»   » 'ಮದ್ವೆ ದಿಬ್ಬಣ'ದಲ್ಲಿ ಶಿವರಾಜ್ ಕೆ.ಆರ್.ಪೇಟೆ ಖುಲ್ಲಂ ಖುಲ್ಲಾ ಡ್ಯಾನ್ಸ್!

'ಮದ್ವೆ ದಿಬ್ಬಣ'ದಲ್ಲಿ ಶಿವರಾಜ್ ಕೆ.ಆರ್.ಪೇಟೆ ಖುಲ್ಲಂ ಖುಲ್ಲಾ ಡ್ಯಾನ್ಸ್!

Posted By:
Subscribe to Filmibeat Kannada

'ಕಾಮಿಡಿ ಕಿಲಾಡಿ' ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಈಗ ಏನ್ಮಾಡ್ತಿದ್ದಾರೆ ಎಂಬ ಕುತೂಹಲ ಹಲವರನ್ನ ಕಾಡುತ್ತಿದೆ. ಟಿವಿ ಶೋ ಮುಗಿದ ಮೇಲೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೆ.ಆರ್.ಪೇಟೆ ಈಗ ತಮ್ಮ ಚೊಚ್ಚಲ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.['ಕಾಮಿಡಿ ಕಿಲಾಡಿ' ಶಿವರಾಜ್.ಕೆ.ಆರ್.ಪೇಟೆ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ]

ಹಿರಿಯ ನಿರ್ದೇಶಕ ಎಸ್.ಉಮೇಶ್ ನಿರ್ದೇಶನ ಮಾಡುತ್ತಿರುವ 'ಮದ್ವೆ ದಿಬ್ಬಣ' ಚಿತ್ರದಲ್ಲಿ ಅಭಿನಯಿಸುತ್ತಿರುವ ಶಿವರಾಜ್ ಕೆ.ಆರ್.ಪೇಟೆ ಇತ್ತೀಚೆಗೆ ಚಿತ್ರದ ಸ್ಪೆಷಲ್ ನಂಬರ್ ಹಾಡಿಗೆ ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ. ಮುಂದೆ ಓದಿ......

ಶಿವರಾಜ್ ಕೆ.ಆರ್ ಪೇಟೆ ಡುಯೆಟ್!

'ಮದ್ವೆ ದಿಬ್ಬಣ' ಚಿತ್ರದ ವಿಶೇಷ ಹಾಡಿಗೆ 'ಕಾಮಿಡಿ ಕಿಲಾಡಿ' ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಹೆಜ್ಜೆ ಹಾಕಿದ್ದು, ಈಗ ಅದರ ಝಲಕ್ ಬಹಿರಂಗವಾಗಿದೆ.

ಮೇಕಿಂಗ್ ಸ್ಟಿಲ್ಸ್ ಬಿಡುಗಡೆ

ಎ.ಟಿ.ರವೀಶ್ ಸಂಗೀತ ಸಂಯೋಜನೆ ಮಾಡಿರುವ ಸ್ಪೆಷಲ್ ನಂಬರ್ ಗೆ ಶಿವರಾಜ್ ಕೆ.ಆರ್ ಪೇಟೆ ಲೋಕಲ್ ಸ್ಟೈಲ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು, ಡ್ಯಾನ್ಸರ್ ಜೊತೆಯಲ್ಲಿ ಕುಣಿದಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾದ ಕೆ.ಆರ್.ಪೇಟೆ

ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ಹಾಸ್ಯನಟನಾಗಿ ಶಿವರಾಜ್ ಕೆ.ಆರ್.ಪೇಟೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 'ದಿ ವಿಲನ್' ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸುತ್ತಿರುವ ಚಿತ್ರ. ಇದರ ಮದ್ಯೆ 'ಮದ್ವೆ ದಿಬ್ಬಣ'ದಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.[ಶಿವರಾಜ್.ಕೆ.ಆರ್.ಪೇಟೆಗೆ ಅದೃಷ್ಟ ಖುಲಾಯಿಸಿದೆ: ಅವಕಾಶ ಒದ್ಗೊಂಡು ಬರ್ತಿದೆ.!]

'ಮದ್ವೆ ದಿಬ್ಬಣ' ಚಿತ್ರದ ಬಗ್ಗೆ......

ಚಿತ್ರದಲ್ಲಿ ಅಭಿಷೇಕ್ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಒಂದೆರಡು ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಯುವನಟಿ ಸೋನಾಲ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರವಿಕಿರಣ್, ಚಂದ್ರಕಲಾ ಮೋಹನ್ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಬಿ.ಎನ್.ಆರ್. ಫಿಲಂಸ್ ಬ್ಯಾನರ್‌ನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಬಿ.ಎನ್.ರವಿ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. 'ಮದ್ವೆ ದಿಬ್ಬಣ' ಚಿತ್ರಕ್ಕೆ ಚಂದ್ರು ಬೆಳವಂಗಲ ಅವರ ಛಾಯಾಗ್ರಹಣವಿದ್ದು,

English summary
Comedy Kiladigalu Shivaraj KR Pete First Look Released in 'Madve Dibbana' Movie. The Movie Directed by Umesh and also featured Abhishek and sonal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada