»   » ಕೆಎಫ್‌ಸಿಸಿ ಡಬ್ಬಿಂಗ್ ವಿರೋಧಿ ಮೇಲ್ಮನವಿ ವಜಾ

ಕೆಎಫ್‌ಸಿಸಿ ಡಬ್ಬಿಂಗ್ ವಿರೋಧಿ ಮೇಲ್ಮನವಿ ವಜಾ

Posted By:
Subscribe to Filmibeat Kannada

ಪರಭಾಷೆ ಸಿನಿಮಾಗಳ ಡಬ್ಬಿಂಗ್ ಗೆ ವಿರೋಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿ(Competition Appellate Tribunal) ವಜಾ ಗೊಳಿಸಿದೆ. ಇದರಿಂದ ಡಬ್ಬಿಂಗ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಿನ್ನೆಡೆ ಉಂಟಾಗಿದೆ.

ಕನ್ನಡಕ್ಕೆ ಡಬ್ ಆದ ಪರಭಾಷಾ ಸಿನಿಮಾಗಳು ಮತ್ತು ಕಾರ್ಯಕ್ರಮಗಳ ಪ್ರಸಾರಕ್ಕೆ ಅವಕಾಶ ನೀಡದ ಫಿಲ್ಮ್ ಚೇಂಬರ್, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್(ಕೆಟಿವಿಎ), ಕನ್ನಡ ಸಿನಿಮಾ ನಿರ್ಮಾಪಕರ ಸಂಘ(ಕೆಎಫ್‌ಪಿಎ)ದ ಕ್ರಮವನ್ನು ಪ್ರಶ್ನಿಸಿ ಕನ್ನಡ ಗ್ರಾಹಕರ ಕೂಟದ ಅಧ್ಯಕ್ಷರಾದ ಚೇತನ್ ಗಣೇಶ್ ಮತ್ತು ಮತ್ತಿತರರು ಭಾರತೀಯ ಸ್ಪರ್ಧಾತ್ಮಕ ಆಯೋಗ(Competition Commission Of India)ದ ಮೊರೆ ಹೋಗಿದ್ದರು. ಇವರ ದೂರನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ್ದ ಆಯೋಗ, 'ಫಿಲ್ಮ್ ಚೇಂಬರ್ ಮತ್ತು ಟಿವಿ ಅಸೋಸಿಯೇಷನ್ ಡಬ್ ಚಿತ್ರಗಳ ಮಾರುಕಟ್ಟೆ ಮತ್ತು ಕನ್ನಡ ಭಾಷೆಯಲ್ಲಿ ಧಾರಾವಾಹಿಗಳಿಗೆ ನಿರ್ಬಂಧ ಹೇರುವುದು ಸೆಕ್ಷನ್ 3(1) ಮತ್ತು 3(3)(b) ರ ಪ್ರಕಾರ ಕಾನೂನಿನ ಉಲ್ಲಂಘನೆ' ಎಂದು ಹೇಳಿ ದಂಡ ವಿಧಿಸಿ 2015 ರ ಜುಲೈನಲ್ಲಿ ಆದೇಶ ನೀಡಿತ್ತು.

Competition Appellate Tribunal dismissed KFCC Appeal

ಮೇಲಿನ ಆದೇಶವನ್ನು ಪ್ರಶ್ನಿಸಿ ಫಿಲ್ಮ್ ಚೇಂಬರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿ(Competition Appellate Tribunal) ವಜಾ ಗೊಳಿಸಿದ್ದು, ಡಬ್ ಆದ ಕಾರ್ಯಕ್ರಮ ಮತ್ತು ಸಿನಿಮಾಗಳಿಗೆ ನಿರ್ಬಂಧ ಹೇರಿದ್ದಕ್ಕಾಗಿ ದಂಡ ವಿಧಿಸಿ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ. ಇದರಿಂದ ಅನ್ಯ ಭಾಷೆಗಳಿಂದ ಕನ್ನಡಕ್ಕೆ ಡಬ್ ಆಗುವ ಸಿನಿಮಾ ಮತ್ತು ಕಾರ್ಯಕ್ರಮಗಳಿಗೆ ಅವಕಾಶ ದೊರೆತಿದೆ.

Competition Appellate Tribunal dismissed KFCC Appeal

ಮೇಲ್ಮನವಿ ಸಲ್ಲಿಸಿದ್ದ ಫಿಲ್ಮ್ ಚೇಂಬರ್ ಗೆ 16,82,204 ರೂ, ಕೆಟಿವಿಎ ಮತ್ತು ಕೆಎಫ್‌ಪಿಎ ಗೆ ಕ್ರಮವಾಗಿ 1,74,293 ರೂ ಮತ್ತು 1,68,124 ರೂ ದಂಡ ವಿಧಿಸಿತ್ತು. ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿಯ ನ್ಯಾ.ರಾಜೀವ್ ಖೇರ್ ಮತ್ತು ಸದಸ್ಯೆ ಅನಿತಾ ಕಪೂರ್ ನೀಡಿರುವ 60 ಪುಟಗಳ ತೀರ್ಪಿನಲ್ಲಿ ಫಿಲ್ಮ್ ಚೇಂಬರ್ ಮತ್ತು ಟಿವಿ ಅಸೋಸಿಯೇಷನ್ ಡಬ್ ಚಿತ್ರ ಮತ್ತು ಕಾರ್ಯಕ್ರಮಗಳ ಪ್ರಸಾರ ತಡೆಯಲು ಕ್ರಮ ಕೈಗೊಂಡಿದ್ದು, ಇದು ಸ್ಫರ್ಧಾತ್ಮಕ ಕಾನೂನುಗಳ ಉಲ್ಲಂಘನೆ ಎಂದು ಹೇಳಿದೆ. ಅಲ್ಲದೇ ಮೇಲ್ಮನವಿದಾರರು ಯಾವುದೇ ಡಬ್ ಕಾರ್ಯಕ್ರಮಗಳು ಕನ್ನಡದಲ್ಲಿ ಪ್ರಸಾರವಾಗುವದಕ್ಕೆ ನಿಷೇಧ ಹೇರಿದ್ದಾರೆ. ಅದಕ್ಕೆ ಉದಾಹರಣೆಯಾಗಿ ' ಅಮೀರ್ ಖಾನ್ ಅವರ 'ಸತ್ಯಮೇವ ಜಯತೆ' ಕಾರ್ಯಕ್ರಮ ಮತ್ತು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಸಿನಿಮಾ 'ಕಾಫಿ ಶಾಪ್' ಕಾರ್ಯಕ್ರಮಗಳಿಗೆ ನಿಷೇಧ ಹೇರಿರುವ ದಾಖಲೆಗಳು ಲಭಿಸಿವೆ ಎಂದು ಹೇಳಿದೆ.

ಸ್ಫರ್ಧಾತ್ಮಕ ನ್ಯಾಯಮಂಡಳಿಯ ಆದೇಶವನ್ನು ಫಿಲ್ಮ್ ಚೇಂಬರ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವುದಕ್ಕೆ 60 ದಿನಗಳು ಕಾಲಾವಕಾಶ ಇದೆ.

English summary
Competition Appellate Tribunal dismissed KFCC dubbing against Appeal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada