For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನಲ್ಲಿ ಧರ್ಮಣ್ಣನ ದರ್ಬಾರ್

  By Pavithra
  |

  'ರಾಮಾ ರಾಮಾ ರೇ' ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟ ನಟ ಧರ್ಮಣ್ಣ. ತನ್ನ ಅಭಿನಯದ ಮೂಲಕವೇ ಸಿನಿಮಾ ನೋಡುವ ಪ್ರೇಕ್ಷಕನ್ನು ನಕ್ಕು ನಗಿಸಿ ಅವರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡ ಕಲಾವಿದ. ಅಭಿನಯಿಸಿದ ಒಂದೇ ಚಿತ್ರದಲ್ಲಿ ಚಿತ್ರರಂಗದ ಗಮನ ಸೆಳೆದ ಧರ್ಮಣ್ಣ ಸದ್ಯ ಸಿನಿಮಾರಂಗದಲ್ಲಿ ಬೇಡಿಕೆಯ ನಟ.

  ವಿಭಿನ್ನ ರೀತಿಯ ಅಭಿನಯದ ಮೂಲಕ ಗುರುತಿಸಿಕೊಂಡಿರುವ ಧರ್ಮಣ್ಣ ಸದ್ಯ 'ಲಂಬೋದರ', 'ಕಾಣದಂತೆ ಮಾಯವಾದನು', 'ಸ್ಟ್ರೈಕರ್', 'ಅಳಿದು ಉಳಿದವರು', 'ಐ ಯಾಮ್ ಪ್ರಗ್ನೆಂಟ್', ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  'ಸೀತಾ ರಾಮ ಕಲ್ಯಾಣ' ಸೆಟ್ ನಲ್ಲಿ ಜೂನಿಯರ್ ರೆಬೆಲ್ ಸ್ಟಾರ್'ಸೀತಾ ರಾಮ ಕಲ್ಯಾಣ' ಸೆಟ್ ನಲ್ಲಿ ಜೂನಿಯರ್ ರೆಬೆಲ್ ಸ್ಟಾರ್

  ಇನ್ನು ಇವುಗಳನ್ನು ಹೊರತು ಪಡಿಸಿದಂತೆ 'ಭರಾಟೆ', 'ಇನ್ಸ್ ಪೆಕ್ಟರ್ ವಿಕ್ರಮ್', 'ಪಡ್ಡೆಹುಲಿ' ಸಿನಿಮಾಗಳಲ್ಲಿಯೂ ನಾಯಕ ಸ್ನೇಹಿತನಾಗಿ ಮತ್ತು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಧರ್ಮಣ್ಣ ದೊಡ್ಡ ಮಟ್ಟದ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಕಾರಣವೇ ಅವರ ಅಭಿನಯ. ಸಾಮಾನ್ಯ ಹಾಸ್ಯ ಕಲಾವಿದರ ಸಾಲಿಗೆ ಸೇರಿಕೊಳ್ಳದೆ ಪ್ರತಿ ಚಿತ್ರದಲ್ಲಿಯೂ ವಿಭಿನ್ನತೆ ಕಾಯ್ದುಕೊಳ್ಳುತ್ತಿರುವುದರಿಂದ ಧರ್ಮಣ್ಣನ ದರ್ಬಾರ್ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ.

  comedian Dharmanna is currently a demanding actor in the film industry

  ಇನ್ನು ಧರ್ಮಣ್ಣನ ನಾಯಕನಾಗಿ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ಕೆಲವು ನಿರ್ದೇಶಕರು ಮುಂದಾಗಿದ್ದು ತನ್ನ ಮ್ಯಾನರಿಸಂ ಹಾಗೂ ಅಭಿನಯಕ್ಕೆ ತಕ್ಕಂತೆ ಕಥೆ ಇದ್ದರೆ ಮಾತ್ರ ಅಂತಹ ಚಿತ್ರ ಮಾಡಲು ನಿರ್ಧರಿಸಿದ್ದಾರೆ ಧರ್ಮ.

  English summary
  Kannada comedian Dharmanna is currently a demanding actor in the film industry. Darmanna currently acting in Lambodara, Striker I'm Pragmant movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X