»   » 'ಸಿದ್ದಾರ್ಥ' ಬಳಿಕ ಕಿಚ್ಚನ ಚಿತ್ರಕ್ಕೆ 'ಮಿಲನ' ಪ್ರಕಾಶ್ ರೆಡಿ

'ಸಿದ್ದಾರ್ಥ' ಬಳಿಕ ಕಿಚ್ಚನ ಚಿತ್ರಕ್ಕೆ 'ಮಿಲನ' ಪ್ರಕಾಶ್ ರೆಡಿ

Posted By:
Subscribe to Filmibeat Kannada

'ಸಿದ್ದಾರ್ಥ' ಸಿನಿಮಾ ರಿಲೀಸ್ ಆಯ್ತು. ಒಂದು ವರ್ಷದಿಂದ ಪಟ್ಟ ಪರಿಶ್ರಮ ಫಲಿಸಿತು. ಕೊಂಚ ಗ್ಯಾಪ್ ನಂತ್ರ 'ಸಿದ್ದಾರ್ಥ' ಚಿತ್ರವನ್ನ ತೆರೆಗೆ ತಂದ 'ಮಿಲನ' ಪ್ರಕಾಶ್ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಸದಭಿರುಚಿಯ ಚಿತ್ರಗಳ ಮೂಲಕ ಸತತ ಹಿಟ್ ಚಿತ್ರಗಳನ್ನ ನೀಡುತ್ತಿರುವ ಪ್ರಕಾಶ್, ಮುಂದೆ ಯಾವ ಸಿನಿಮಾ ಮಾಡುತ್ತಾರೆ?

ಈ ಪ್ರಶ್ನೆಗೆ ಉತ್ತರ ಇದೀಗ ಸಿಕ್ಕದೆ. ಮೂಲಗಳ ಪ್ರಕಾರ, 'ಮಿಲನ' ಪ್ರಕಾಶ್ ಈಗಾಗಲೇ ಸ್ಕ್ರಿಪ್ ಒಂದನ್ನ ರೆಡಿಮಾಡಿದ್ದಾರೆ. ಒಂದು ಸೂಪರ್ ಡ್ಯೂಪರ್ ಆಕ್ಷನ್ ರೋಮ್ಯಾಂಟಿಕ್ ಲವ್ ಸ್ಟೋರಿಯನ್ನ ತೆರೆಗೆ ತರುವುದಕ್ಕೆ ಪ್ರಕಾಶ್ ಸಜ್ಜಾಗಿದ್ದಾರಂತೆ.

Confirmed: Kiccha Sudeep in Milana Prakash's directorial Next

ಹಾಗಾದ್ರೆ, ಆ ಚಿತ್ರಕ್ಕೆ ಹೀರೋ ಯಾರಾಗಬಹುದು ಹೇಳಿ..? ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ಕಿಚ್ಚ ಸುದೀಪ್! ನಿಮಗಿದು ಆಶ್ಚರ್ಯ ಅನಿಸಿದರೂ, ಬಾಯಿಂದ ಬಾಯಿಗೆ ಹರಿದಾಡುತ್ತಿರುವ ಮಾತಿನ ಪ್ರಕಾರ ಸುದೀಪ್ ಗಾಗಿ ಒಂದು ಚಿತ್ರವನ್ನ 'ಮಿಲನ' ಪ್ರಕಾಶ್ ನಿರ್ದೇಶನ ಮಾಡುತ್ತಾರಂತೆ.

'ರನ್ನ' ಚಿತ್ರದಲ್ಲಿ ಬಿಜಿಯಾಗಿರುವ ಸುದೀಪ್, ಆಗಲೇ ಪ್ರಕಾಶ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಎಸ್.ಆರ್.ವಿ ಪ್ರೊಡಕ್ಷನ್ಸ್ ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಈ ಹಿಂದೆ 'ಆಕ್ಸಿಡೆಂಟ್' ಚಿತ್ರವನ್ನ ನಿರ್ಮಿಸಿದ್ದ ರಘುನಾಥ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. [ಸುದೀಪ್ ಹೊಸ ಚಿತ್ರಕ್ಕೆ ಮಿಲನ ಪ್ರಕಾಶ್ ಆಕ್ಷನ್ ಕಟ್]

'ರನ್ನ' ಮುಗಿದ ಬಳಿಕ ಸುದೀಪ್ ಈ ಚಿತ್ರಕ್ಕೆ ಚಾಲನೆ ನೀಡುತ್ತಾರೆ ಅಂತ ಹೇಳಲಾಗ್ತಿದೆ. ಅಲ್ಲಿಗೆ, ಅಣ್ಣಾವ್ರ ಕುಟುಂಬದೊಂದಿಗೆ ಮತ್ತೆ ಕಿಚ್ಚ ಸುದೀಪ್ 'ಕುಚ್ಚಿಕು ಕುಚ್ಚಿಕು' ಆಗುವುದು ಖಂಡಿತ. ಹಾಗೆ, ಒಂದೊಳ್ಳೆ ಸ್ವಮೇಕ್ ಚಿತ್ರದಲ್ಲಿ ಸುದೀಪ್ ಎಲ್ಲರನ್ನ ರಂಜಿಸುವುದು ಖಚಿತ. (ಫಿಲ್ಮಿಬೀಟ್ ಕನ್ನಡ)

English summary
After Siddhartha, Director Prakash of Milana fame is gearing up for next project. According to the reports, Kiccha Sudeep will be roped in for Milana Prakash's directorial Next.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada