»   » ವೆಂಕಟ್ ಅಭಿಮಾನಿಗಳೇ, ಅಣ್ಣ ಮತ್ತೆ ಬಿಗ್ ಮನೆಗೆ ಹೋಗ್ತಾರೆ

ವೆಂಕಟ್ ಅಭಿಮಾನಿಗಳೇ, ಅಣ್ಣ ಮತ್ತೆ ಬಿಗ್ ಮನೆಗೆ ಹೋಗ್ತಾರೆ

Posted By:
Subscribe to Filmibeat Kannada

ಕೇವಲ ಯೂಟ್ಯುಬ್ ಸ್ಟಾರ್ ಆಗಿದ್ದ ಪೈರಿಂಗ್ ಸ್ಟಾರ್ ವೆಂಕಟ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ಅಗಿ ಮೆರೆದರು. ಇದೀಗ ಅದೇ ವೆಂಕಟ್ ಮತ್ತೆ ಕನ್ನಡದ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ.

ಹೌದು ಹುಚ್ಚಾಟ-ರಂಪಾಟ ಮಾಡಿ ಮನೆಯಿಂದ ಹೊರಬಿದ್ದಿದ್ದ ವೆಂಕಟ್ ಅವರು ಇದೀಗ ಮತ್ತೆ ಕಿಚ್ಚನ ಅರಮನೆಗೆ ಕಾಲಿಡುತ್ತಿದ್ದಾರೆ. ಆದರೆ ಅಲ್ಲಿ ಸ್ಪರ್ಧಿ ಆಗಿ ಅಲ್ಲ. ಬದಲಾಗಿ ಒಂದು ದಿನದ ಮಟ್ಟಿಗೆ ಇರಲಿದ್ದಾರಂತೆ.['ಹುಚ್ಚ ವೆಂಕಟ್' ಸಿನಿಮಾ ಹೌಸ್ ಫುಲ್ ಓಡ್ತಿದೆ ಕಣ್ರೀ!]

Controversial actor-director Venkat says he is going to bigg boss again

ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಾಗಿ ಸ್ವತಃ ಫೈರಿಂಗ್ ಸ್ಟಾರ್ ವೆಂಕಟ್ ಅವರೇ ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಇದರಿಂದ ವೆಂಕಟ್ ಅಣ್ಣನ ಅಭಿಮಾನಿಗಳಿಗೆ ಮತ್ತೆ ಆನೆ ಬಲ ಬಂದಂತಾಗಿದೆ.

ಈ ಹಿಂದೆ ಸಂಗೀತಗಾರ ರವಿ ಮುರೂರು ಅವರಿಗೆ ಹಲ್ಲೆ ಮಾಡಿದ ಹಿನ್ನಲೆಯಲ್ಲಿ ಫೈರಿಂಗ್ ಸ್ಟಾರ್ ವೆಂಕಟ್ ಅವರು ಏಕಾಏಕಿ ಮನೆಯಿಂದ ಹೊರನಡೆದಿದ್ದರು.[ಈ ಹಾಡು ಕೇಳ್ಲೇಬೇಕು! ಇದು ಹುಚ್ಚ ವೆಂಕಟ್ ಆರ್ಡರ್!]

ಇದೀಗ ಒಂದು ದಿನದ ಮಟ್ಟಿಗೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ. ಆದರೆ ವೆಂಕಟ್ ಅವರು ಯಾವಾಗ ಮನೆಗೆ ಹೋಗುತ್ತಾರೆ, ಮತ್ತು ಮನೆಗೆ ಹೋಗುವ ದಿನಾಂಕ ಇನ್ನು ನಿಗದಿಯಾಗಿಲ್ಲ.

English summary
Bigg Boss Kannada 3: The ‘Bigg Boss' controversial actor-director Huccha Venkat says that he is going to bigg boss house again.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada