For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ' ಪುನೀತ್ ರವರ ಯುವರಾಣಿ 'ಇವರೇ'..!

  By Harshitha
  |

  ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ 'ದೊಡ್ಮನೆ ಹುಡುಗ' ಮತ್ತು 'ಚಕ್ರವ್ಯೂಹ' ಚಿತ್ರಗಳ ಚಿತ್ರೀಕರಣ ಮುಗಿದ ಕೂಡಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ರಾಜಕುಮಾರ'ನ ಪಟ್ಟಕ್ಕೇರಲಿದ್ದಾರೆ.

  ರಾಕಿಂಗ್ ಸ್ಟಾರ್ ಯಶ್ ಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಯಂತಹ ಬಿಗ್ ಹಿಟ್ ಕೊಟ್ಟಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಗ ಪುನೀತ್ ರಾಜ್ ಕುಮಾರ್ ರನ್ನ 'ರಾಜಕುಮಾರ' ಮಾಡಲು ಹೊರಟಿದ್ದಾರೆ.

  ಈಗಾಗಲೇ 'ರಾಜಕುಮಾರ' ಚಿತ್ರದ ಫೋಟೋಶೂಟ್ ನಡೆದಿದ್ದು, 'ಕಸ್ತೂರಿ ನಿವಾಸ' ಚಿತ್ರದ ವರನಟ ಡಾ.ರಾಜ್ ಕುಮಾರ್ ಗೆಟಪ್ ನಲ್ಲಿ ಪುನೀತ್ ಮಿಂಚಿರುವುದನ್ನ ನೀವೆಲ್ಲಾ ನೋಡಿದ್ದೀರಾ. ['ರಾಜಕುಮಾರ'ನ ಜೊತೆ ಡ್ಯುಯೆಟ್ ಹಾಡೋ ರಾಣಿ ಯಾರು ಗೊತ್ತಾ?]

  ಕೆಲವೇ ದಿನಗಳಲ್ಲಿ 'ರಾಜಕುಮಾರ' ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದ್ದು, 'ಯುವ ರಾಣಿ'ಯ ಆಯ್ಕೆ ಆಗಿದೆ. ಮುಂದೆ ಓದಿ.....[ಪ್ರಿಯಾ ಆನಂದ್ ಫೋಟೋ ಗ್ಯಾಲರಿ]

  'ರಾಜಕುಮಾರ'ನ ರಾಣಿ ಯಾರು?

  'ರಾಜಕುಮಾರ'ನ ರಾಣಿ ಯಾರು?

  'ರಾಜಕುಮಾರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆ ಹೀರೋಯಿನ್ ಸೆಲೆಕ್ಟ್ ಆಗಿದ್ದಾರೆ. ಅದು ಯಾರು? ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ....[ಪ್ರಿಯಾ ಆನಂದ್ ಫೋಟೋ ಗ್ಯಾಲರಿ]

  'ರಾಣಿ' ಪ್ರಿಯಾ ಆನಂದ್

  'ರಾಣಿ' ಪ್ರಿಯಾ ಆನಂದ್

  ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಮಿಂಚಿರುವ ನಟಿ ಪ್ರಿಯಾ ಆನಂದ್ 'ರಾಜಕುಮಾರ' ಚಿತ್ರದ ನಾಯಕಿ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ.

  ಯಾರು ಈ ಪ್ರಿಯಾ ಆನಂದ್?

  ಯಾರು ಈ ಪ್ರಿಯಾ ಆನಂದ್?

  ಚೆನ್ನೈನಲ್ಲಿ ಹುಟ್ಟಿ ಬೆಳೆದ ಪ್ರಿಯಾ ಆನಂದ್ ಪತ್ರಿಕೋದ್ಯಮದಲ್ಲಿ ಪದವೀಧರೆ.

  ಮೊದಲು ಮಾಡೆಲಿಂಗ್

  ಮೊದಲು ಮಾಡೆಲಿಂಗ್

  ವಿದ್ಯಾಭ್ಯಾಸ ಮುಗಿದ ನಂತರ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಪ್ರಿಯಾ ಆನಂದ್, Cadbury Dairy Milk, Prince Jewellery, Nutrine Maha Lacto ಆಡ್ ಗಳಲ್ಲಿ ಮಿಂಚಿದರು.

  ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾ

  ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾ

  'ವಾಮನನ್' ಚಿತ್ರದ ಮೂಲಕ ಕಾಲಿವುಡ್ ಬೆಳ್ಳಿ ಪರದೆ ಮೇಲೆ ಮಿನುಗಿದ ಪ್ರಿಯಾ ಆನಂದ್, ನಂತರ ಟಾಲಿವುಡ್ ಹಾಗೂ ಬಾಲಿವುಡ್ ಗೂ ಲಗ್ಗೆ ಇಟ್ಟರು.

  ಈಗ ಸ್ಯಾಂಡಲ್ ವುಡ್ ಗೆ!

  ಈಗ ಸ್ಯಾಂಡಲ್ ವುಡ್ ಗೆ!

  ಸದ್ಯಕ್ಕೆ ಮಾಲಿವುಡ್ ಗೂ ಕಾಲಿಟ್ಟಿರುವ ಪ್ರಿಯಾ ಆನಂದ್, ಸ್ಯಾಂಡಲ್ ವುಡ್ ಕಡೆಗೂ ಮುಖ ಮಾಡಿದ್ದಾರೆ.

  ಏನಂತಾರೆ ಪ್ರಿಯಾ ಆನಂದ್?

  ಏನಂತಾರೆ ಪ್ರಿಯಾ ಆನಂದ್?

  ''ನನಗೆ ಕನ್ನಡ ಭಾಷೆ ಬರಲ್ಲ. ಆದ್ರೆ, ನಿರ್ದೇಶಕರು ಸಿನಿಮಾ ಸೆಟ್ ನಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದಾರೆ. 30 ದಿನ ನಾನು ಶೂಟಿಂಗ್ ಮಾಡುವುದರಿಂದ ಭಾಷೆ ಕಲಿಯಲು ಕಷ್ಟವಾಗುವುದಿಲ್ಲ. ಕನ್ನಡ ಸಿನಿಮಾ ಮಾಡುತ್ತಿರುವುದರ ಬಗ್ಗೆ ಖುಷಿ ಇದೆ'' ಅಂತಾರೆ ನಟಿ ಪ್ರಿಯಾ ಆನಂದ್.

  ಪ್ರಿಯಾ ಆನಂದ್ ಪಾತ್ರವೇನು?

  ಪ್ರಿಯಾ ಆನಂದ್ ಪಾತ್ರವೇನು?

  'ರಾಜಕುಮಾರ' ಚಿತ್ರದಲ್ಲಿ ಪುನೀತ್ ಹಾಗೂ ಪ್ರಿಯಾ ಆನಂದ್ ರವರ ಪಾತ್ರದ ಬಗ್ಗೆ ನಿರ್ದೇಶಕರು ಗುಟ್ಟು ಬಿಟ್ಟುಕೊಟ್ಟಿಲ್ಲ.

  English summary
  Tamil Actress Priya Anand is roped into play lead opposite Kannada Actor Puneeth Rajkumar in Kannada Movie 'Rajakumara'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X