»   » 'ನಾಟಿ ಕೋಳಿ' ರಾಗಿಣಿ ವಿರುದ್ಧ ಕಂಪ್ಲೇಂಟ್..!

'ನಾಟಿ ಕೋಳಿ' ರಾಗಿಣಿ ವಿರುದ್ಧ ಕಂಪ್ಲೇಂಟ್..!

Posted By:
Subscribe to Filmibeat Kannada

ಸೆಟ್ಟೇರುವ ಮೊದಲೇ ತುಪ್ಪದ ಬೆಡಗಿ ರಾಗಿಣಿ ಅಭಿನಯದ 'ನಾಟಿ ಕೋಳಿ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ರಾದ್ಧಾಂತ ಎಬ್ಬಿಸಿದ ಘಟನೆ ನೀವು ಮರೆತಿರುವುದಕ್ಕೆ ಚಾನ್ಸೇ ಇಲ್ಲ. ಎಲ್ಲಾ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದ ರಾಗಿಣಿ ದ್ವಿವೇದಿಯ 'ನಾಟಿ ಕೋಳಿ' ಈಗ ಮತ್ತೆ ಸುದ್ದಿಯಲ್ಲಿದೆ.

ಫೋಟೋಶೂಟ್ ವೇಳೆ ಆದ ಗಲಾಟೆಯ ನಂತ್ರ ಚಿತ್ರದಿಂದ ರಾಗಿಣಿ ಅವರನ್ನ ಕೈಬಿಡಲಾಗಿತ್ತು. ಈಗ ಸಿನಿಮಾದಿಂದ ಹೊರಬಂದಿದ್ದರೂ, 'ನಾಟಿ ಕೋಳಿ'ಗಾಗಿ ರಾಗಿಣಿ ಪಡೆದಿದ್ದ 20 ಲಕ್ಷ ರೂಪಾಯಿ ಮುಂಗಡ ಹಣವನ್ನ ವಾಪಸ್ಸು ನೀಡಿಲ್ಲ ಅಂತ ಚಿತ್ರದ ನಿರ್ಮಾಪಕ ವೆಂಕಟೇಶ್ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ. [ರಾಗಿಣಿ ದ್ವಿವೇದಿ 'ನಾಟಿಕೋಳಿ' ಮೇಲೆ ಎರಗಿದ 'ಹುಲಿ']

Complaint against Actress Ragini Dwivedi in KFCC

'ನಾಟಿ ಕೋಳಿ' ಚಿತ್ರಕ್ಕೆ ಸಹಿ ಹಾಕಿದಾಗ ರಾಗಿಣಿಗೆ ಅಡ್ವಾನ್ಸ್ ರೂಪದಲ್ಲಿ 20 ಲಕ್ಷ ರೂಪಾಯಿಯನ್ನ ನೀಡಲಾಗಿತ್ತು. ಆದ್ರೆ, ಫೋಟೋಶೂಟ್ ವೇಳೆ ಆದ ಗದ್ದಲ ಮತ್ತು ರಾಗಿಣಿ ಹಾಕಿದ ಕಂಡೀಷನ್ ಗಳು ಕಿರಿಕಿರಿ ತಂದ ಪರಿಣಾಮ ಚಿತ್ರದಿಂದ ಕೊಕ್ ನೀಡಲಾಗಿತ್ತು. [ಜಂಬದ ಕೋಳಿಗೆ ಕೊಕ್ ಪ್ರಿಯಾಮಣಿ 'ನಾಟಿಕೋಳಿ']

ಇದಾಗಿ ಒಂದು ತಿಂಗಳು ಕಳೆದರೂ, ಕೊಟ್ಟಿರುವ ದುಡ್ಡು ವಾಪಸ್ಸು ಬಂದಿಲ್ಲ. ದಯವಿಟ್ಟು, ಮುಂಗಡ ಹಣವನ್ನು ವಾಪಸ್ಸು ಕೊಡಿಸಿ ಅಂತ ನಿರ್ಮಾಪಕ ವೆಂಕಟೇಶ್ ಫಿಲ್ಮ್ ಚೇಂಬರ್ ಮೊರೆ ಹೋಗಿದ್ದಾರೆ.

English summary
Venkatesh, Producer of Kannada Movie 'Nati Koli' has given a complaint to KFCC against Actress Ragini Dwivedi for not returning the advance amount of Rs.20 lakhs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada