»   » 'ಅತಿಲೋಕ ಸುಂದರಿ'ಗೆ ಅಂತಿಮ ನಮನ ಸಲ್ಲಿಸಿದ 'ಜಗದೇಕ ವೀರ'

'ಅತಿಲೋಕ ಸುಂದರಿ'ಗೆ ಅಂತಿಮ ನಮನ ಸಲ್ಲಿಸಿದ 'ಜಗದೇಕ ವೀರ'

Posted By:
Subscribe to Filmibeat Kannada

ನಟಿ ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಲು ಎಲ್ಲ ಸಿನಿಮಾ ಇಂಡಸ್ಟ್ರಿಯವರು ಕೂಡ ಮುಂಬೈನಗರಕ್ಕೆ ಆಗಮಿಸುತ್ತಿದ್ದಾರೆ. ಈಗಷ್ಟೇ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಅಗಲಿದ ಶ್ರೀದೇವಿಯ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

ತೆಲುಗು ಸಿನಿಲೋಕದಲ್ಲಿ ಶ್ರೀದೇವಿ ಮತ್ತು ಚಿರಂಜೀವಿಯ ಜೋಡಿ ಹೆಚ್ಚು ಯಶಸ್ಸು ಕಂಡಿತ್ತು. ಈ ಇಬ್ಬರು ನಟಿಸಿದ್ದ 'ಜಗದೇಕ ವೀರ ಅತಿಲೋಕ ಸುಂದರಿ' ಸಿನಿಮಾ ಬಹುದೊಡ್ಡ ಹಿಟ್ ಆಗಿತ್ತು. ಈ ಚಿತ್ರದ ನಂತರ ಶ್ರೀದೇವಿ ಅವರನ್ನ ಅತಿಲೋಕ ಸುಂದರಿ ಎಂದೇ ಕರೆಯುತ್ತಿದ್ದರು.

ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?

ಬರಿ ತೆಲುಗು ಸಿನಿಮಾ ಮಾತ್ರವಲ್ಲದೇ, ಚಿರಂಜೀವಿಯ ಜೊತೆಯಲ್ಲಿ ತಮಿಳು ಮತ್ತು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ರಾಣಿಕಾಸುಲ ರಂಗಮ್ಮ, ಎಸ್.ಪಿ ಪರುಶರಾಮ್, ಮೋಸಗಾಡು, ಜಲ್ಮ್ ಕೀ ಜಂಜೀರ್ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಜೋಡಿ ಒಟ್ಟಾಗಿ ಅಭಿನಯಿಸಿದೆ.

Chiranjeevi pay their last respects to sridevi

ಇನ್ನು ಮತ್ತೊಬ್ಬ ತೆಲುಗು ನಟ ವೆಂಕಟೇಶ್ ಕೂಡ ಶ್ರೀದೇವಿಯ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. 'ಕ್ಷಣಂ ಕ್ಷಣಂ' ಚಿತ್ರದಲ್ಲಿ ವೆಂಕಟೇಶ್ ಮತ್ತು ಶ್ರೀದೇವಿ ಒಟ್ಟಾಗಿ ಅಭಿನಯಿಸಿದ್ದರು.

Chiranjeevi pay their last respects to sridevi

ಇನ್ನುಳಿದಂತೆ ಇಡೀ ಬಾಲಿವುಡ್ ಇಂಡಸ್ಟ್ರಿ ಶ್ರೀದೇವಿಯ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದೆ. ನಗ್ಮಾ, ಐಶ್ವರ್ಯ ರೈ, ಕಾಜೋಲ್, ಹೇಮಾ ಮಾಲಿನಿ, ರೇಖಾ, ಸಂಜಯ್ ಲೀಲಾ ಬನ್ಸಾಲಿ, ಅಜಯ್ ದೇವಗನ್, ಜಾನ್ ಅಬ್ರಾಹಂ, ದೀಪಿಕಾ ಪಡುಕೋಣೆ, ಶಾಹೀದ್ ಕಪೂರ್ ಸೇರಿದಂತೆ ಅನೇಕರು ಶ್ರೀದೇವಿಯ ಅಂತಿಮ ದರ್ಶನ ಪಡೆದಿದ್ದಾರೆ.

'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!

ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

English summary
Telugu actor Megastar Chiranjeevi and Venkatesh arrive to pay their last respects to his co-actress sridevi at mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada