twitter
    For Quick Alerts
    ALLOW NOTIFICATIONS  
    For Daily Alerts

    ಬಾಲು ಮಹೇಂದ್ರನ್ ಎಂಬ ಪ್ರತಿಭೆಗೆ ನಮನ : ಬಿ ಸುರೇಶ

    By ಜೇಮ್ಸ್ ಮಾರ್ಟಿನ್
    |

    ಬಾಲನಾಥನ್ ಬೆಂಜಮೀನ್ ಮಹೇಂದ್ರನ್ ಆಗಿ ಶ್ರೀಲಂಕಾದಲ್ಲಿ ಜನಿಸಿದ ಬಾಲು ಮಹೇಂದ್ರ ಅವರು ಭಾರತೀಯ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ. ಕನ್ನಡ ಚಿತ್ರರಂಗದ ಮೂಲಕ ನಿರ್ದೇಶಕರಾಗಿದ್ದು ನಮ್ಮ ಹೆಮ್ಮೆ. ತಮಿಳು ಚಿತ್ರರಂಗದಲ್ಲಿ ಬಾಲು ಮಹೇಂದ್ರನ್ ಅವರ ಬಹುಮುಖ ಪ್ರತಿಭೆ ಅನಾವರಣಗೊಂಡಿತು.

    ಚಿಕ್ಕಂದಿನಿಂದಲೇ ಫೋಟೋಗ್ರಾಫಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಬಾಲು ಅವರಿಗೆ ಅಪ್ಪನಿಂದ ಕೆಮರಾ ಗಿಫ್ಟ್ ಸಿಕ್ಕಿದ್ದು ಹವ್ಯಾಸವನ್ನು ಬೆಳೆಸಿ ವೃತ್ತಿ ತನಕ ತಂದಿತು. ಲಂಡನ್ ವಿಶ್ವವಿದ್ಯಾಲಯದಲ್ಲಿ ಸಿನಿಮಾಟೋಗ್ರಾಫಿ ಕೋರ್ಸ್ ಮಾಡಿ ಪುಣೆಯ ಪ್ರತಿಷ್ಠಿತ ಎಫ್ ಟಿಐಐ ನಲ್ಲಿ ಚಿನ್ನದ ಪದಕ ಪಡೆದು ಕೆಮೆರಾ ಮ್ಯಾನ್ ಆಗಿ ಚಿತ್ರರಂಗದಲ್ಲಿ ಉದ್ಯೋಗ ಅರಸ ತೊಡಗಿದರು. ಮಲೆಯಾಳಂನಲ್ಲಿ ಛಾಯಾಗ್ರಾಹಕರಾಗಿ ವೃತ್ತಿ ಆರಂಭಿಸಿ ಬಾಲು ಮುಂದೆ ಆ ರಾಜ್ಯದ ರಾಜ್ಯ ಪ್ರಶಸ್ತಿಯನ್ನು ಗಳಿಸಿದರು.

    ಕಪ್ಪು ಬಿಳುಪು ನೆರಳು ಬೆಳಕಿನಾಟವನ್ನು ಸಮರ್ಥವಾಗಿ ಚಿತ್ರಿಸುತ್ತಿದ್ದ ರೀತಿ ಎಲ್ಲರನ್ನು ಮೋಡಿ ಮಾಡುತ್ತಿತ್ತು. ದಿ ಬ್ರಿಡ್ಜ್ ಆನ್ ದಿ ರಿವರ್ ಕ್ವಾಯ್ ಚಿತ್ರದಿಂದ ಪ್ರಭಾವಿತರಾಗಿ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಮಲೆಯಾಳಂನಲ್ಲಿ ಕೆ.ಎಸ್ ಸೇತುಮಾಧವನ್, ಭರತನ್ ಹಾಗೂ ಪಿ.ಎನ್ ಮೆನನ್ ಜತೆ ಕಾರ್ಯ ನಿರ್ವಹಿಸಿದರು. 70ರ ದಶಕದ ಹೊಸ ಅಲೆ ಚಿತ್ರಗಳ ಪೋಷಣೆಗೆ ಬಾಲು ಅವರ ಕೆಮೆರಾ ಸಹಾಯಕವಾಯಿತು. ಸಿನಿಮಾ ಎಂದರೆ 'ದೃಶ್ಯ ಮಾಧ್ಯಮ' ಎಂಬುದನ್ನು ಬಾಲು ನಿರೂಪಿಸಿದ್ದರು ಎನ್ನಲಾಗುತ್ತದೆ ಬಾಲು ಅವರಿಗೆ ಅಭಿಮಾನಿಗಳ ಅಶ್ರುತರ್ಪಣ ಇಲ್ಲಿದೆ...

    ಬಾಲು ಅವರ ಕೋಕಿಲ ಚಿತ್ರ ಸಾಧನೆ

    ಬಾಲು ಅವರ ಕೋಕಿಲ ಚಿತ್ರ ಸಾಧನೆ

    70ರ ದಶಕದ ಹೊಸ ಅಲೆ ಚಿತ್ರಗಳ ಪೋಷಣೆಗೆ ಬಾಲು ಅವರ ಕೆಮೆರಾ ಸಹಾಯಕವಾಯಿತು. ಕೋಕಿಲ ಚಿತ್ರ ಆ ಕಾಲದಲ್ಲೇ ಮದ್ರಾಸ್(ಚೆನ್ನೈ) ನಲ್ಲಿ 150 ದಿನಗಳ ಓಡಿತ್ತು.

    ಮಣಿರತ್ನಂ ತಮ್ಮ ಮೊದಲ ಚಿತ್ರ ಪಲ್ಲವಿ ಅನುಪಲ್ಲವಿ

    ಮಣಿರತ್ನಂ ತಮ್ಮ ಮೊದಲ ಚಿತ್ರ ಪಲ್ಲವಿ ಅನುಪಲ್ಲವಿ

    ಮಣಿರತ್ನಂ ತಮ್ಮ ಮೊದಲ ಚಿತ್ರ ಪಲ್ಲವಿ ಅನುಪಲ್ಲವಿಗೆ ಕೆಮರಾ ಹಿಡಿಯುವಂತೆ ಬಾಲು ಅವರನ್ನು ಕೇಳಿಕೊಂಡಾಗ ಹೊಸಬನ ಜತೆ ಕೆಲಸ ಮಾಡಲು ಒಪ್ಪಿರಲಿಲ್ಲ ಎನ್ನಲಾಗಿದೆ. ನಂತರ ಮಣಿರತ್ನಂ ಅವರ ಕಾರ್ಯವೈಖರಿ, ಉತ್ಸಾಹ ಕಂಡು ಮಣಿರತ್ನಂ ಜತೆ ಕಾರ್ಯ ನಿರ್ವಹಿಸಿದ್ದರು. ಸಿನಿಮಾ ಎಂದರೆ 'ದೃಶ್ಯ ಮಾಧ್ಯಮ' ಎಂಬುದನ್ನು ಬಾಲು ನಿರೂಪಿಸಿದ್ದರು

    ಬಾಲು ಎಂಬ ಪ್ರತಿಭೆಗೆ ನಮನ : ಬಿ. ಸುರೇಶ

    ಬಾಲು ಎಂಬ ಪ್ರತಿಭೆಗೆ ನಮನ : ಬಿ. ಸುರೇಶ

    ಓ! ಮೂರು ತಿಂಗಳ ಹಿಂದೆ ಚೆನ್ನೈಗೆ ಹೋದಾಗ ಭೇಟಿಯಾಗಿದ್ದೆ... ನನ್ನ ನಿರ್ದೇಶನದ ಎಲ್ಲಾ ಸಿನಿಮಾಗಳನ್ನು ನೋಡಿದ್ದರು... ತಾವೇ ಖುದ್ದಾಗಿ ಟೀ ಮಾಡಿ ಕೊಟ್ಟಿದ್ದರು... ಹೀಗ್ಯಾಕೆ? ದಿನ ನನಗೆ ನಾಲ್ಕ್ಷರ ಕಲಿಸಿದವರನ್ನು ಕಳಕೊಳ್ಳುವ ಸಂಕಟ... ನಿನ್ನೆ ಹಸನ್ ಮನ್ಸೂರ್ ಸುದ್ದಿ... ಇಂದು ಬಾಲು ಮಹೇಂದ್ರ... ಬಿ. ಸುರೇಶ, ಕನ್ನಡ ಚಿತ್ರಕರ್ಮಿ

    ನಟನೆಗೂ ಸೈ ಎಂದಿದ್ದ ಬಾಲು ಮಹೇಂದ್ರ

    ನಟನೆಗೂ ಸೈ ಎಂದಿದ್ದ ಬಾಲು ಮಹೇಂದ್ರ

    ಚಿತ್ರಕಥೆ ಬರಹಗಾರ, ಚಿತ್ರ ನಿರ್ಮಾಣ, ಸಂಕಲನ, ಛಾಯಾಗ್ರಾಹಕ, ನಿರ್ದೇಶಕರಾಗಿ ಯಶಸ್ವಿಯಾದ ಬಾಲು ಮಹೇಂದ್ರ ಅವರು ಥಲೈಮುರೈಗಳ್ ಚಿತ್ರದಲ್ಲಿ ನಟಿಸಿದ್ದರು.

    ಇಳಯ ರಾಜ ಹಾಗೂ ಬಾಲು ಕಾಂಬಿನೇಷನ್

    ಇಳಯ ರಾಜ ಹಾಗೂ ಬಾಲು ಕಾಂಬಿನೇಷನ್ ಹಾಡುಗಳು ಅದ್ಭುತ

    ಮುಂಬೈನಿಂದ ಅಮಿತ್ ಖನ್ನಾ ಕಂಬನಿ

    ಮುಂಬೈನ ಮಾಧ್ಯಮ ನಾಟಕರಂಗದ ಚಿರಪರಿಚಿತ ಹೆಸರು ಅಮಿತ್ ಖನ್ನಾ ಅವರು ಬಾಲು ಅವರ

    ಬಾಲು ಶ್ರೀಲಂಕಾದಲ್ಲಿ ಜನಿಸಿದವರೆ ಗೊತ್ತೇ ಇರಲಿಲ್ಲ

    ಬಾಲು ಶ್ರೀಲಂಕಾದಲ್ಲಿ ಜನಿಸಿದವರೆ ಗೊತ್ತೇ ಇರಲಿಲ್ಲ ಎಂದು ಅಭಿಮಾನಿಯವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಅಭಿಮಾನಿಗಳಿಗೆ ಬಾಲು ಅವರ ಚಿತ್ರಗಳ ನೆನಪು

    ಅಭಿಮಾನಿಗಳಿಗೆ ಬಾಲು ಅವರ ಚಿತ್ರಗಳ ನೆನಪು ಎಂದಿಗೂ ಮಾಸದು

    ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವೀಟ್

    ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಬಾಲು ಮಹೇಂದ್ರ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

    ಸಂಗೀತಗಾರ ಎ.ಆರ್ ರೆಹಮಾನ್ ಕಂಬನಿ

    ಸಂಗೀತಗಾರ ಎ.ಆರ್ ರೆಹಮಾನ್ ಕಂಬನಿ

    ಸಂಗೀತಗಾರ ಎ.ಆರ್ ರೆಹಮಾನ್ ಕಂಬನಿ ಸುರಿಸಿದ್ದು ಹೀಗೆ

    Dear Balu Mahendra Sir Thank you for being an inspiring visual poet, for directing such life changing Tamil movies......You have certainly been an inspiring stepping stone of creativity for many others who came later... May God bless your soul!

    ನಿರ್ದೇಶಕ ಸೆಲ್ವರಾಘವನ್ ಟ್ವೀಟ್

    ನಿರ್ದೇಶಕ ಸೆಲ್ವರಾಘವನ್ ಟ್ವೀಟ್ ಮಾಡಿ ನನಗೆ ಸ್ಫೂರ್ತಿಯಾಗಿದ್ದರು ಎಂದಿದ್ದಾರೆ.

    ಶ್ರೀದೇವಿ ಬೋನಿ ಕಪೂರ್ ಕಂಬನಿ

    ಸದ್ಮಾ ಚಿತ್ರದಲ್ಲಿ ಅದ್ಭುತ ಚಿತ್ರ ಎಂದಿಗೂ ಸಿನಿರಸಿಕರು ಮರೆಯುವುದಿಲ್ಲ. ಸಿನಿ ದಿಗ್ಗಜ ಬಾಲು ಅವರಿಗೆ ನನ್ನ ನಮನ

    English summary
    Indian filmmaker, screenwriter, editor and cinematographer Balu Mahendran. breathed his last today at a private hospital in Chennai. The ace director who had recently made his on screen debut with 'Thalaimuraigal' . Here are the condolence messages from Social Media
    Thursday, February 13, 2014, 17:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X