For Quick Alerts
  ALLOW NOTIFICATIONS  
  For Daily Alerts

  ಮಗನ ಸಿನಿಮಾ ನೋಡಿ ಚಿತ್ರಮಂದಿರದಲ್ಲಿ ಕಣ್ಣೀರಿಟ್ಟ ಚಿರಂಜೀವಿ ಸರ್ಜಾ ತಾಯಿ

  |

  ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಟಿಸಿರುವ ಶಿವಾರ್ಜುನ ಸಿನಿಮಾ ರೀ ರಿಲೀಸ್ ಆಗಿದೆ. ಕೊರೊನಾ ಲಾಕ್ ಡೌನ್ ಬಳಿಕ ಸುಮಾರು 7 ತಿಂಗಳ ನಂತರ ಚಿತ್ರಮಂದಿರಗಳು ಓಪನ್ ಆಗಿದ್ದು, ಚಿರು ಅಭಿನಯದ ಶಿವಾರ್ಜುನ ಸಿನಿಮಾ ರಾಜ್ಯಾದ್ಯಂತ ಮತ್ತೆ ಬಿಡುಗಡೆಯಾಗಿದೆ.

  ಮಗನ ಸಿನಿಮಾ ನೋಡಲು ಥಿಯೇಟರ್ ಗೆ ಬಂದ ಚಿರು ತಾಯಿ | Chiranjeevi Sarja Mother | Filmibeat Kannada

  ಚಿರು ಸರ್ಜಾನನ್ನು ತೆರೆ ಮೇಲೆ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಕುಟುಂಬದವರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಭಾವುಕರಾಗಿದ್ದಾರೆ. ಚಿರು ತಾಯಿ ಅಮ್ಮಾಜಿ ಸೇರಿದಂತೆ ಕುಟುಂಬದವರು ಮಗನ ಸಿನಿಮಾ ವೀಕ್ಷಿಸಲು ಸಂತೋಷ್ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ವೀಕ್ಷಿಸಿದ ತಾಯಿ ಅಮ್ಮಾಜಿ ಮಗನನ್ನು ತೆರೆಮೇಲೆ ನೋಡಿ ಕಣ್ಣೀರಿಟ್ಟಿದ್ದಾರೆ.

  ಚಿರು ಹುಟ್ಟುಹಬ್ಬಕ್ಕೆ ಶುಭಕೋರಿದ ಧ್ರುವ ಸರ್ಜಾ: ಜೂನಿಯರ್ ಚಿರು ಸುಳಿವು ನೀಡಿದ ಆಕ್ಷನ್ ಪ್ರಿನ್ಸ್

  ಶಿವಾರ್ಜುನ ಸಿನಿಮಾ ಲಾಕ್ ಡೌನ್ ಗೂ ಮೊದಲು ರಿಲೀಸ್ ಆಗಿತ್ತು. ಆದರೆ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಕೊರೊನಾ ವೈರಸ್ ನಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಯಿತು. ಇದೀಗ ಮತ್ತೆ ಚಿತ್ರಮಂದಿರಗಳು ಓಪನ್ ಆಗುತ್ತಿದ್ದಂತೆ ಶಿವಾರ್ಜುನ ಸಿನಿಮಾ ಬಿಡುಗಡೆ ಮಾಡಲಾಗಿದೆ. ಚಿರು ಸಿನಿಮಾ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಆಗಮಿಸಿದ್ದರು.

  ಚಿತ್ರಮಂದಿರದ ಮುಂದೆ ಚಿರಂಜೀವಿ ಸರ್ಜಾ ಕಟೌಟ್ ನಿಲ್ಲಿಸಲಾಗಿದೆ. ಅಭಿಮಾನಿಗಳು ಕಟೌಟ್ ಗೆ ಹೂವಿನ ಹಾರ ಹಾಕಿ ಪೂಜೆ ಮಾಡಿದ್ದಾರೆ. ಅಂದ್ಹಾಗೆ ನಾಳೆ ಅಕ್ಟೋಬರ್ 17, ಚಿರು ಸರ್ಜಾ ಹುಟ್ಟಿದ ದಿನ. ಈ ವಿಶೇಷ ದಿನದಂದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ. ಅಭಿಮಾನಿಗಳು ಮತ್ತೊಮ್ಮೆ ಚಿರುನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

  English summary
  Chiranjeevi Sarja mother Ammaji tears watching her son movie in Theatre.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X