For Quick Alerts
  ALLOW NOTIFICATIONS  
  For Daily Alerts

  ನಟ ಚಿರಂಜೀವಿ ಸರ್ಜಾ ವಿಧಿವಶ: ನಾಳೆ 11ಗಂಟೆಗೆ ಅಂತ್ಯಕ್ರಿಯೆ

  |

  ಸ್ಯಾಂಡಲ್ ವುಡ್ ನಲ್ಲಿ ಚಿರು ಅಂತ ಖ್ಯಾತಿಗಳಿಸಿರುವ ನಟ ಚಿರಂಜೀವಿ ಸರ್ಜಾ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಚಿಕ್ಕವಯಸ್ಸಿನಲ್ಲಿಯೆ ಜೀವನ ಮುಗಿಸಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಜಿರಂಜೀವಿ ಸರ್ಜಾ ಅವರ ದಿಢೀರ್ ಸಾವು ಕುಟುಂಬದವರಿಗೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ದೊಡ್ಡ ಆಘಾತವೊಂಟು ಮಾಡಿದೆ.

  Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | FILMIBEAT KANNADA

  ಸರ್ಜಾ ಕುಟುಂಬವೀಗ ಅರ್ಜುನ್ ಸರ್ಜಾ ಮತ್ತು ಅಜ್ಜಿಗಾಗಿ ಕಾಯುತ್ತಿದ್ದಾರೆ. ಚೆನ್ನೈನಲ್ಲಿರುವ ಅರ್ಜುನ್ ಸರ್ಜಾ ಕುಟುಂಬ ಬೆಂಗಳೂರಿಗೆ ಬರಲು ಇನ್ನೂ ನಾಲ್ಕು ಗಂಟೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇಂದು ರಾತ್ರಿ ವೇಳೆ ಅರ್ಜುನ್ ಸರ್ಜಾ ಬೆಂಗಳೂರಿಗೆ ಬರಲಿದ್ದಾರೆ. ನಾಳೆ ಬೆಳಗ್ಗೆ 11ಗಂಟೆ ಸುಮಾರಿಗೆ ಚಿರು ಸರ್ಜಾ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಚಿರು ಸರ್ಜಾ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆಯಾ ಅಥವಾ ಸರ್ಜಾ ಕುಟುಂಬದ ಮೂಲ ಊರಾದ ತುಮಕೂರಿ ಜೆಲ್ಲಿಯ ಮಧುಗಿರಿಯಲ್ಲಿ ನಡೆಯಲಿದೆಯಾ ಎನ್ನುವುದು ಇನ್ನು ಅಧಿಕೃತವಾಗಿಲ್ಲ.

  ಮಗುವಿನ ಮುಖ ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾಮಗುವಿನ ಮುಖ ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾ

  ಇಂದು ಮದ್ಯಾಹ್ನ 2ಗಂಟೆ ಸುಮಾರಿಗೆ ಚಿರಂಜೀವಿ ಸರ್ಜಾಗೆ ಹೃದಯಾಘಾತ ವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೆ ಚಿರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಚಿರು ಪಾರ್ಥಿವ ಶರೀರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದು, ಕೊರೊನಾ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರವಾಗಲಿದೆ.

  ಆಸ್ಪತ್ರೆಯಲ್ಲಿ ಸದ್ಯ ಚಿರಂಜೀವಿ ಅವರ ಇಡೀ ಕುಟುಂಬವಿದೆ. ಜೊತೆಗೆ ಸ್ಯಾಂಡಲ್ ವುಡ್ ಕಲಾವಿದರಾದ, ತಾರಾ, ನಿರ್ಮಾಪಕ ಕೆ ಮಂಜು, ಕಿಚ್ಚ ಸುದೀಪ್ ಸೇರಿದ್ದಂತೆ ಅನೇಕರು ಆಸ್ಪತ್ರೆಯಲ್ಲಿ ಬೀಡುಬಿಟ್ಟಿದ್ದಾರೆ.

  English summary
  Actor chiranjeevi sarja dies of heart Attack at the age of 39.The funeral will take place on June 7 at 11am

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X