»   » 'ಮಂಡ್ಯ ಟು ಮುಂಬೈ' ನಾಯಕಿಯರ ಬೀದಿ ರಂಪಾಟಕ್ಕೆ ಕಾರಣವೇನು!

'ಮಂಡ್ಯ ಟು ಮುಂಬೈ' ನಾಯಕಿಯರ ಬೀದಿ ರಂಪಾಟಕ್ಕೆ ಕಾರಣವೇನು!

Written By:
Subscribe to Filmibeat Kannada

ರಾಕೇಶ್ ಅಡಿಗ ಅಭಿನಯದ 'ಮಂಡ್ಯ ಟು ಮುಂಬೈ' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಆದ್ರೆ, ಬಿಡುಗಡೆಗೆ ಮುಂಚೆ ಈ ಚಿತ್ರದ ನಾಯಕಿಯರಿಬ್ಬರು ಬಹಿರಂಗವಾಗಿ ವಿವಾದ ಹುಟ್ಟುಹಾಕಿದ್ದಾರೆ.

'ಮಂಡ್ಯ ಟು ಮುಂಬೈ' ಸಿನಿಮಾದಲ್ಲಿ ಅಮೃತರಾವ್ ಹಾಗೂ ಸಂಜನಾ ಗಲ್ರಾನಿ ಇಬ್ಬರು ನಾಯಕಿಯರು ಅಭಿನಯಿಸಿದ್ದಾರೆ. ಈ ಇಬ್ಬರಲ್ಲಿ ಅಮೃತಾ ರಾವ್ ಚಿತ್ರದ ಮುಖ್ಯ ನಾಯಕಿಯಾಗಿದ್ದು, ಸಂಜನಾ ಅವರು ಅಮೃತಾ ಅವರಿಗೆ ಸಹೋದರಿಯಾಗಿ ಕಾಣಿಸಿಕೊಂಡಿದ್ದಾರೆ.[ಈ ವಾರದಿಂದ ಸ್ಯಾಂಡಲ್ ವುಡ್ ನಲ್ಲಿ 'ಮಂಡ್ಯ' ಹುಡುಗರ ದರ್ಬಾರ್!]

ಆದ್ರೆ, ಚಿತ್ರದ ಪ್ರಮೋಷನ್ ಹಾಗೂ ಪೋಸ್ಟರ್ ಗಳಲೆಲ್ಲ ಸಂಜನಾ ಅವರನ್ನೆ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಅವರು ಮಾಡಿರುವುದು ಕೇವಲ ಒಂದು ವೇಶ್ಯೆ ಪಾತ್ರ. ನಾನು ನಿಜವಾದ ನಾಯಕಿ ಎಂದು ನಟಿ ಅಮೃತಾ ರಾವ್, ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು. ಅಷ್ಟೇ ಅಲ್ಲದೆ ಫೇಸ್ ಬುಕ್ ನಲ್ಲಿ ಈ ಬಗ್ಗೆ ಹೇಳಿಕೆಯನ್ನ ಕೂಡ ಬರೆದುಕೊಂಡಿದ್ದರು.

ಇದರಿಂದ ಕೋಪಗೊಂಡ ಸಂಜನಾ ಈಗ, ಅಮೃತಾ ರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮೃತಾ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅಷ್ಟಕ್ಕೂ ಈ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಅನ್ನೋ ಮಾಹಿತಿ ಇಲ್ಲಿದೆ ನೋಡಿ....

ಸಂಜನಾ ವಿರುದ್ಧ ಅಮೃತ ರಾವ್ ವಾಗ್ದಾಳಿ!

'ಮಂಡ್ಯು ಟು ಮುಂಬೈ' ಚಿತ್ರದ ನಾಯಕಿ ಅಮೃತರಾವ್, ಸಂಜನಾ ಗಿರ್ಲಾನಿ ವಿರುದ್ಧ ಮಾತಿನ ಸಮರ ನಡೆಸಿದ್ದಾರೆ. ಚಿತ್ರದ ಪ್ರಮೋಷನ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಜನಾ ಅವರನ್ನ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಅವರು ಚಿತ್ರದ ನಾಯಕಿಯಲ್ಲ. ನಾನು ಚಿತ್ರದ ನಾಯಕಿ ಎಂದು ಸಂಜನಾ ವಿರುದ್ಧ ಕಿಡಿಕಾರಿದ್ದಾರೆ..['ಮಂಡ್ಯ' ದಿಂದ 'ಮುಂಬೈ' ಹೊರಟ 'ಮಂಡ್ಯ' ಹೈಕಳು]

ಅಮೃತಾ ಆರೋಪವೇನು?

'ಮಂಡ್ಯ ಟು ಮುಂಬೈ' ಚಿತ್ರದಲ್ಲಿ ವೇಶ್ಯೆಯ ಪಾತ್ರ. ಅಸಲಿ ನಾಯಕಿ ನಾನು. ಆದರೂ ಸಂಜನಾ ಅವರನ್ನು ಪೋಸ್ಟರ್ ಗಳಲ್ಲಿ ತೋರಿಸಲಾಗುತ್ತಿದೆ. ವೇಶ್ಯೆ ಪಾತ್ರಧಾರಿಯನ್ನು ಹೆಚ್ಚಾಗಿ ಚಿತ್ರದಲ್ಲಿ ತೋರಿಸಲಾಗಿದೆ. ತನ್ನನ್ನು ಹೆಚ್ಚಾಗಿ ಪ್ರತಿಬಿಂಬಿಸುತ್ತಿಲ್ಲ. ಸಂಜನಾ ಕರ್ನಾಟಕದವರಲ್ಲ. ಮುಂಬೈಗೆ ಕಳುಹಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಜನಾ ಹೇಳಿದ್ದೇನು?

ಪೋಸ್ಟರ್ ಗಳಲ್ಲಿ ಯಾರು ಇರಬೇಕು, ಯಾರು ಇರಬಾರದು ಎಂಬ ವಿಷಯವನ್ನು ನಿರ್ಧರಿಸುವುದು ಚಿತ್ರದ ತಂಡ. ನಾನಲ್ಲ. ಅವರಿಗೆ ಯಾರು ಬೇಕು ಎಂದನಿಸುತ್ತದೋ ಅವರನ್ನು ಪೋಸ್ಟರ್ ನಲ್ಲಿ ಹಾಕುತ್ತಾರೆ. ನಾನು ಹೋಗಿ ನನ್ನ ಫೋಟೋ ಹಾಕಿ ಎಂದು ಇಷ್ಟರವರೆಗೆ ಹೇಳಿಲ್ಲ ಎಂದರು.

ಹೊಸ ಕಲಾವಿದೆ, ಡಿಗ್ನಿಟಿ ಇರಬೇಕು!

ಅಮೃತ ಹೊಸ ಕಲಾವಿದೆ. ಸ್ವಲ್ಪ ಡಿಗ್ನಿಟಿ ಇರಬೇಕು. ಚಿತ್ರದ ಪೋಸ್ಟರ್ ಗಳಲ್ಲಿ ನನ್ನ ಫೋಟೋ ಹಾಕಿದರು ಎಂಬ ಕಾರಣಕ್ಕೆ ಹಾಗೆಲ್ಲಾ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ' ಎನ್ನುತ್ತಾರೆ ಸಂಜನಾ. ಪೋಸ್ಟರ್ ನಲ್ಲಿ ಮಿಂಚುವುದಕ್ಕಿಂತ, ಕಷ್ಟಪಟ್ಟು ಕೆಲಸ ಮಾಡಿ ಮುಂದುವರೆಯಬೇಕು ಎಂದು ಸಂಜನಾ, ಅಮೃತಾ ಬಗ್ಗೆ ಮಾತನಾಡಿದ್ದರು.

ಮಾತಿಗೆ ಮಾತು ಬೆಳೆದು ಜಗಳ!

ಪಬ್ಲಿಕ್ ಟಿವಿಯಲ್ಲಿ ಪರಸ್ಪರ ದೂರವಾಣಿ ಸಂಪರ್ಕದಲ್ಲಿ ಮಾತನಾಡಿದ ಅಮೃತಾ ಹಾಗೂ ಸಂಜನಾ ಇಬ್ಬರು ಮಾತಿನ ಸಮರ ನಡೆಸಿದರು. ''ಅಮೃತಾ ರಾವ್ ಅವರು ಚೀಪ್ ಪಬ್ಲಿಸಿಟಿ ಪಡೆದುಕೊಳ್ತಿದ್ದಾರೆ'' ಎಂದು ಸಂಜನಾ ಆರೋಪಿಸಿದ್ರೆ, ಅಮೃತಾ ರಾವ್ ಅವರು, ಸಂಜನಾ ವಿರುದ್ದ ಗರಂ ಆದರು. ''ನೀವು ಸೀನಿಯರ್ ಆಗಿರಬಹುದು ಆದ್ರೆ, ಗೌರವಾಗಿ ಮಾತನಾಡಿದರೆ, ನಾವು ನಿಮಗೆ ಗೌರವ ಕೊಡುತ್ತೇವೆ. ಇಲ್ಲವಾದಲ್ಲಿ ನಾವು ನಿಮ್ಮ ತರನೇ ಮಾತನಾಡಬೇಕಾಗುತ್ತೆ'' ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಾನೂನು ಹೋರಾಟಕ್ಕೆ ಸಂಜನಾ ನಿರ್ಧಾರ!

ಫೇಸ್ ಬುಕ್ ನಲ್ಲಿ ಅಮೃತರಾವ್ ಅವರು, ನನ್ನ ಬಗ್ಗೆ ಕೀಳು ಮಟ್ಟದ ಹೇಳಿಕೆಯನ್ನ ಬರೆದುಕೊಂಡಿದ್ದಾರೆ. ಹೀಗಾಗಿ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಸಂಜನಾ ಪಬ್ಲಿಕ್ ಟಿವಿಗೆ ದೂರುವಾಣಿ ಮೂಲಕ ಹೇಳಿಕೆ ಕೊಟ್ಟಿದ್ದಾರೆ.

ಮುಂದೇನು?

'ಮಂಡ್ಯ ಟು ಮುಂಬೈ' ಈ ವಾರ ರಿಲೀಸ್ ಆಗುತ್ತಿದೆ. ಅಂದ್ಹಾಗೆ, ಈ ಚಿತ್ರದ ಶೇ 60ರಷ್ಟು ಭಾಗವನ್ನ ವಾರ್ಧಿಕ್ ಜೋಸೆಫ್ ನಿರ್ದೇಶಿಸಿದ್ದಾರೆ. ಇನ್ನುಳಿದ ಭಾಗವನ್ನ ರಾಜಶೇಖರ್ ಪೂರ್ಣಗೊಳಿಸಿದ್ದಾರೆ. ರಾಜಶೇಖರ್ ಈ ಚಿತ್ರದ ಕಲಾವಿದರಲ್ಲಿ ಕೂಡ ಒಬ್ಬರಾಗಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನೀಲದುರ್ಗ ಪರಮೇಶ್ವರಿ ಕಂಬೈನ್ಸ್ ಅಡಿಯಲ್ಲಿ ಜ್ಯೋತಿರ್ಲಿಂಗಂ ಹಾಗೂ ಪ್ರಕಾಶ್ ಬಂಡವಾಳ ಹೂಡಿದ್ದಾರೆ.

English summary
'Mandya to Mumbai' heroines Sanjana and Amrutha Rao now make new controvercy between them. Here is what happened both of them.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada