For Quick Alerts
  ALLOW NOTIFICATIONS  
  For Daily Alerts

  2012ರಿಂದ 2022ರವರೆಗೆ ಪ್ರತಿವರ್ಷ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಕನ್ನಡ ನಟರ ಪಟ್ಟಿ; ನಂಬರ್ 1 ಯಾರು?

  |

  ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್‌ ಮೊದಲ ಬಾರಿಗೆ 2012ರ ಜೂನ್ 22ರಂದು ಯುಎಇಯ ದುಬೈನಲ್ಲಿ ನಡೆದಿತ್ತು. ಅಂದು ಆರಂಭವಾದ ಈ ಸೈಮಾ ಅವಾರ್ಡ್ಸ್ ಪ್ರತಿವರ್ಷವೂ ನಡೆಯುತ್ತಾ ಬಂದಿದ್ದು ದಶಕ ಪೂರೈಸಿದೆ.

  ಸದ್ಯ ಈ ವರ್ಷದ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗುತ್ತಿದ್ದು, ಕಳೆದ ವರ್ಷದ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಆಯೋಜನೆಗೊಂಡಿತ್ತು. ಹಾಗೂ ಇದಕ್ಕೂ ಮುನ್ನ ನಡೆದ ಎಲ್ಲಾ ಸೈಮಾ ಕಾರ್ಯಕ್ರಮಗಳು ವಿದೇಶಿ ನೆಲಗಳಲ್ಲಿ ನಡೆದಿದ್ದವು. ಇನ್ನು ಈ ಬಾರಿ ಪ್ರಸ್ತುತ ನಡೆಯುತ್ತಿರುವ ಸೈಮಾ ಅವಾರ್ಡ್ಸ್ 11ನೇ ಸೈಮಾ ಅವಾರ್ಡ್ಸ್ ಆಗಿದ್ದು, ಕಾರ್ಯಕ್ರಮದ ಮೊದಲ ದಿನ ಕನ್ನಡ ಮತ್ತು ತೆಲುಗು ಚಿತ್ರರಂಗದ ಕಲಾವಿದರಿಗೆ ಪ್ರಶಸ್ತಿ ನೀಡಲಾಯಿತು.

  ಸೈಮಾ 2022: ಅಪ್ಪುಗೆ ಅತ್ಯುತ್ತಮ ನಟ ಪ್ರಶಸ್ತಿ; ಪುನೀತ್ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಯಾರು? ಸೈಮಾ 2022: ಅಪ್ಪುಗೆ ಅತ್ಯುತ್ತಮ ನಟ ಪ್ರಶಸ್ತಿ; ಪುನೀತ್ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಯಾರು?

  ವಿವಿಧ ಕೆಟಗರಿಯಲ್ಲಿ ನಾಮನಿರ್ದೇಶನಗೊಂಡಿದ್ದ ಹಲವು ಕಲಾವಿದರು ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದರು. ಇನ್ನು ಈ ಸೈಮಾ ಪ್ರಶಸ್ತಿಗೆ ವಿಶೇಷ ಗೌರವವಿದ್ದು, ಯಾವ ಕಲಾವಿದರಿಗೆ ಈ ಪ್ರಶಸ್ತಿ ಲಭಿಸಲಿದೆಯೋ ಆ ನಟ ಅಥವಾ ನಟಿಯ ಅಭಿಮಾನಿಗಳು ನಮ್ಮ ನೆಚ್ಚಿನ ತಾರೆಗೆ ಸೈಮಾ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಖುಷಿಪಡುವಷ್ಟು ಖ್ಯಾತಿ ಮತ್ತು ಗೌರವವನ್ನು ಹೊಂದಿದೆ ಈ ಸೈಮಾ ಅವಾರ್ಡ್ಸ್‌. ಇನ್ನು ಈ ಬಾರಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯುವರತ್ನ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರು ಪಡೆದುಕೊಂಡಿದ್ದು, 2012ರಿಂದ ಇಲ್ಲಿಯವರೆಗೆ ಪ್ರತಿ ಸೈಮಾ ಕಾರ್ಯಕ್ರಮದಲ್ಲಿಯೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡ ಕನ್ನಡದ ನಟರ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ ಓದಿ.

  ಸೈಮಾ ಗೆದ್ದ ಕನ್ನಡ ನಟರ ಪಟ್ಟಿ

  ಸೈಮಾ ಗೆದ್ದ ಕನ್ನಡ ನಟರ ಪಟ್ಟಿ

  2012 - ಪುನೀತ್ ರಾಜ್ ಕುಮಾರ್ ( ಹುಡುಗರು )

  2013 - ಶಿವರಾಜ್ ಕುಮಾರ್ ( ಶಿವ ) & ಉಪೇಂದ್ರ ( ಕ್ರಿಟಿಕ್ಸ್ ) ಕಠಾರಿವೀರ ಸುರಸುಂದರಾಂಗಿ

  2014 - ಶಿವರಾಜ್ ಕುಮಾರ್ ( ಭಜರಂಗಿ )

  2015 - ಯಶ್ ( ಮಿ & ಮಿ ರಾಮಾಚಾರಿ )

  2016 - ಪುನೀತ್ ರಾಜ್ ಕುಮಾರ್ ( ರಣವಿಕ್ರಮ ) & ಸತೀಶ್ ನೀನಾಸಂ ( ಕ್ರಿಟಿಕ್ಸ್ ) ರಾಕೆಟ್

  2017 - ಶಿವರಾಜ್ ಕುಮಾರ್ ( ಶಿವಲಿಂಗ )

  2018 - ಪುನೀತ್ ರಾಜ್ ಕುಮಾರ್ ( ರಾಜಕುಮಾರ ) & ಶ್ರೀಮುರಳಿ - ಮಫ್ತಿ ( ಕ್ರಿಟಿಕ್ಸ್ )

  2019 - ಯಶ್ ( ಕೆಜಿಎಫ್ ಚಾಪ್ಟರ್ 1 )

  2020 - ದರ್ಶನ್ ( ಯಜಮಾನ ) & ರಕ್ಷಿತ್ ಶೆಟ್ಟಿ - ಅವನೇ ಶ್ರೀಮನ್ನಾರಾಯಣ ( ಕ್ರಿಟಿಕ್ಸ್ )

  2021 - ಧನಂಜಯ್ ( ಪಾಪ್ ಕಾರ್ನ್ ಮಂಕಿ ಟೈಗರ್ ) & ಪ್ರಜ್ವಲ್ ದೇವರಾಜ್ - ಜೆಂಟಲ್ ಮ್ಯಾನ್ ( ಕ್ರಿಟಿಕ್ಸ್ )

  2022 - ಪುನೀತ್ ರಾಜ್ ಕುಮಾರ್ ( ಯುವರತ್ನ )

  ( ಈ ಎಲ್ಲಾ ಮಾಹಿತಿಯನ್ನು ಸೈಮಾ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ )

  ಅತ್ಯುತ್ತಮ ನಾಯಕ ನಟನಾಗಿ ಪುನೀತ್ ಹೆಚ್ಚು ಪ್ರಶಸ್ತಿ

  ಅತ್ಯುತ್ತಮ ನಾಯಕ ನಟನಾಗಿ ಪುನೀತ್ ಹೆಚ್ಚು ಪ್ರಶಸ್ತಿ

  2011ರಲ್ಲಿ ತೆರೆಕಂಡ ಚಿತ್ರಗಳಿಗಾಗಿ 2012ರಲ್ಲಿ ಸೈಮಾ ಅವಾರ್ಡ್ ನೀಡಲಾಯಿತು. ಈ ಮೊದಲನೇ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪುನೀತ್ ಹುಡುಗರು ಚಿತ್ರಕ್ಕಾಗಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಪಡೆದುಕೊಂಡರು. ನಂತರದ ದಿನಗಳಲ್ಲಿ ರಣವಿಕ್ರಮ, ರಾಜಕುಮಾರ ಹಾಗೂ ಇದೀಗ ಯುವರತ್ನ ಚಿತ್ರಕ್ಕಾಗಿಯೂ ಅತ್ಯುತ್ತಮ ನಾಯಕನಟ ಪ್ರಶಸ್ತಿ ಪಡೆಯುವುದರ ಮೂಲಕ ಪುನೀತ್ ಒಟ್ಟಾರೆ 4 ಬಾರಿ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

  ಯೂತ್ ಐಕಾನ್ ಪ್ರಶಸ್ತಿಯನ್ನೂ ಸೇರಿಸಿದರೆ 5 ಪ್ರಶಸ್ತಿ

  ಯೂತ್ ಐಕಾನ್ ಪ್ರಶಸ್ತಿಯನ್ನೂ ಸೇರಿಸಿದರೆ 5 ಪ್ರಶಸ್ತಿ

  ಇನ್ನು ಅತ್ಯುತ್ತಮ ನಾಯಕನಟ ಪ್ರಶಸ್ತಿಗಳು ಮಾತ್ರವಲ್ಲದೇ ಪುನೀತ್ ರಾಜ್ ಕುಮಾರ್ 2014ರ ಸೈಮಾದಲ್ಲಿ ಯೂತ್ ಐಕಾನ್ ಆಫ್ ಸೌತ್ ಇಂಡಿಯನ್ ಸಿನಿಮಾ ಪ್ರಶಸ್ತಿಯನ್ನು ಪಡೆದಿದ್ದರು. ಈ ಪ್ರಶಸ್ತಿಯನ್ನು ಗಣನೆಗೆ ತೆಗೆದುಕೊಂಡರೆ ಪುನೀತ್ ಒಟ್ಟಾರೆ 5 ಬಾರಿ ಸೈಮಾ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಈ ಮೂಲಕ ಕನ್ನಡದ ಪರ ಅತಿ ಹೆಚ್ಚು ಸೈಮಾ ಪ್ರಶಸ್ತಿಯನ್ನು ಬಾಚಿದ ನಟ ಎಂಬ ದಾಖಲೆಯನ್ನು ಪುನೀತ್ ಹೊಂದಿದ್ದಾರೆ.

  ಅಪ್ಪು, ಶಿವಣ್ಣ, ಯಶ್ ಹೆಚ್ಚು ಪ್ರಶಸ್ತಿ

  ಅಪ್ಪು, ಶಿವಣ್ಣ, ಯಶ್ ಹೆಚ್ಚು ಪ್ರಶಸ್ತಿ

  ಅಪ್ಪು ಒಟ್ಟಾರೆ 5 ಬಾರಿ ಸೈಮಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರೆ, ಶಿವಣ್ಣ 2013ರಲ್ಲಿ ಸೈಮಾ ವಿಶೇಷ ಪ್ರಶಸ್ತಿ ಹಾಗೂ 3 ಅತ್ಯುತ್ತಮ ನಾಯಕನಟ ಪ್ರಶಸ್ತಿಗಳು ಸೇರಿದಂತೆ 4 ಬಾರಿ ಸೈಮಾ ಪ್ರಶಸ್ತಿಯನ್ನು ಗೆದ್ದು ದ್ವಿತೀಯ ಸ್ಥಾನದಲ್ಲಿದ್ದಾರೆ ಹಾಗೂ 2 ಬಾರಿ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಮತ್ತು 1 ಬಾರಿ ಸ್ಟೈಲ್ ಐಕಾನ್ ಆಫ್ ಸೌತ್ ಇಂಡಿಯನ್ ಸಿನಿಮಾ ಪ್ರಶಸ್ತಿ ಪಡೆದಿರುವ ಯಶ್ ಒಟ್ಟು 3 ಸೈಮಾ ಪ್ರಶಸ್ತಿಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಮುಂದಿನ ವರ್ಷ ಕೆಜಿಎಫ್ ಚಾಪ್ಟರ್ 2 ಸೈಮಾದಲ್ಲಿ ಭಾಗವಹಿಸಲಿದ್ದು, ಯಶ್ ಮತ್ತೊಂದು ಪ್ರಶಸ್ತಿಯನ್ನು ತೆಕ್ಕೆಗೆ ಹಾಕಿಕೊಳ್ಳುವ ಸಾಧ್ಯತೆಯಿದೆ.

  English summary
  Complete List of Kannada Actors who have won SIIMA Best Actor Award from 2012 to 2022
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X