»   » 'ರಣವಿಕ್ರಮ' ಕುರಿತ ಹೇಳಲೇಬೇಕಾದ ವಿಚಾರಗಳು

'ರಣವಿಕ್ರಮ' ಕುರಿತ ಹೇಳಲೇಬೇಕಾದ ವಿಚಾರಗಳು

By: ಜೀವನರಸಿಕ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಶುಕ್ರವಾರ (ಏ.10) ರಾಜ್ಯದಾದ್ಯಂತ ತೆರೆಗಪ್ಪಳಿಸಲಿದೆ. ಚಿತ್ರ ಮುಹೂರ್ತ ಮಾಡಿದ ದಿನದಿಂದ ನಿರ್ದೇಶಕ ಪವನ್ ಒಡೆಯರ್ ನೆಮ್ಮದಿಯಾಗಿ ನಿದ್ರೆ ಕೂಡ ಮಾಡದೆ, ತಲೆಕೆಡಿಸಿಕೊಂಡು ಸಿನಿಮಾ ಮುಗಿಸಿದ್ದಾರೆ.

ಪವನ್ ಒಡೆಯರ್ ನಿರ್ದೇಶನದ 'ಗೂಗ್ಲಿ' ಮತ್ತು 'ಗೋವಿಂದಾಯ ನಮಃ' ಎರಡೂ ಹಿಟ್ ಸಿನಿಮಾಗಳಿಂದ ಇಂಪ್ರೆಸ್ ಆಗಿ 'ರಣವಿಕ್ರಮ'ನಿಗೆ ಓಕೆ ಅಂದಿದ್ದಾರೆ ಪುನೀತ್. ಪುನೀತ್ ನಿರೀಕ್ಷೆಯನ್ನ ಹುಸಿ ಮಾಡದಂತೆ ಕೆಲಸ ಮಾಡಿರೋ ಖುಷಿಯಲ್ಲಿದ್ದಾರೆ ಪವನ್ ಒಡೆಯರ್. [ಕಡೆತನಕ 'ರಣವಿಕ್ರಮ' ಗುಟ್ಟು ಬಿಟ್ಟುಕೊಡದ ಪವನ್]


ಆದ್ರೆ 'ರಣವಿಕ್ರಮ' ಶುರುವಾಗಿದ್ದು ಹೇಗೆ. 'ರಣವಿಕ್ರಮ' ಹೇಗಿರ್ತಾನೆ ಅನ್ನೋ ಎಲ್ಲಾ ಇಂಟರೆಷ್ಟಿಂಗ್ ಸಂಗತಿಗಳನ್ನ ನಿಮ್ಮ ಮುಂದಿಡುತ್ತಿದ್ದೇವೆ. ಒಂದೊಂದೇ ಸ್ಲೈಡ್ ಸರಿಸುತ್ತಾ ಸಾಗಿದರೆ ಆಸಕ್ತಿಕ ಸಂಗತಿಗಳನ್ನು ಕಾಣಬಹುದು.


ಬಾತ್ ರೂಮಲ್ಲಿ ಸಿಕ್ತು ಟೈಟಲ್

ರಣವಿಕ್ರಮ ಅನ್ನೋ ಟೈಟಲ್ ನಿರ್ದೇಶಕ ಪವನ್ ಒಡೆಯರ್ ಇಟ್ಟಿದ್ದು. ಇನ್ನು ನಿರ್ದೇಶಕರಿಗೆ ಈ ಟೈಟಲ್ ಹೊಳೆದಿದ್ದು ಬಾತ್ ರೂಮಿನಲ್ಲಂತೆ. ಇದೀಗ ರಣವಿಕ್ರಮ ಸಿನಿಮಾ ಬಗ್ಗೆ ಈಗ ಕರ್ನಾಟಕವೇ ಮಾತಾಡ್ತಿದೆ.


ಅಭಿಮಾನಿಯ ಸಿನಿಮಾ

ನಿರ್ದೇಶಕನೊಬ್ಬ ನಟನ ಅಭಿಮಾನಿಯಾಗಿ ಸಿನಿಮಾ ಮಾಡಿದ್ರೆ ಸಿನಿಮಾ ಚೆನ್ನಾಗಿರಲ್ಲ ಅಂತಾರೆ, ಆದ್ರೆ ಇದು ಅಭಿಮಾನಿಯ ಸಿನಿಮಾ. ಪವನ್ ಒಡೆಯರ್ ಪುನೀತ್ ರ ದೊಡ್ಡ ಅಭಿಮಾನಿ. ಪವರ್ ಸ್ಟಾರ್ ಗೆ ಡೈರೆಕ್ಷನ್ ಮಾಡೋಕೆ ಇಷ್ಟು ಬೇಗ ಅವಕಾಶ ಸಿಗುತ್ತೆ ಅನ್ಕೊಂಡಿರ್ಲಿಲ್ಲ ಅಂತಾರೆ ಪವನ್.


ಅಪ್ಪು ಸಿನಿಮಾ ಹತ್ತು ಸಾರಿ ನೋಡಿದ್ರು

ಧಾರವಾಡದಲ್ಲಿ 10ನೇ ತರಗತಿ ಓದ್ತಿರಬೇಕಾದ್ರೆ ಪವರ್ ಸ್ಟಾರ್ ಮೊದಲ ಸಿನಿಮಾ 'ಅಪ್ಪು' ರಿಲೀಸ್ ಆಗಿತ್ತಂತೆ. ಆಗ ನಿರ್ದೇಶಕ ಪವನ್ ಒಡೆಯರ್ ಒಂದೇ ಥಿಯೇಟರ್ ನಲ್ಲಿ ಹತ್ತು ಬಾರಿ ಸಿನಿಮಾ ನೋಡಿದ್ರಂತೆ.


ಪವರ್ ಸ್ಟಾಅರ್ ಭರತ್ ಅಥವಾ ವಿಕ್ರಮ್?

ಚಿತ್ರದ ಮುಹೂರ್ತದ ದಿನ ಪುನೀತ್ ಹಾಕಿಕೊಂಡಿದ್ದ ಪೊಲೀಸ್ ಡ್ರೆಸ್ ನಲ್ಲಿದ್ದ ಬ್ಯಾಡ್ಜ್ ನಲ್ಲಿ ಭರತ್ ಅನ್ನೋ ಹೆಸರಿತ್ತು. ಆದ್ರೆ ಶೂಟಿಂಗ್ ನಡುವೆ ನಟಿ ಅಂಜಲಿ ಜೊತೆ ತೆಗೆದಿರೋ ಸೆಲ್ಫಿಯಲ್ಲಿ ಪುನೀತ್ ಬ್ಯಾಡ್ಜ್ ನೇಮ್ ವಿಕ್ರಮ್ ಆಗಿದೆ. ಪಾತ್ರದ ಹೆಸ್ರೇ ಬದಲಾಯ್ತಾ ಅಥವಾ ಎರಡು ಶೇಡ್ ಪೊಲೀಸ್ ಪಾತ್ರವಾ. ನಾಳೆ ಎಲ್ಲಕ್ಕೂ ಉತ್ತರ ಸಿಗಲಿದೆ.


ಎರಡು ಹಾಡು ಪುನೀತ್ ಕಂಠದಲ್ಲಿ

ಪುನೀತ್ ಈ ಚಿತ್ರದಲ್ಲಿ ಎರಡು ಹಾಡು ಹಾಡಿದ್ದಾರೆ. ಪವರ್ ಸಿನಿಮಾದಲ್ಲಿ ಪುನೀತ್ ರ ಗುರುವಾರ ಸಂಜೆ ಹಾಡಿಗೆ ಫಿದಾ ಆಗಿದ್ದ ಅಭಿಮಾನಿಗಳಿಗೆ ಇಲ್ಲಿ ಡಬ್ಬಲ್ ಧಮಾಕಾ.


ರಣವಿಕ್ರಮ ರಾಷ್ಟ್ರಾದ್ಯಂತ ರಿಲೀಸ್

ಇಲ್ಲಿಯವರೆಗೂ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಅಂತಿದ್ದವರಿಗೆ ಈಗ ರಾಷ್ಟ್ರಾದ್ಯಂತ ರಿಲೀಸ್ ಅಂತ ಹೇಳಬೇಕಾಗಿದೆ. ಯಾಕಂದ್ರೆ ಕರ್ನಾಟಕದಲ್ಲಿ 180ಕ್ಕೂ ಹೆಚ್ಚು ಮತ್ತು ಹೊರರಾಜ್ಯಗಳಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ರಣವಿಕ್ರಮ' ರಂಗೇರುತ್ತಿದ್ದಾನೆ.


ಒಂದರೆಡು ವಾರದಲ್ಲಿ ವಿದೇಶಗಳಲ್

ರಣವಿಕ್ರಮನ ಅವತಾರಕ್ಕೆ ಜನ್ರು ಶಹಬ್ಬಾಸ್ ಹೇಳಿದ್ರೆ ಒಂದೆರೆಡು ವಾರದಲ್ಲಿ ಚಿತ್ರ ದೇಶವನ್ನೂ ದಾಟಿ ವಿದೇಶಗಳಲ್ಲಿ ರಿಲೀಸ್ ಮಾಡೋ ಪ್ಲಾನ್ ಇದೆ ಅಂದಿದ್ದಾರೆ ನಿರ್ಮಾಪಕ ಭೋಗೇಂದ್ರ.


English summary
Here are the colourful facts about Kannada movie 'Rana Vikrama', which is release on 10th April. The Action Thriller film directed by Pawan Wadeyar featuring Power star Puneeth Rajkumar, Anjali and Adah Sharma in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada