For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ನಟನೆಯ 'ಗಾಡ್ ಫಾದರ್' ಬಿಡುಗಡೆಗೆ ಅಡಚಣೆ

  |

  ಚಿರಂಜೀವಿ ನಟನೆಯ 'ಗಾಡ್ ಫಾದರ್' ಸಿನಿಮಾ ಅಕ್ಟೋಬರ್ 05ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಆ ದಿನ ಬಿಡುಗಡೆ ಆಗುತ್ತಿಲ್ಲ.

  ಚಿರಂಜೀವಿ ನಟನೆಯ ಈ ಹಿಂದಿನ ಸಿನಿಮಾ 'ಆಚಾರ್ಯ' ಹೀನಾಯ ಸೋಲು ಕಂಡ ಕಾರಣ ಸರಣಿ ರಜೆಗಳಿರುವ ಹಬ್ಬದ ವೇಳೆಗೆ 'ಗಾಡ್ ಫಾದರ್' ಸಿನಿಮಾವನ್ನು ಬಿಡುಗಡೆ ಮಾಡಬೇಕೆಂಬುದು ಚಿತ್ರತಂಡದ ಬಯಕೆಯಾಗಿದೆ. ಆದರೆ ಚಿತ್ರತಂಡ ಅಂದುಕೊಂಡಂತೆ ಸಿನಿಮಾ ಬಿಡುಗಡೆ ಮಾಡಲಾಗುತ್ತಿಲ್ಲ.

  ನವರಾತ್ರಿಯ ಕೊನೆಯ ದಿನಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯತ್ನಿಸುತ್ತಿದೆ. ಆದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಇನ್ನೂ ಮುಗಿದಿಲ್ಲವಾದ್ದರಿಂದ ನಿಗದಿತ ಸಮಯಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.

  ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಮುಗಿಯಲು ಸಾಕಷ್ಟು ಕಾಲಾವಕಾಶದ ಅವಶ್ಯಕತೆ ಇದೆ. ಆದರೆ ಸಿನಿಮಾದ ಬಿಡುಗಡೆಗೆ ಮೂರು ವಾರಕ್ಕಿಂತಲೂ ಕಡಿಮೆ ದಿನ ಉಳಿದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಮುಗಿಸಲು ಕಷ್ಟಸಾಧ್ಯವೆನ್ನಲಾಗುತ್ತಿದೆ.

  'ಗಾಡ್‌ಫಾದರ್' ಸಿನಿಮಾವು ರಾಜಕೀಯ ಹಾಗೂ ಮಾಫಿಯಾ ಕತೆಯನ್ನು ಹೊಂದಿರುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ನಟ ಚಿರಂಜೀವಿ ಜೊತೆಗೆ ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ ಸಹ ನಟಿಸಿದ್ದಾರೆ. ನಾಯಕಿಯಾಗಿ ನಯನತಾರಾ ಇದ್ದಾರೆ. ಜೊತೆಗೆ ನಟ ಸುನಿಲ್, ಮುರಳಿ ಶರ್ಮಾ, ಸತ್ಯದೇವ ಕಾಂಚಾರಾಣ, ಬ್ರಹ್ಮಾಜಿ ಹಾಗೂ ವಿಶೇಷ ಪಾತ್ರದಲ್ಲಿ ಪುರಿ ಜಗನ್ನಾಥ್ ಸಹ ನಟಿಸುತ್ತಿದ್ದಾರೆ.

  'ಗಾಡ್ ಫಾದರ್' ಸಿನಿಮಾವನ್ನು ಮೋಹನ್ ರಾಜ್ ನಿರ್ದೇಶನ ಮಾಡಿದ್ದು, ಮಲಯಾಳಂನ 'ಲುಸಿಫರ್' ಸಿನಿಮಾದ ರೀಮೇಕ್ ಇದಾಗಿದೆ. ಮೂಲ ಸಿನಿಮಾದಲ್ಲಿ ಮೋಹನ್‌ಲಾಲ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನ ಮಾಡಿ ಅತಿಥಿ ಪಾತ್ರದಲ್ಲಿ ನಟಿಸಿರುವುದು ಪೃಥ್ವಿರಾಜ್ ಸುಕುಮಾರ್.

  'ಗಾಡ್ ಫಾದರ್' ಸಿನಿಮಾದ ಬಳಿಕ 'ಭೋಲೆ ಶಂಕರ್' ಸಿನಿಮಾದಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಆ ಬಳಿಕ 'ವಾಲ್ಟರ್ ವೀರಯ್ಯ' ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Chiranjeevi's God Father movie may not release on October 05 due to incomplete post production work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X