For Quick Alerts
  ALLOW NOTIFICATIONS  
  For Daily Alerts

  'ಚಿಟ್ ಫಂಡ್ ಸಂಸ್ಥೆ'ಯಿಂದ ಸಂಜನಾಗೆ ವಂಚನೆ ಪ್ರಕರಣ: ಸಿಐಡಿಯಿಂದ ತನಿಖೆ

  By Bharath Kumar
  |

  ಕನ್ನಡ ನಟಿ ಸಂಜನಾ ಸೇರಿದಂತೆ ಹಲವರಿಗೆ 'ಪ್ರಸಿದ್ಧಿ ಚಿಟ್ ಫಂಡ್ ಪ್ರೈವೆಟ್ ಲಿಮಿಟೆಡ್' ಕಂಪನಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಪ್ರಕರಣವನ್ನ ಕರ್ನಾಟಕ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ.

  ಮಲ್ಲೇಶ್ವರಂನಲ್ಲಿದ್ದ ಚಿಟ್ ಫಂಡ್ ಸಂಸ್ಥೆ, ನಟಿ ಸಂಜನಾ ಸೇರಿದಂತೆ ನೂರಕ್ಕೂ ಅಧಿಕ ಜನರಿಂದ ಹಣ ಪಡೆದಿದ್ದ ವಂಚನೆ ಮಾಡಿದೆ. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  'ಪ್ರಸಿದ್ಧಿ ಚಿಟ್ ಫಂಡ್'ನಿಂದ ನಟಿ ಸಂಜನಾಗೆ 28 ಲಕ್ಷ ವಂಚನೆ.!

  ಇದೀಗ, ಈ ಪ್ರಕರಣವನ್ನ ಸರ್ಕಾರ ಸಿಐಡಿಗೆ ಹಸ್ತಾಂತರ ಮಾಡಿದ್ದು, ಚಿಟ್ ಫಂಡ್ ಸಂಸ್ಥೆಯ ಮುಖ್ಯಸ್ಥ ಮಹೇಶ್, ವ್ಯವಸ್ಥಾಪಕ ನಿರ್ದೇಶಕಿ ನಿರೂಪಾ ಅವರಿಗೆ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ನೀಡಿದೆ.

  ಘಟನೆ ಹಿನ್ನೆಲೆ

  ನಟಿ ಸಂಜನಾ ಅವರಿಗೆ 2014ರಲ್ಲಿ ಮಹೇಶ್, ನಿರೂಪಾ ದಂಪತಿ ಪರಿಚಯವಾಗಿತ್ತು. ಸಂಸ್ಥೆಯಲ್ಲಿ ಹಣ ಹೂಡಿ ಲಾಭಗಳಿಸಿ ಎಂದು ನಂಬಿಸಿದ್ದ ದಂಪತಿಗಳು, ಸಂಜನಾ ಅವರಿಂದ 10 ಲಕ್ಷ ಮೊತ್ತದ ಚೀಟಿ ಹಾಕಿಸಿದ್ದರು. 2016ರಲ್ಲಿ ಪುನಃ 10 ಲಕ್ಷ ರೂ. ಮೊತ್ತದ ಚೀಟಿ ಕಟ್ಟಿದ್ದರು. ಚೀಟಿ ಹಣವನ್ನು ವಾಪಸ್ ಕೊಡದೆ ಸಂಸ್ಥೆ ವಂಚಿಸಿತ್ತು. 2006ರಿಂದ ಮಲ್ಲೇಶ್ವರಂನಲ್ಲಿ ಸಂಸ್ಥೆ ಕಚೇರಿ ಹೊಂದಿದೆ.

  English summary
  Karnataka government hand over the Prasiddhi Chit Fund cheating case to CID. Kannada film actor Sanjjanaa Galrani and several investors cheated by company.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X