»   » ಪ್ರೇಮಿಗಳ ದಿನ ಅಭಿಮಾನಿಗಳೊಂದಿಗೆ ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡ ಚಿರು-ಮೇಘನಾ

ಪ್ರೇಮಿಗಳ ದಿನ ಅಭಿಮಾನಿಗಳೊಂದಿಗೆ ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡ ಚಿರು-ಮೇಘನಾ

Posted By:
Subscribe to Filmibeat Kannada

ವರ್ಷಗಳ ಕಾಲ ಪ್ರೇಮ ಪಾಶದಲ್ಲಿ ಬಂಧಿಯಾಗಿದ್ದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಜೆ.ಪಿ.ನಗರದ ಮೇಘನಾ ರಾಜ್ ನಿವಾಸದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದ ಬಳಿಕ ಲೀಲಾ ಪ್ಯಾಲೇಸ್ ನಲ್ಲಿ ಗ್ರ್ಯಾಂಡ್ ಫಂಕ್ಷನ್ ನಡೆಯಿತು.

ಕನ್ನಡ ಚಿತ್ರರಂಗದ ದಿಗ್ಗಜರ ಮುಂದೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಉಂಗುರ ಬದಲಾಯಿಸಿಕೊಂಡರು. ಚಿರು-ಮೇಘನಾ ಬಾಳಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ನಿಶ್ಚಿತಾರ್ಥದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Chiranjeevi Sarja-Meghana Raj shares their engagement video on Valentine's Day

ಅಷ್ಟಕ್ಕೂ, ಎಂಗೇಜ್ ಮೆಂಟ್ ವಿಡಿಯೋನ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸ್ವತಃ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್. ಅದು ಪ್ರೇಮಿಗಳ ದಿನದ ಪ್ರಯುಕ್ತ.

ಫೋಟೋ ಆಲ್ಬಂ: ಲೀಲಾ ಪ್ಯಾಲೇಸ್ ನಲ್ಲಿ ಚಿರು-ಮೇಘನಾ 'ರಾಯಲ್' ನಿಶ್ಚಿತಾರ್ಥ

ಪರಸ್ಪರ ಪ್ರೀತಿಸಿ ಇದೀಗ ಮದುವೆ ಆಗಲು ಮುಂದಾಗಿರುವ ಚಿರು-ಮೇಘನಾ, ಪ್ರೇಮಿಗಳ ದಿನದಂದು ತಮ್ಮ ನಿಶ್ಚಿತಾರ್ಥದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ.

ಅಂದ್ಹಾಗೆ, ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿಯ ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

English summary
Chiranjeevi Sarja-Meghana Raj have taken their Facebook, Twitter account to share their engagement video on Valentine's Day.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X