twitter
    For Quick Alerts
    ALLOW NOTIFICATIONS  
    For Daily Alerts

    ನಟನೆ ಜೊತೆಗೆ ಹೊಸ ವ್ಯವಹಾರ ಆರಂಭಿಸಿದ ನಟ ಚಿಕ್ಕಣ್ಣ

    |

    ಅತ್ಯಂತ ಕಷ್ಟದ ದಿನಗಳನ್ನು ಕಂಡು ಇಂದು ಕನ್ನಡ ಸಿನಿಮಾ ಉದ್ಯಮದಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ನಟ ಹಾಸ್ಯ ನಟ ಚಿಕ್ಕಣ್ಣ. ಇಷ್ಟು ದಿನ ಹಾಸ್ಯ ನಟರಾಗಿದ್ದ ಚಿಕ್ಕಣ್ಣ ಈಗ ಪೂರ್ಣ ಪ್ರಮಾಣದ ನಾಯಕ ನಟರಾಗಲು ಸಕಲ ತಯಾರಿ ಆರಂಭಿಸಿದ್ದಾರೆ.

    Recommended Video

    ಹೊಸ ಉದ್ಯಮ ಶುರು ಮಾಡಿದ ಚಿಕ್ಕಣ್ಣ | Chikanna | Darshan | Filmibeat Kannada

    ನಟನೆಯಲ್ಲಿ ಸಾಕಷ್ಟು ಬ್ಯುಸಿಯಾಗಿರುವ ಚಿಕ್ಕಣ್ಣ, ನಟನೆಯ ಹೊರತಾಗಿ ಹೊಸ ಬ್ಯುಸಿನೆಸ್ ಒಂದನ್ನು ಮಾಡಲು ಕೈಹಾಕಿದ್ದಾರೆ. ಹೌದು, ಸಾಕಷ್ಟು ನಟ-ನಟಿಯರು, ಸಿನಿಮಾ ನಟನೆ ಹೊರತಾಗಿ ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ, ಅಂತೆಯೇ ಚಿಕ್ಕಣ್ಣ ಸಹ ಹೊಸ ಬ್ಯುಸಿನೆಸ್ ಒಂದನ್ನು ಪ್ರಾರಂಭಿಸಿದ್ದಾರೆ.

    ಮೈಸೂರಿನ ಆರ್‌ಟಿ ನಗರದ ಬಳಿ ದೊಡ್ಡ ಕುರಿ ಹಾಗೂ ಮೇಕೆ ಫಾರಂ ಒಂದನ್ನು ಆರಂಭಿಸಿದ್ದಾರೆ ನಟ ಚಿಕ್ಕಣ್ಣ. ತಮ್ಮ ಈ ಹೊಸ ಫಾರಂ ಗೆ 'ಶ್ರೀ ಚಾಮುಂಡೇಶ್ವರಿ ಕೋಳಿ-ಮೇಕೆ ಫಾರಂ' ಎಂದು ಹೆಸರಿಟ್ಟಿದ್ದಾರೆ.

    ದರ್ಶನ್ ಅನ್ನು ಆಹ್ವಾನಿಸಿದ್ದ ಚಿಕ್ಕಣ್ಣ

    ದರ್ಶನ್ ಅನ್ನು ಆಹ್ವಾನಿಸಿದ್ದ ಚಿಕ್ಕಣ್ಣ

    ಹೊಸ ಫಾರಂ ಗೆ ತಮ್ಮ ಆತ್ಮೀಯ ಮಿತ್ರ ದರ್ಶನ್ ಅನ್ನು ಆಹ್ವಾನಿಸಿದ್ದರು ಚಿಕ್ಕಣ್ಣ. ಅಂತೆಯೇ ನಟ ಪ್ರಜ್ವಲ್ ದೇವರಾಜ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರುಗಳು ಒಟ್ಟಾಗಿ ಚಿಕ್ಕಣ್ಣ ಅವರ ಫಾರಂ ಗೆ ಬಂದು ವೀಕ್ಷಿಸಿ ಶುಭ ಹಾರೈಸಿದ್ದಾರೆ. ಫಾರಂ ಗಳನ್ನು ಮಾಡಿ ಅನುಭವವಿರುವ ದರ್ಶನ್, ಚಿಕ್ಕಣ್ಣ ಅವರಿಗೆ ಕೆಲವು ಸಲಹೆಗಳನ್ನು ಸಹ ನೀಡಿದ್ದಾರಂತೆ.

    ದರ್ಶನ್‌ಗೆ ಕುರಿ ಉಡುಗೊರೆ

    ದರ್ಶನ್‌ಗೆ ಕುರಿ ಉಡುಗೊರೆ

    ತಮ್ಮ ಫಾರಂ ಗೆ ಭೇಟಿ ನೀಡಿದ್ದ ದರ್ಶನ್‌ಗೆ ಮುದ್ದಾದ ಕುರಿಮರಿಯೊಂದನ್ನು ಉಡುಗೊರೆಯಾಗಿ ಚಿಕ್ಕಣ್ಣ ನೀಡಿದ್ದಾರೆ. ದರ್ಶನ್ ಹಾಗೂ ಗೆಳೆಯರು ಚಿಕ್ಕಣ್ಣನ ಫಾರಂ ಗೆ ಭೇಟಿ ಕೊಟ್ಟಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಆಧುನಿಕ ವ್ಯವಸ್ಥೆಯ ಫಾರಂ

    ಆಧುನಿಕ ವ್ಯವಸ್ಥೆಯ ಫಾರಂ

    ಆಧುನಿಕ ವ್ಯವಸ್ಥೆಯಲ್ಲಿ ಶೆಡ್ ಹಾಕಿ, ವೈಜ್ಞಾನಿಕ ಪದ್ಧತಿಯಲ್ಲಿ ಶೆಡ್ ಮಾಡಿದ್ದಾರೆ ಚಿಕ್ಕಣ್ಣ. ಸ್ವತಃ ಪ್ರಾಣಿ ಪ್ರಿಯರಾಗಿರುವ ಚಿಕ್ಕಣ್ಣ, ದರ್ಶನ್ ಜೊತೆ ಸಫಾರಿಗಳಿಗೆ, ಅರಣ್ಯ ವಿಹಾರಕ್ಕೆ ತೆರಳುತ್ತಿರುತ್ತಾರೆ. ಈಗ ಲಾಭದಾಯಕ ವ್ಯವಹಾರವಾದ ಕುರಿ ಹಾಗೂ ಮೇಕೆ ಫಾರಂ ವ್ಯವಹಾರ ಆರಂಭಿಸಿದ್ದಾರೆ.

    ನಾಯಕ ನಟನಾಗುತ್ತಿರುವ ಚಿಕ್ಕಣ್ಣ

    ನಾಯಕ ನಟನಾಗುತ್ತಿರುವ ಚಿಕ್ಕಣ್ಣ

    ಚಿಕ್ಕಣ್ಣ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರೇ ನಾಯಕನಾಗಿ ನಟಿಸುತ್ತಿರವ 'ಉಪಾಧ್ಯಕ್ಷ' ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಆರಂಭವಾಗಲಿದೆ. ಈಗಷ್ಟೆ ಮದಗಜ ಸಿನಿಮಾದ ಚಿತ್ರೀಕರಣ ಮುಗಿಸಿ ಮರಳಿದ್ದಾರೆ.

    English summary
    Comedy actor Chikkanna started commercial sheep and goat farming. Darshan and friends visited Chikkanna's farm.
    Thursday, December 17, 2020, 16:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X