಅಪ್ಪುಗೆ ಸಲ್ಲಬೇಕು.

  6ನೇ ವಯಸ್ಸಲ್ಲಿ ಹೃತಿಕ್ ಎಂಟ್ರಿ
    

  6ನೇ ವಯಸ್ಸಲ್ಲಿ ಹೃತಿಕ್ ಎಂಟ್ರಿ

  ಬ್ಲಾಕ್ ಬಸ್ಟರ್ ಚಿತ್ರ 'ಕಹೋ ನಾ ಪ್ಯಾರ್ ಹೈ' ಹೃತಿಕ್ ರೋಷನ್ ಮೊದಲ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತು. ಆದರೆ 6 ವರ್ಷದ ಬಾಲಕನಾಗಿರುವಾಗಲೇ ಹೃತಿಕ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ರು ಅನ್ನೋದು ಬಹುತೇಕ ಮಂದಿಗೆ ಗೊತ್ತಿಲ್ಲ. 1980 ರಲ್ಲಿ ತೆರೆಕಂಡ ಆಶಾ, ಸೇರಿದಂತೆ ಅನೇಕ ಚಿತ್ರದಲ್ಲಿ ಬಾಲನಟನಾಗಿ ಹೃತಿಕ್ ನಟಿಸಿದ್ರು.

  ಬಾಲಕ ಅಮೀರ್..!
    

  ಬಾಲಕ ಅಮೀರ್..!

  ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಕೂಡ 'ಯಾದೋನ್ ಕಿ ಬಾರಾತ್' ಚಿತ್ರದಲ್ಲಿ ಬಾಲನಟನಾಗಿ ಅಭಿನಯಸಿದ್ದಾರೆ. ಅದಾದ ವರ್ಷಗಳ ನಂತ್ರ 'ಖಯಾಮತ್ ಸೇ ಖಯಾಮತ್ ತಕ್' ಚಿತ್ರದ ಮೂಲಕ ಹೀರೋ ಆಗಿ ಡೆಬ್ಯೂ ಮಾಡಿದ್ರು.

  ಅರ್ಜುನ್ ಸರ್ಜಾ
    

  ಅರ್ಜುನ್ ಸರ್ಜಾ

  ಇಂದು ಆಕ್ಷನ್ ಕಿಂಗ್ ಅಂತ ಕರೆಸಿಕೊಳ್ಳುವ ಅರ್ಜುನ್ ಸರ್ಜಾ ಕೂಡ, ಹೀರೋ ಅಲ್ಲದ ವಯಸ್ಸಿಗೆ ಕರಾಟೆ ಕಲಿತು, ಕಟ್ಟುಮಸ್ತಾದ ದೇಹ ಬೆಳಸಿ ಸಿಂಹದ ಮರಿ ಸೈನ್ಯಕ್ಕೆ ಲೀಡರ್ ಆಗಿದ್ರು.

  ವಿಜಯ್ ರಾಘವೇಂದ್ರ
    

  ವಿಜಯ್ ರಾಘವೇಂದ್ರ

  ವಿಜಯ್ ರಾಘವೇಂದ್ರ ಈಗಲೂ ''ಚಿನ್ನಾರಿ ಮುತ್ತಾ'' ಅಂತಲೇ ಹೆಸರುವಾಸಿ. ಅದಕ್ಕೆ ಕಾರಣ 1993 ರಲ್ಲಿ ತೆರೆಕಂಡ 'ಚಿನ್ನಾರಿ ಮುತ್ತಾ' ಚಿತ್ರ. ಬಾಲನಟನಾಗಿದ್ದ ವಿಜಯ್ ರಾಘವೇಂದ್ರಗೆ ಅಂದು ಬಹುಬೇಡಿಕೆ ಇತ್ತು.

  'ಸಿಂಗರ್' ಸಂಜಯ್ ದತ್
    

  'ಸಿಂಗರ್' ಸಂಜಯ್ ದತ್

  ಸಂಜಯ್ ದತ್ ಕೂಡ ಪುಟ್ಟ ವಯಸ್ಸಲ್ಲಿ ಚಿತ್ರರಂಗ ಪ್ರವೇಶಿಸಿದವರೆ. 1972ರಲ್ಲಿ ತೆರೆಕಂಡ 'ರೇಶ್ಮಾ ಔರ್ ಶೇರಾ' ಚಿತ್ರದಲ್ಲಿ ಗಾಯಕನಾಗಿ ಸಂಜಯ್ ದತ್ ಮಿಂಚಿದ್ರು.

  ಮಹೇಶ್ ಬಾಬುಗೆ ಭರ್ಜರಿ ಡಿಮ್ಯಾಂಡ್
    

  ಮಹೇಶ್ ಬಾಬುಗೆ ಭರ್ಜರಿ ಡಿಮ್ಯಾಂಡ್

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಈಗ ಎಷ್ಟು ಡಿಮ್ಯಾಂಡ್ ಇದ್ಯೋ, ಅಷ್ಟೇ ಡಿಮ್ಯಾಂಡ್ ಬಾಲನಟರಾಗಿದ್ದಾಗಲೂ ಇತ್ತು. ಬಾಲನಟನಾಗಿ ಮಹೇಶ್ ಬಾಬು ಒಟ್ಟು 9 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  'ಬೇಬಿ ಶಾಮಿಲಿ'
    

  'ಬೇಬಿ ಶಾಮಿಲಿ'

  ಪುಟಾಣಿಯಾಗಿದ್ದಾಗಲೇ ಬಹುಬೇಡಿಕೆ ಹೊಂದಿದ್ದು, ಅತ್ಯಂತ ಜನಪ್ರಿಯವಾಗಿದ್ದ ಬಾಲನಟಿಯಂದ್ರೆ ಬೇಬಿ ಶಾಮಿಲಿ. ಸಖತ್ ಚ್ಯೂಟಿಯಾಗಿದ್ದ ಬೇಬಿ ಶಾಮಿಲಿ ಅನೇಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ರು. ಈಗ ಗುರುತೇ ಸಿಗದಷ್ಟು ಬದಲಾಗಿ ಟಾಲಿವುಡ್ ಹೀರೋಯಿನ್ ಆಗಿದ್ದಾರೆ.

  ಅಮೀರ್ ಮತ್ತು ಇಮ್ರಾನ್..!
    

  ಅಮೀರ್ ಮತ್ತು ಇಮ್ರಾನ್..!

  ಖಯಾಮತ್ ಸೇ ಖಯಾಮತ್ ತಕ್, ಜೋ ಜೀತಾ ವೊಹೀ ಸಿಕಂದರ್ ಸೇರಿದಂತೆ ಅನೇಕ ಆಮೀರ್ ಖಾನ್ ಚಿತ್ರಗಳಲ್ಲಿ ಬಾಲಕ ಆಮೀರ್ ಆಗಿ ನಟಿಸಿದ್ದವರು ಇಮ್ರಾನ್ ಖಾನ್.

  ಊರ್ಮಿಳಾ 'ರಂಗೀಲಾ'
    

  ಊರ್ಮಿಳಾ 'ರಂಗೀಲಾ'

  'ಕಲ್ಯುಗ್' ನಿಂದ ಹಿಡಿದು 'ಮಾಸೂಮ್'ವರೆಗೂ ರಂಗೀಲಾ ಬೆಡಗಿ ಊರ್ಮಿಳಾ ಮತೊಂಡ್ಕರ್ ತುಂಟ ಪುಟ್ಟ ಬಾಲಕಿಯಾಗಿ ಅಭಿನಯಿಸಿದ್ದಾರೆ.

  ಆಲಿಯಾ ಆರಂಗೇಟ್ರಂ
    

  ಆಲಿಯಾ ಆರಂಗೇಟ್ರಂ

  ಬಾಲಿವುಡ್ ನಲ್ಲಿ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಭಟ್ಟರ ಪುತ್ರಿ ಆಲಿಯಾ ಕೂಡ ಬಾಲನಟಿ. 'ಸಂಘರ್ಷ್' ಚಿತ್ರದಲ್ಲಿ ಬಾಲ್ಯದ ಪ್ರೀತಿ ಜಿಂಟಾ ಪಾತ್ರವನ್ನ ಆಲಿಯಾ ನಿರ್ವಹಿಸಿದ್ದರು.

  'ಕ್ಯೂಟ್' ಹನ್ಸಿಕಾ
    

  'ಕ್ಯೂಟ್' ಹನ್ಸಿಕಾ

  ಟಾಲಿವುಡ್ ನ ಬಹುಬೇಡಿಕೆಯ ನಟಿಯಾಗಿರುವ ಹನ್ಸಿಕಾ, ಚಿಕ್ಕವಯಸ್ಸಲ್ಲೇ ಬಣ್ಣದ ಪ್ರಪಂಚಕ್ಕೆ ಕಾಲಿರಿಸಿದ್ದರು. ಹೃತಿಕ್ ಅಭಿನಯದ 'ಕೋಯಿ ಮಿಲ್ ಗಯಾ' ಚಿತ್ರದಲ್ಲಿ ಚೋಟಾ ಹನ್ಸಿಕಾರನ್ನ ನೀವು ನೋಡಬಹುದು.

  ಶ್ರೀಮುರುಳಿ
    

  ಶ್ರೀಮುರುಳಿ

  ವಿಜಯ್ ರಾಘವೇಂದ್ರ ಜೊತೆ ನಟ ಶ್ರೀಮುರುಳಿ ಕೂಡ 'ಚಿನ್ನಾರಿ ಮುತ್ತಾ' ಚಿತ್ರದಲ್ಲಿ ಆಕ್ಟ್ ಮಾಡಿದ್ರು.

  'ಕಾಂಪ್ಲಾನ್ ಬಾಯ್' ಶಾಹಿದ್ ಕಪೂರ್
    

  'ಕಾಂಪ್ಲಾನ್ ಬಾಯ್' ಶಾಹಿದ್ ಕಪೂರ್

  ಚಾಕಲೇಟ್ ಬಾಯ್ ಶಾಹಿದ್ ಕಪೂರ್, ಕಾಂಪ್ಲಾನ್ ಬಾಯ್ ಅನ್ನೋದು ನಿಮ್ಗೊತ್ತಾ? ಹೌದು, 'ಇಶ್ಕ್ ವಿಶ್ಕ್' ಸಿನಿಮಾದಲ್ಲಿ ಕಾಣಿಸಿಕೊಳ್ಳೋಕೂ ದಶಕಗಳ ಹಿಂದೆ ಶಾಹಿದ್ 'ಕಾಂಪ್ಲಾನ್ ಆಡ್' ನಲ್ಲಿ ಮಿಂಚಿದ್ರು.

  ಆಯೇಷಾ ಟಕಿಯಾ
    

  ಆಯೇಷಾ ಟಕಿಯಾ

  ಇನ್ನೂ ಶಾಹಿದ್ ಗೆ ಕಾಂಪ್ಲಾನ್ ಗರ್ಲ್ ಆಗಿ ಮಿಂಚಿದವರು ಆಯೇಷಾ ಟಾಕಿಯಾ.

  ಸನಾ ಸರ್ಪ್ರೈಸ್
    

  ಸನಾ ಸರ್ಪ್ರೈಸ್

  'ಸ್ಟೂಡೆಂಟ್ ಆಫ್ ದಿ ಈಯರ್' ಸನಾ ನೆನಪಿದ್ಯಾ.? ಇಂದು ಬಾಲಿವುಡ್ ನಲ್ಲಿ ಹೊಸ ಮುಖದಂತೆ ಕಾಣೋ ಸನಾ, ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಶಾರೂಖ್ ಮಗಳಾಗಿ ಅಭಿನಯಿಸಿದಾಕೆ.

  English summary
  The stars who are currently ruling bollywood, tollywood and sandalwood film industry were once a small time child actors. As a part of Children's Day, here is the list of child actors who made it big in the industry.
  Please Wait while comments are loading...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more