For Quick Alerts
  ALLOW NOTIFICATIONS  
  For Daily Alerts

  ಈ ವಾರದಿಂದ ಸ್ಯಾಂಡಲ್ ವುಡ್ ನಲ್ಲಿ 'ಮಂಡ್ಯ' ಹುಡುಗರ ದರ್ಬಾರ್!

  By Bharath Kumar
  |

  'ಮಂಡ್ಯ ಟು ಮುಂಬೈ'.....ಕಳೆದ ಎರಡು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡುತ್ತಿದ್ದ ಚಿತ್ರ ಕೊನೆಗೂ ತೆರೆಮೇಲೆ ಬರಲು ಸಜ್ಜಾಗಿದೆ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ 'ಮಂಡ್ಯ ಟು ಮುಂಬೈ ಈ ವಾರದಿಂದ ಚಿತ್ರಮಂದಿರಗಳಲ್ಲಿ ಅಬ್ಬರ ಶುರು ಮಾಡಲಿದೆ.

  'ಆಕ್ಷನ್-ಥ್ರಿಲ್ಲರ್, ರೋಮ್ಯಾನ್ಸ್, ಕಾಮಿಡಿ ಎಲಿಮೆಂಟ್ಸ್ ಗಳಿಂದ ಪ್ರೇಕ್ಷಕರ ಮನಸೂರೆಗೊಳಿಸಿರುವ ಈ ಚಿತ್ರ ಹಲವು ವಿಷಯಗಳಿಗೆ ವಿಶೇಷವೆನಿಸಿಕೊಂಡಿದೆ. 'ಮಂಡ್ಯ ಹುಡುಗರು, ಭಯ ಅನ್ನೋದೇ ಇಲ್ಲ, ಕಣ್ಣ್ಮುಚ್ಚಿ ಕಣ್ಣು ತೆಗೆಯೋವಷ್ಟರಲ್ಲಿ ದೇಹ ಇರತ್ತೆ. ಜೀವ ಇರೋದಿಲ್ಲಾ' ಎಂದು ಕಿಚ್ಚ ಸುದೀಪ್ ಅವರ ವಾಯ್ಸ್ ನಲ್ಲಿ ಮೂಡಿಬಂದಿರುವ ಡೈಲಾಗ್ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.['ಮಂಡ್ಯ' ದಿಂದ 'ಮುಂಬೈ' ಹೊರಟ 'ಮಂಡ್ಯ' ಹೈಕಳು]

  ಈ ಎಲ್ಲ ನಿರೀಕ್ಷೆಗಳಿಗೂ ಈ ವಾರ ಬ್ರೇಕ್ ಬೀಳಲಿದ್ದು, ಅದಕ್ಕೂ ಮುಂಚೆ 'ಮಂಡ್ಯ ಟು ಮುಂಬೈ' ಚಿತ್ರದ ಕೆಲವು ವಿಶೇಷತೆಗಳೇನು ಅಂತ ಇಲ್ಲಿದೆ ನೋಡಿ...

  ಈ ವಾರದಿಂದ ಚಿತ್ರಮಂದಿರದಲ್ಲಿ 'ಮಂಡ್ಯ ಟು ಮುಂಬೈ'!

  ಈ ವಾರದಿಂದ ಚಿತ್ರಮಂದಿರದಲ್ಲಿ 'ಮಂಡ್ಯ ಟು ಮುಂಬೈ'!

  ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿರುವ ‘ಮಂಡ್ಯ ಟು ಮುಂಬೈ' ಚಿತ್ರತಂಡಕ್ಕೆ, ‘ಯು/ಎ' ಪ್ರಮಾಣಪತ್ರ ಸಿಕ್ಕಿದ್ದು, ಈ ವಾರ ತೆರೆಮೇಲೆ ಬರಲಿದೆ. 2016ಕ್ಕೆ ಗುಡ್ ಬೈ ಹೇಳಿ, ಹೊಸ ವರ್ಷದ ಸ್ವಾಗತಕ್ಕಾಗಿ ಕಾಯತ್ತಿರುವ ಸ್ಯಾಂಡಲ್ ವುಡ್ ಮಂದಿಗೆ ಡಿಸೆಂಬರ್ 30ರಂದು 'ಮಂಡ್ಯ ಟು ಮುಂಬೈ' ಚಿತ್ರವನ್ನ ನೋಡವ ಅವಕಾಶ ಸಿಕ್ಕಿದೆ.

  ರಾಜಶೇಖರ್ ಆಕ್ಷನ್ ಕಟ್!

  ರಾಜಶೇಖರ್ ಆಕ್ಷನ್ ಕಟ್!

  ಅಂದ್ಹಾಗೆ, ಈ ಚಿತ್ರದ ಶೇ 60ರಷ್ಟು ಭಾಗವನ್ನ ವಾರ್ಧಿಕ್ ಜೋಸೆಫ್ ನಿರ್ದೇಶಿಸಿದ್ದಾರೆ. ಇನ್ನುಳಿದ ಭಾಗವನ್ನ ರಾಜಶೇಖರ್ ಪೂರ್ಣಗೊಳಿಸಿದ್ದಾರೆ. ರಾಜಶೇಖರ್ ಈ ಚಿತ್ರದ ಕಲಾವಿದರಲ್ಲಿ ಕೂಡ ಒಬ್ಬರಾಗಿದ್ದಾರೆ.

  ರಾಕೇಶ್ ಅಡಿಗ ಮತ್ತು ಇತರರು...

  ರಾಕೇಶ್ ಅಡಿಗ ಮತ್ತು ಇತರರು...

  'ಮಂಡ್ಯ ಟು ಮುಂಬೈ' ಚಿತ್ರದಲ್ಲಿ ರಾಕೇಶ್ ಅಡಿಗ ಹಳ್ಳಿಯ ಮುಗ್ಧ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಮೃತಾ ರಾವ್ ಹಾಗೂ ಸಂಜನಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಮಾಧುರಿ ಇಟಗಿ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು, ಉಳಿದಂತೆ ಚಿತ್ರದಲ್ಲಿ ನವೀನ್ ಕೃಷ್ಣ, ಸಾಧುಕೋಕಿಲಾ, ತಿಲಕ್ ಶೇಖರ್, ಪೆಟ್ರೋಲ್ ಪ್ರಸನ್ನ, ಮೈಕೋ ನಾಗರಾಜ್, ಚಿರಾಗ್ ರಾಜ್, ಚಂದನ್ ವಿಜಯ್, ತ್ರಿಪಟಿ ಗಣೇಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

  ತೆಲುಗಿನ ‘ರೇಣುಗುಂಟಾ’ದ ರೀಮೇಕ್!

  ತೆಲುಗಿನ ‘ರೇಣುಗುಂಟಾ’ದ ರೀಮೇಕ್!

  'ಮಂಡ್ಯ ಟು ಮುಂಬೈ' ತೆಲುಗಿನ ‘ರೇಣುಗುಂಟಾ' ಚಿತ್ರದ ರೀಮೇಕ್. ಯಾವುದೋ ತಪ್ಪಿನಿಂದ ಯುವಕರ ತಂಡವೊಂದು ಮುಂಬೈಗೆ ಪರಾರಿಯಾಗಲು ಯತ್ನಿಸಿದಾಗ ನಡೆಯುವ ಘಟನೆಗಳೇ ಕಥಾವಸ್ತು.

  ಕಿಚ್ಚ ಸುದೀಪ್ ವಾಯ್ಸ್!

  ಕಿಚ್ಚ ಸುದೀಪ್ ವಾಯ್ಸ್!

  'ಮಂಡ್ಯ ಟು ಮುಂಬೈ' ಚಿತ್ರಕ್ಕೆ ಕಿಚ್ಚ ಸುದೀಪ್ ಕಂಠದಾನ ಮಾಡಿದ್ದಾರೆ. ಚಿತ್ರದ ಆರಂಭದಲ್ಲಿ ಸುದೀಪ್ ಧ್ವನಿ ನೀಡಿದ್ದು, ಪಾತ್ರಗಳ ಪರಿಚಯದ ಜೊತೆಗೆ ಕಥೆಗೆ ಲೀಡ್ ಕೂಡ ನೀಡಲಿದ್ದಾರಂತೆ. ಅಷ್ಟೇ ಅಲ್ಲ ಚಿತ್ರದ ಒಂದು ಹಾಡಿಗೂ ದ್ವನಿಯಾಗಿದ್ದು, ಈಗಾಗಲೇ ಕಿಚ್ಚ ಹಾಡಿರುವ 'ಡುಯೋಲಾ ಡುಯೋಲಾ' ಹಾಡು ಸೂಪರ್ ಹಿಟ್ ಆಗಿದೆ.

  ಚರಣ್ ರಾಜ್ ಮ್ಯೂಸಿಕ್!

  ಚರಣ್ ರಾಜ್ ಮ್ಯೂಸಿಕ್!

  ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನೀಲದುರ್ಗ ಪರಮೇಶ್ವರಿ ಕಂಬೈನ್ಸ್ ಅಡಿಯಲ್ಲಿ ಜ್ಯೋತಿರ್ಲಿಂಗಂ ಹಾಗೂ ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಉಳಿದಂತೆ ದರ್ಶನ್ ಕನಕ ಅವರ ಛಾಯಗ್ರಹಣ ಹಾಗೂ ಮಾರೀಶ್ ಅವರ ಸಂಕಲನ ಚಿತ್ರಕ್ಕಿದೆ.

  ವರ್ಷಾಂತ್ಯಕ್ಕೆ ಮಸ್ತ್ ಮನರಂಜನೆ!

  ವರ್ಷಾಂತ್ಯಕ್ಕೆ ಮಸ್ತ್ ಮನರಂಜನೆ!

  ಈ ಮೂಲಕ ಈ ವಾರ ತೆರೆಕಾಣುತ್ತಿರುವ ಮೂರ್ನಾಲ್ಕು ಚಿತ್ರಗಳ ಪೈಕಿ ಮಂಡ್ಯ ಟು ಮುಂಬೈ ಕೂಡ ಒಂದಾಗಿದ್ದು, ವರ್ಷಾಂತ್ಯದ ಸಂಭ್ರಮದಲ್ಲಿರುವ ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳಿಗೆ ಮಸ್ತ್ ಮನರಂಜನೆಯಾಗುವುರದಲ್ಲಿ ಯಾವುದೇ ಅನುಮಾನವಿಲ್ಲ.

  English summary
  Mandya To Mumbai has Releasing on December 30th. the movie remake of Tamil film, Renigunta.. Directed by Vaardhik Joseph, the film has Sanjana Galrani, Amrutha Rao, Sadhu Kokila and Rakesh Adiga in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X